ಕರಾವಳಿ

ಅಮ್ಮನಾಗಿ, ಸಹೋದರಿಯಾಗಿ, ಹೆಂಡತಿಯಾಗಿ, ಸೊಸೆಯಾಗಿ ಪುರುಷರ ವ್ಯಕ್ತಿತ್ವ ರೂಪಿಸುವುದೇ ಮಹಿಳೆಯರು: ಪ್ರೋ. ಸುರೇಶ್‍ನಾಥ್

Pinterest LinkedIn Tumblr

ಮಂಗಳೂರು, ಮಾರ್ಚ್ 09 : ವಿಶ್ವ ಮಹಿಳಾ ದಿನಾಚರಣೆ ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು. ಒಬ್ಬ ಮಗುವಿನ ವ್ಯಕ್ತಿತ್ವ ರೂಪಿಸಲು ತಾಯಿ ಬೇಕು. ಗಂಡನ ಯಶಸ್ಸಿಗೆ ಹೆಂಡತಿ ಅನಿವಾರ್ಯ ಮತ್ತು ಮನೆಯ ಶಾಂತಿ ಮತ್ತು ನೆಮ್ಮದಿ ವಾತಾವರಣಕ್ಕೆ ಮಹಿಳೆ ಅತೀ ಅಗತ್ಯ.

ಹೀಗೆ ಒಬ್ಬ ಮಹಿಳೆ ಅಮ್ಮನಾಗಿ, ಸಹೋದರಿಯಾಗಿ, ಹೆಂಡತಿಯಾಗಿ, ಸೊಸೆಯಾಗಿ ಪುರುಷರ ವ್ಯಕ್ತಿತ್ವ ರೂಪಿಸುವಲ್ಲಿ ಬಹು ಮುಖ್ಯ ಭೂಮಿಕೆ ವಹಿಸುತ್ತಾರೆ ಎಂದು ಮುಖ್ಯ ಅತಿಥಿಗಳಾಗಿ ಆಗಮಿಸಿದ ನಗರದ ಸೈಂಟ್ ಅಲೋಶಿಯಸ್ ಕಾಲೇಜ್‍ನ ನಿವೃತ್ತ ಪ್ರೋಫೆಸರ್ ಎಂ.ಎಲ್. ಸುರೇಶ್‍ನಾಥ್ ರವರು ಹೇಳಿದರು.

ಅವರು ಜಿಲ್ಲಾ ಗೃಹರಕ್ಷಕ ದಳ, ಮೇರಿಹಿಲ್, ಮಂಗಳೂರು ಕಚೇರಿಯಲ್ಲಿ ವಿಶ್ವ ಮಹಿಳಾ ದಿನಾಚರಣೆ ಸಂದರ್ಭದಲ್ಲಿ ಮಾತನಾಡಿದರು.

ಜಿಲ್ಲಾ ಗೃಹರಕ್ಷಕ ದಳ, ಮೇರಿಹಿಲ್, ಮಂಗಳೂರು ಕಚೇರಿಯಲ್ಲಿ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಗೃಹರಕ್ಷಕಿಯರಾದ ಸುಮಿತ್ರಾ, ಮೆಟಲ್ ಸಂಖ್ಯೆ 68, ಮಂಜುಳಾ, ಮೆಟಲ್ ಸಂಖ್ಯೆ 168, ಹಾಗೂ ಉಷಾ, ಮೆಟಲ್ ಸಂಖ್ಯೆ 150 ಇವರಿಗೆ ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಮಾದೇಷ್ಟರಾದ ಡಾ. ಮುರಲೀ ಮೋಹನ್ ಚೂಂತಾರು ರವರು ಮಾತನಾಡಿ, ಮಹಿಳೆ ದೈಹಿಕವಾಗಿ ಪುರುಷರಿಗಿಂತ ಬಲಾಡ್ಯವಲ್ಲದಿದ್ದರೂ, ಮಾನಸಿಕವಾಗಿ ಮಹಿಳೆ ಪುರುಷರಿಗಿಂತಲೂ ಬಲಶಾಲಿ, ಒತ್ತಡದ ಸನ್ನಿವೇಶವನ್ನು ನಿಭಾಯಿಸುವಲ್ಲಿ ಮಹಿಳೆ ಹೆಚ್ಚು ಯಶಸ್ವಿಯಾಗುತ್ತಾರೆ.

ಒಂದು ಪರಿಪೂರ್ಣ ಮನೆ, ಕುಟುಂಬ, ಸಮಾಜ, ನಾಡು ಮತ್ತು ದೇಶ ಕಟ್ಟಬೇಕಾದಲ್ಲಿ ಮಹಿಳೆ ಅನಿವಾರ್ಯಳು. ತಮ್ಮ ಕುಟುಂಬ ನಿರ್ವಹಣೆ ಜೊತೆಗೆ ಗೃಹರಕ್ಷಕಿಯಾಗಿ ಕೆಲಸ ಮಾಡಿ ಸಮಾಜದ ಸ್ವಾಸ್ಥ ಕಾಪಾಡುವ ಮಹಿಳಾ ಗೃಹರಕ್ಷಕಿಯರ ಕೊಡುಗೆ ಅತೀ ಅಮೂಲ್ಯ ಎಂದರು.

ಕಾರ್ಯಕ್ರಮದಲ್ಲಿ ಕಚೇರಿಯ ಅಧೀಕ್ಷಕರಾದ ರತ್ನಾಕರ, ಪ್ರಥಮ ದರ್ಜೆ ಸಹಾಯಕಿ ಅನಿತಾ ಟಿ.ಎಸ್, ದ್ವಿತೀಯ ದರ್ಜೆ ಸಹಾಯಕರಾದ ಕಿರಣ್ ಕುಮಾರ್, ದಲಾಯತ್ ಮೀನಾಕ್ಷಿ ಹಾಗೂ ಗೃಹರಕ್ಷಕರಾದ ದಿವಾಕರ್, ದುಶ್ಯಂತ್, ಜಯಲಕ್ಷ್ಮಿ, ಶುಭ, ಸುನಿಲ್, ಸುನಿಲ್ ಪುಜಾರಿ, ಗಾಯತ್ರಿ, ಜಯಂತಿ, ಸೆಲೇಸ್ಟಿನ್, ದಿವ್ಯಾ, ಮನೋರಮ, ಸವಿತಾ, ಸಬಿತಾ, ನೂರ್‍ಜಾನ್, ಸುಮಿತ್ರಾ, ಭಾರತಿ ಆರ್, ಮೋಹಿನಿ, ಶಾಲಿನಿ, ಶ್ರುತಿ ಸೇರಿ ಸುಮಾರು 30 ಗೃಹರಕ್ಷಕ/ಗೃಹರಕ್ಷಕಿಯರು ಉಪಸ್ಥಿತರಿದ್ದರು.

Comments are closed.