ಕರ್ನಾಟಕ

ಸ್ಯಾಂಡಲ್‌ವುಡ್‌ನ ನಟಿ ಸಂಜನಾ ಗಲ್ರಾನಿಗೆ ಕೊರೋನಾ ಪಾಸಿಟಿವ್..!

Pinterest LinkedIn Tumblr

ಬೆಂಗಳೂರು: ಮಹಾಮಾರಿ ಕೊರೋನಾ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸೆಲೆಬ್ರಿಟಿಗಳಿಂದ ಹಿಡಿದು ಜನಸಾಮಾನ್ಯರವರೆಗೆ ಎಲ್ಲರಿಗೂ ಕೋವಿಡ್​ ಬೆಂಬಿಡದೆ ಕಾಡುತ್ತಿದೆ.

ಈಗಾಗಲೇ ಸೆಲೆಬ್ರೆಟಿಗಳಾದ ಅಕ್ಷಯ್​ ಕುಮಾರ್​, ಸೋನು ಸೂದ್, ನಿಖಿಲ್ ಕುಮಾರಸ್ವಾಮಿ​ ಸೇರಿದಂತೆ ಅನೇಕರಿ ಕೊರೋನಾ ಸೋಂಕು ತಗುಲಿದೆ. ಇದೀಗ ಸ್ಯಾಂಡಲ್‌ವುಡ್‌ ನಟಿ ಸಂಜನಾ ಗಲ್ರಾನಿಗೂ ಕೂಡ ಸೋಂಕು ದೃಢಪಟ್ಟಿದೆ.

ಸ್ಯಾಂಡಲ್‌ವುಡ್‌ನ ನಟಿ ಸಂಜನಾ ಗಲ್ರಾನಿಗೆ ಕೊರೊನಾ ಸೋಂಕು ತಗುಲಿದೆ. ಈ ಬಗ್ಗೆ ತಿಳಿಸಿರುವ ಸಂಜನಾ ಮನೆಯಲ್ಲಿಯೇ ವೈದ್ಯರಿರೋದ್ರಿಂದ ಕೊರೊನಾ ಯಾವುದೇ ಸಮಯದಲ್ಲಾದ್ರೂ ಬರಬಹುದು ಎಂದು ಕೊಂಡಿದ್ದೆ, ಅದು ಈಗ ನಿಜವಾಗಿದೆ ಎಂದಿದ್ದಾರೆ.

 

 

Comments are closed.