ಕರ್ನಾಟಕ

ಚಾಮರಾಜನಗರ; ಆಕ್ಸಿಜನ್​ ಸಿಗದೇ ಕೇವಲ ಮೂರು ಮಂದಿ ಸಾವನ್ನಪ್ಪಿದ್ದು, ಉಳಿದವರು ಇತರೆ ಕಾರಣಗಳಿಂದ ಸಾವನ್ನಪ್ಪಿದ್ದಾರೆ: ಸಚಿವ ಸುಧಾಕರ್

Pinterest LinkedIn Tumblr

ಚಾಮರಾಜನಗರ: ಜಿಲ್ಲೆಯಲ್ಲಿ ನಡೆದಿರುವ ದುರುಂತದಲ್ಲಿ ಆಕ್ಸಿಜನ್​ ಸಿಗದೇ ಸಾವನ್ನಪ್ಪಿದವರು ಕೇವಲ ಮೂವರು ಮಂದಿ ಇನ್ನುಳಿದ ಮಂದಿ ಇತರೆ ಕಾರಣಗಳಿಂದ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಸಚಿವ ಕೆ ಸುಧಾಕರ್​ ತಿಳಿಸಿದ್ದಾರೆ.

ಚಾಮರಾಜನಗರ ಆಸ್ಪತ್ರೆಗೆ ಭೇಟಿ ನೀಡಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಆಕ್ಸಿಜನ್​ ಸಿಗದೆ ಮೂವರು ಮಾತ್ರ ಸಾವನ್ನಪ್ಪಿದ್ದಾರೆ ಎಂದು ಚಾಮರಾಜನಗರ ಜಿಲ್ಲಾಡಳಿತ ನಮಗೆ ತಿಳಿಸಿದೆ. ಆಕ್ಸಿಜನ್​ ಕೊರತೆಯಿಂದ ತಡರಾತ್ರಿ 12ರಿಂದ ಬೆಳಗ್ಗೆ 4ರವರೆಗೆ 3 ಸಾವನ್ನಪ್ಪಿದ್ದು, ಉಳಿದವರೆಲ್ಲಾ ಕೊರೋನಾ ಲಕ್ಷಣದಿಂದ ಸಾವನ್ನಪ್ಪಿದ್ದಾರೆ. 24 ಗಂಟೆಯಲ್ಲಿ 24 ಸಾವು ಸಂಭವಿಸಿದ್ದು ದುಃಖಕರ. ಮೃತಪಟ್ಟವರ ಕುಟುಂಬಕ್ಕೆ ಸಂತಾಪ ಸಲ್ಲಿಸುತ್ತೇವೆ. ಸರ್ಕಾರ ಈ ಕುಟುಂಬಗಳ ಜೊತೆ ಇರುತ್ತದೆ. ಕುಟುಂಬಕ್ಕೆ ಪರಿಹಾರವನ್ನು ಸಿಎಂ ಘೋಷಿಸುತ್ತಾರೆ. ಘಟನೆ ಬೆಳಕಿಗೆ ಬರುತ್ತಿದ್ದಂತೆ ರಾತ್ರಿ 11ರಿಂದ ಅಧಿಕಾರಿಗಳ ಜತೆ ಸಂಪರ್ಕದಲ್ಲಿದ್ದೆ. ಬೆಳಗ್ಗಿನ ಜಾವ 3 ಗಂಟೆವರೆಗೆ ಈ ಕುರಿತು ಮಾಹಿತಿ ಪಡೆದಿದ್ದೇನೆ. ಈ ಜಿಲ್ಲಾಸ್ಪತ್ರೆಯಲ್ಲಿ 123 ಸೋಂಕಿತರು ಇದ್ದು, 14 ಸೋಂಕಿತರು ವೆಂಟಿಲೇಟರ್​ನಲ್ಲಿದ್ದಾರೆ. ಮಧ್ಯರಾತ್ರಿ 12ವರೆಗೆ 14 ಜನ ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಮಧ್ಯರಾತ್ರಿ 12ರಿಂದ 3ರವರೆಗೆ 3 ಜನ ಸಾವನ್ನಪ್ಪಿದ್ದು, ನಸುಕಿನ ಜಾವ 3ರಿಂದ 7ರವರೆಗೆ 7 ಜನರು ಸಾವನ್ನಪ್ಪಿದ್ದಾರೆ ಎಂದರು.

ಕಳೆದ 24 ಗಂಟೆಯಲ್ಲಿ ಜಿಲ್ಲೆಯಲ್ಲಿ 24 ಜನ ಸಾವನ್ನಪ್ಪಿರುವುದು ನಿಜಕ್ಕೂ ವಿಷಾದನೀಯ. ಪ್ರತಿಯೊಂದು ಜೀವಕ್ಕೂ ಬೆಲೆಯಿದೆ. ಎಲ್ಲಾ ಸಾವುಗಳು ಆಮ್ಲಜನಕದ ಕೊರತೆಯಿಂದ ಸಂಭವಿಸಿಲ್ಲ. ಕೆಲವು ಕೋಮ್ ಆರ್ಬಿಟಿಟಿ‌ ಕೇಸ್ ಗಳ ಸಹ ಇದೆ. 24 ಜನರಲ್ಲಿ ಆಮ್ಲಜನಕ‌ ಕೊರತೆಯಿಂದ ಸತ್ತವರ ತನಿಖೆ ಮಾಡುತ್ತಿದ್ದೆ. ಸರಿಯಾದ ವರದಿಯನ್ನ ಮೂರು ದಿನದಲ್ಲಿ ಕೊಡುವಂತೆ ರಾಜ್ಯ ಸರ್ಕಾರ ಸೂಚನೆ ನೀಡಿದೆ. ಶಿವಯೋಗಿ ಕಳಶ ಅವರನ್ನ ವಿಚಾರ ಅಧಿಕಾರನ್ನ ನೇಮಕ ಮಾಡಲಾಗಿದೆ. ಈ ಕುರಿತು ವರದಿ ಬರಲಿದೆ ಎಂದರು.

ನಾನು ಘಟನೆಯ ಬಗ್ಗೆ ವ್ಯಾಖ್ಯಾನ ಮಾಡುವುದಿಲ್ಲ. ಎಲ್ಲಾ ಜಿಲ್ಲೆಗಳ ಆಕ್ಸಿಜನ್​ ಕೊರತೆಯ ಬಗ್ಗೆ ನನಗೆ ಗೊತ್ತಿದೆ. 6 ಸಾವಿರ ಲೀ ಆಕ್ಸಿಜನ್ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿದೆ. ಆದರೆ ಚಾಮರಾಜನಗರ ಆಕ್ಸಿಜನ್ ರಿಫಿಲ್ ಮಾಡುವ ವ್ಯವಸ್ಥೆ ಇಲ್ಲ. ಮೈಸೂರಿನಿಂದ ಆಕ್ಸಿನ್ ಚಾಮರಾಜನಗರಕ್ಕೆ ಪೂರೈಕೆಯಾಗುತ್ತಿದೆ.ಮೈಸೂರಿನ‌ ಎರಡು ಎಜೆನ್ಸಿಗಳು ಆಕ್ಸಿಜನ್ ಪೂರೈಕೆ ಮಾಡುತ್ತಿದೆ. ಪ್ರತಿದಿನ ಸೋಂಕಿತರ ಹೆಚ್ಚಾದಂತೆ ಆಕ್ಸಿಜನ್ ಕೊರತೆ ಎದುರಾಗುತ್ತಿದೆ ಎಂದರು.

ಯಾವ ಕಂಪನಿಯಿಂದ ಎಷ್ಟೇಷ್ಟು‌ ಆಕ್ಸಿಜನ್ ಸಪ್ಲೈ ಆಗಿದೆ ಎಂಬ ಮಾಹಿತಿ ಇದೆ. ರಾಜ್ಯ ಸರ್ಕಾರಕ್ಕೆ ಎಲ್ಲಾ ಜಿಲ್ಲೆಗಳು ಮುಖ್ಯ.ಲೋಪ ಕಂಡು ಬಂದರೇ ಯಾರನ್ನು ಸಹ ಬಿಡುವುದಿಲ್ಲ ಎಂದರು

ಇನ್ನು ಇದೇ ವೇಳೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರಾದ ಸಚಿವ ಸುರೇಶ್​ ಕುಮಾರ್​, ಮುಂದಿನ ಸಾವು ಸಂಭವಿಸದಂತೆ ಮುಂಜಾಗೃತ ಕ್ರಮ ತೆಗೆದುಕೊಳ್ಳುತ್ತೇವೆ. ಒಳ್ಳೆಯ ರೀತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆಯ ನೀಡಲಾಗುತ್ತಿದೆ. ದುರಂತಕ್ಕೆ ವಿಷಾದ ಮತ್ತು ವೇದನೆಯನ್ನ ವ್ಯಕ್ತಪಡಿಸುತ್ತೇನೆ.ನಿಜವಾಗಿತೂ ಇಂದು ಬಹಳ ದುಖ‌ ತಂದಿರುವ ಸಂಗತಿ. 24 ಗಂಟೆಯಲ್ಲಿ 24 ಜನ ಕೋವಿಡ್ ದುರ್ಮರಣವಾಗಿದ್ದಾರೆ. ಮೃತ ಕುಟುಂಬಕ್ಕೆ ಭಗವಂತ ಶಕ್ತಿ‌ಭರಿಸುವ ಶಕ್ತಿ ನೀಡಲಿ.

ಸರ್ಕಾರ ಕುಟುಂಬ ಜೊತೆ ಇದೆ. ಬೆಳಗ್ಗೆ ಸುದ್ದಿ ಗೊತ್ತಾದ ಕೂಡಲೇ ಸಿಎಂ ಪ್ರಕರಣದ ಸಂಪೂರ್ಣವಾಗಿ ಮಾಹಿತಿ ಪಡೆದಿದ್ದಾರೆ.. ರಾತ್ರಿ 12 ಗಂಟೆಯವರೆಗೆ ಆಕ್ಸಿಜನ್ ಡ್ರೈ ಆಗಿರಲಿಲ್ಲ.ಈ‌ ಬಗ್ಗೆ ನಾನು ಹೆಚ್ಚು ಮಾತನಾಡಲ್ಲ. ತನಿಖೆ ನಡೆದು ಸತ್ಯಾಸತ್ಯತೆ ತಿಳಿಯಲಿದೆ.ಗಡಿ ಜಿಲ್ಲೆಯಲ್ಲಿ ಆಕ್ಸಿಜನ್​ ಸಿಗದೇ ಕಳೆದ 24 ಗಂಟೆಗಳಲ್ಲಿ 24 ಜನರು ಸಾವನ್ನಪ್ಪಿರುವ ಘಟನೆ ರಾಷ್ಟ್ರಮಟ್ಟದಲ್ಲಿ ಸರ್ಕಾರಕ್ಕೆ ಮುಜುಗರ ಉಂಟು ಮಾಡಿದೆ. ಈ ಮೂಲಕ ರಾಜ್ಯದಲ್ಲಿ ಆಕ್ಸಿಜನ್​ ಅಭಾವ ಉಂಟಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ.

Comments are closed.