
ಬೆಂಗಳೂರು: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದ ಮಹಿಳೆಯನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದು ಒಟ್ಟು 59 ಲಕ್ಷ ರೂ. ಮೌಲ್ಯದ 1,277 ಗ್ರಾಂ ಚಿನ್ನ ವಶಪಡಿಸಿಕೊಂಡಿದ್ದಾರೆ.
ಕಸ್ಟಮ್ಸ್ ಅಧಿಕಾರಿಯೊಬ್ಬರ ಪ್ರಕಾರ, 33 ವರ್ಷದ ಮಹಿಳೆ ಬೆಳಿಗ್ಗೆ 8.50ಕ್ಕೆ ಎಮಿರೇಟ್ಸ್ ವಿಮಾನ(ಇಕೆ 564) ಮೂಲಕ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ತಪಾಸಣೆ ವೇಳೆ ಆಕೆಯ ಬಳಿ ಅಕ್ರಮ ಚಿನ್ನ ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ.
ಕಳೆದ ಮೂರು ತಿಂಗಳಲ್ಲಿ ಕೊಲ್ಲಿ ರಾಷ್ಟ್ರಗಳಿಂದ ಚಿನ್ನದ ಕಳ್ಳಸಾಗಣೆ ನಡೆಯುತ್ತಿದೆ. ಕಳೆದ ಫೆಬ್ರವರಿ 28ರಂದು ದುಬೈನ ಆಗಮಿಸಿದ್ದ ಮಹಿಳೆಯೊಬ್ಬರು ತನ್ನ ಒಳ ಉಡುಪುಗಳಲ್ಲಿ 1 ಕೆಜಿ ಚಿನ್ನದ ಪೇಸ್ಟ್ ರೂಪದಲ್ಲಿ ಕಳ್ಳಸಾಗಣೆ ಮಾಡುವ ಪ್ರಯತ್ನದಲ್ಲಿ ಅದೇ ವಿಮಾನದಿಂದ ಸಿಕ್ಕಿಬಿದ್ದಿದ್ದರು.
Comments are closed.