ಕರ್ನಾಟಕ

ಹಂಪಿಯ ಬಡವಿಲಿಂಗ ದೇವಸ್ಥಾನದ ಪೂಜಾರಿ ಕೃಷ್ಣ ಭಟ್ ವಿಧಿವಶ

Pinterest LinkedIn Tumblr

ಬಳ್ಳಾರಿ: ಶಿವಪೀಠದ ಮೇಲೇರಿ ನಿತ್ಯವೂ ಪೂಜೆ ಸಲ್ಲಿಸಿ ಹೆಸರುವಾಸಿಯಾಗಿದ್ದ ಹಂಪಿಯ ಬಡವಿಲಿಂಗ ದೇವಸ್ಥಾನದ ಪೂಜಾರಿ ಕೃಷ್ಣ ಭಟ್ ಭಾನುವಾರದಂದು ನಿಧನರಾಗಿದ್ದಾರೆ. ಅವರಿಗೆ 94 ವರ್ಷ ವಯಸ್ಸಾಗಿತ್ತು.

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಕೃಷ್ಣ ಭಟ್ ಅವರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕಾಸರವಳ್ಳಿಯವರು. 1979ರಲ್ಲಿ ಹಂಪಿಗೆ ಬಂದು ನೆಲೆಸಿದ್ದರು. ಅಂದಿನಿಂದ ಬಡವಿಲಿಂಗಕ್ಕೆ ಪೂಜೆ ಮಾಡಿಕೊಂಡು ಬರುತ್ತಿದ್ದರು.

ಕಳೆದ ವರ್ಷ ಅನಾರೋಗ್ಯದಿಂದ ಪೂಜೆ ಮಾಡುವುದನ್ನು ನಿಲ್ಲಿಸಿದ್ದ ಕೃಷ್ಣ ಭಟ್ ಅವರ ಮಗ ಈಗ ದೇವಸ್ಥಾನದಲ್ಲಿ ಪೂಜಾ ಕೈಂಕರ್ಯ ಕಾರ್ಯವನ್ನು ಮುಂದುವರಿಸಿದ್ದಾರೆ.

ಹಂಪಿಯ ಬಡವಿಲಿಂಗ ಪೂಜಾರಿ ಕೃಷ್ಣ ಭಟ್ ಸಾಮಾಜಿಕ ಜಾಲತಾಣದಿಂದ ಜನಪ್ರಿಯರಾಗಿದ್ದರು. ಹಂಪಿಗೆ ಬಂದವರು ಇವರನ್ನು ಕಾಣಲು ಹೋಗುತ್ತಿದ್ದರು. ನೀರಿನೊಳಗೆ ಹೊಕ್ಕು ಪಾಣಿಪೀಠವ ಹತ್ತಿ ಶಿವನ ಪೂಜೆ ಮಾಡುವ ಪೂಜಾರಿ ಎಂದೇ ಜನಪ್ರಿಯರಾಗಿದ್ದರು. ಹಲವು ಗಣ್ಯರು ಕೃಷ್ಣ ಭಟ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

Comments are closed.