ಕರ್ನಾಟಕ

ಈ ಬಾರಿಯ ರಾಜ್ಯ ಬಜೆಟ್ ಅಭಿವೃದ್ಧಿಯ ದಾಖಲೆಯಾಗಲಿದೆ ಎಂದ ಸಿಎಂ ಯಡಿಯೂರಪ್ಪ

Pinterest LinkedIn Tumblr

yaddi

ಬೆಂಗಳೂರು: ಕೊರೋನಾ ಸಂಕಷ್ಟ, ಕೇಂದ್ರದಿಂದ ರಾಜ್ಯಕ್ಕೆ ಬಾರದ ಜಿಎಸ್’ಟಿ ಪರಿಹಾರ, ಬಜೆಟ್ ಗಾಂತ್ರಕ್ಕಿಂತಲೂ ಹೆಚ್ಚಾಗಿರುವ ಸಾಲ ಮತ್ತು ಕೊರೋನಾದಿಂದಾಗಿ ಎದುರಾಗಿರುವ ಆರ್ಥಿಕ ಸಂಕಷ್ಟದಂತಹ ಸಾಲು ಸಾಲು ಸವಾಲುಗಳ ನಡುವಲ್ಲೂ ಸೋಮವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು 2021-2022ನೇ ಸಾಲಿನ ರಾಜ್ಯ ಬಜೆಟ್’ನ್ನು ಮಂಡನೆ ಮಾಡಲಿದ್ದು, ಈ ಬಾರಿಯ ರಾಜ್ಯ ಬಜೆಟ್ ಅಭಿವೃದ್ಧಿಯ ದಾಖಲೆಯಾಗಲಿದೆ ಎಂದು ಹೇಳಿದ್ದಾರೆ.

ಬಿ.ಎಸ್. ಯಡಿಯೂರಪ್ಪ ಅವರು 2019 ಜುಲೈ 26ರಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಇದು ಎರಡನೇ ಬಾರಿ ಬಜೆಟ್​ ಮಂಡಿಸಲಿದ್ದಾರೆ. ಆರ್ಥಿಕ ಸಂಕಟ, ಪ್ರವಾಹ, ಹೆಚ್ಚಾದ ಸಾಲ ಪ್ರಮಾಣಗಳ ನಡುವೆ ಇಂದು ಸಿಎಂ ಬಿಎಸ್​ವೈ ಮಂಡಿಸುವ ಬಜೆಟ್​ ಮೇಲೆ ಭಾರೀ ನಿರೀಕ್ಷೆಗಳನ್ನು ಇಟ್ಟುಕೊಳ್ಳಲಾಗಿದೆ.

ಬಜೆಟ್ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಯಡಿಯೂರಪ್ಪ ಅವರು, ಈ ಬಾರಿಯ ಬಜೆಟ್’ನ್ನು ವಿಕಾಸ ಪತ್ರ ಎಂದು ಹೇಳುವ ಮೂಲಕ ಜನರಲ್ಲಿ ಭರವಸೆಗಳು ಹೆಚ್ಚಾಗುವಂತೆ ಮಾಡಿದ್ದಾರೆ.

ಕರ್ನಾಟಕ ವಿಕಾಸ ಪತ್ರ 2021 ಎಂದು ಟ್ವೀಟ್ ಮಾಡಿರುವ ಯಡಿಯೂರಪ್ಪ ಅವರು, ಇಂದು ಮಧ್ಯಾಹ್ನ 12 ಗಂಟಗೆ 2021-2022ನೇ ಸಾಲಿನ ಆಯವ್ಯಯ ಮಂಡನೆ ಮಾಡುವುದಾಗಿ ಹೇಳಿದ್ದಾರೆ.

ಇಂದು ಮಧ್ಯಾಹ್ನ 12 ಗಂಟೆಗೆ ಯಡಿಯೂರಪ್ಪ ಅವರು ರಾಜ್ಯ ಬಜೆಟನೆ ಮಂಡನೆ ಮಾಡಲಿದ್ದು, ಇದಕ್ಕೂ ಮುನ್ನ ಸಂಪುಟ ಸಭೆ ನಡೆಸಿ ಬಜೆಟ್ ಮಂಡನಗೆ ಸಂಪುಟದ ಅನುಮತಿ ಪಡೆಯಲಿದ್ದಾರೆ. ನಂತರ ವಿಧಾನಸಭೆಯಲ್ಲಿ 12 ಗಂಟೆಗೆ ಪ್ರಸಕ್ತ ಸಾಲಿನ ರಾಜ್ಯದ ಆಯವ್ಯಯ ಮಂಡನೆ ಮಾಡಲಿದ್ದಾರೆ.

ಬಜೆಟ್ ಮಂಡನೆ ಪೂರ್ಣಗೊಂಡ ಬಳಿಕ ಉಭಯ ಸದನಗಳಲ್ಲಿ ತಿಂಗಳ ಅಂತ್ಯದ ವರೆಗೂ ಏಪ್ರಿಲ್ 1ರವರೆಗೂ ಬಜೆಟ್ ಕುರಿತು ಚರ್ಚೆಗಳನ್ನು ನಡೆಸಲಾಗುತ್ತದೆ.

ರಾಜ್ಯ ಸರ್ಕಾರ ಪ್ರಸ್ತುತ ರಾಜ್ಯ ಸರ್ಕಾರ ಸುಮಾರು ರೂ. 3 ಲಕ್ಷ ಕೋಟಿ ಸಾಲದ ಸುಳಿಯಲ್ಲಿದ್ದು, ಇದು ರಾಜ್ಯ ಬಜೆಟ್​ಗಿಂತಲೂ ದೊಡ್ಡ ಗಾತ್ರದ ಸಾಲವಾಗಿದೆ. ದೂರದೃಷ್ಟಿಯ ಅಭಿವೃದ್ಧಿ ಬಜೆಟ್​ಗಿಂತ ಮತಕ್ಕಾಗಿ ಜನಪ್ರಿಯ ಯೋಜನೆಗಳ ಘೋಷಣೆಯೇ ಈ ಸಾಲದ ಬಾಬ್ತು ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ.

ಈ ನಿಟ್ಟಿನಲ್ಲಿ ಬಿಎಸ್​ವೈ ಇಂದು ಮಂಡಿಸುವ ಬಜೆಟ್​ ಹೊಸ ಯೋಜನೆ ಘೋಷಣೆಕ್ಕಿಂತ ಮುಖ್ಯವಾಗಿ ಆಯವ್ಯಯದ ಮೇಲೆ ವೆಚ್ಚ ಕಡಿತಕ್ಕೆ ಹೆಚ್ಚು ಗಮನ ಹರಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಕೇಂದ್ರದಿಂದ ರಾಜ್ಯಕ್ಕೆ ಬರಬೇಕಿದ್ದ ಜಿಎಸ್​ಟಿ ಪರಿಹಾ ಸಕಾಲಕ್ಕೆ ಬಂದಿಲ್ಲ. ಕೇಂದ್ರ ಸರ್ಕಾರದಿಂದ 2019-20ರ ತೆರಿಗೆ ಹಂಚಿಕೆಯಲ್ಲಿ ರೂ.8887 ಕೋಟಿ ಕೊರತೆಯಾಗಲಿದೆ. ಜಿಎಸ್​ಟಿ ಪರಿಹಾರದಲ್ಲಿ ರಾಜ್ಯಕ್ಕೆ ರೂ.4600 ಕೋಟಿ ಬರುವುದು ಬಾಕಿ ಇದೆ.

ಈ ನಡುವೆ 2020-21ರ ಜಿಎಸ್​ಟಿ ಲೆಕ್ಕ ಈವರೆಗೆ ಸಿಕ್ಕಿಲ್ಲ. ಇನ್ನು 15ನೇ ಹಣಕಾಸು ಆಯೋಗದ ಅಂದಾಜಿನಂತೆ ಕೇಂದ್ರದ ತೆರಿಗೆ ಹಂಚಿಕೆಯಲ್ಲಿ 2020-21ರಲ್ಲಿ 11215 ಕೋಟಿ ರೂಪಾಯಿ ಕಡಿತವಾಗಲಿದೆ. ಭವಿಷ್ಯದಲ್ಲಿ ಈ ಕಡಿತದ ಪ್ರಮಾಣ ಹೆಚ್ಚಾಗಲಿದ್ದು, ರಾಜ್ಯದ ಆರ್ಥಿಕತೆಯ ಮೇಲೆ ಪರಿಣಾಮ ಬೀರಲಿದೆ. ಇದು ಕೂಡ ಸಿಎಂ ಬಿಎಸ್​ವೈ ಅವರಿಗೆ ದೊಡ್ಡ ತಲೆ ನೋವಾಗಿದೆ

Comments are closed.