ಕರ್ನಾಟಕ

ಬಹುನಿರೀಕ್ಷಿತ ಕೆಜಿಎಫ್ ಚಾಪ್ಟರ್-2 ಬಿಡುಗಡೆ ದಿನಾಂಕ ನಿಗದಿ: ಜುಲೈ16ಕ್ಕೆ ತೆರೆ ಮೇಲೆ..!

Pinterest LinkedIn Tumblr

ಬೆಂಗಳೂರು: ಬಹುನಿರೀಕ್ಷಿತ ಬಿಗ್ ಬಜೆಟ್ ಸಿನೆಮಾ ‘ಕೆಜಿಎಫ್ ಚಾಪ್ಟರ್ 2’ ಬಿಡುಗಡೆ ಡೇಟ್ ಫಿಕ್ಸ್ ಆಗಿದ್ದು ಜುಲೈ 16ಕ್ಕೆ ತೆರೆ ಮೇಲೆ ಬರುತ್ತಿದೆ.ಈ ಬಗ್ಗೆ ಖುದ್ದು ಪ್ರಶಾಂತ್ ನೀಲ್ ಟ್ವೀಟರ್ ಮೂಲಕ ಚಿತ್ರ ಬಿಡುಗಡೆ ದಿನಾಂಕ ಪ್ರಕಟಿಸಿದ್ದಾರೆ.

ವಿಶ್ವದಾದ್ಯಂತ ಜುಲೈ 16ಕ್ಕೆ ತೆರೆ ಮೇಲೆ ಕೆಜಿಎಫ್ ಚಾಪ್ಟರ್ 2 ಬರಲಿದೆ. ಹೊಂಬಾಳೆ ಸಂಸ್ಥೆ ಸಿನಿಮಾ ನಿರ್ಮಾಣ ಮಾಡಿದ್ದು ಕೆಜಿಎಫ್ ಮೊದಲ ಭಾಗ ಸೂಪರ್ ಹಿಟ್ ಆಗಿತ್ತು.

ರಾಕಿಂಗ್ ಸ್ಟಾರ್ ಯಶ್ ರಾಕಿ ಬಾಯ್ ಆಗಿ ಕಾಣಿಸಿಕೊಂಡಿದ್ದು ಎಲ್ಲ ಕಡೆ ಚಿತ್ರತಂಡ ಟೀಸರ್ ಬಿಡುಗಡೆ ಮಾಡಿತ್ತು.

ಟ್ವಿಟ್ಟರ್ ನಲ್ಲಿ ಇಂದು ಬೆಳಗ್ಗೆಯಿಂದಲೇ ಚಿತ್ರದ ಬಗೆಗಿನ ಸುದ್ದಿ ಟ್ರೆಂಡ್ ಆಗಿತ್ತು. 2021ನೇ ಸಾಲಿನ ಕನ್ನಡ ಸಿನೆಮಾಗಳಲ್ಲಿ ಕೆಜಿಎಫ್ ಚಾಪ್ಟರ್-2 ಬಹು ನಿರೀಕ್ಷಿತ ಚಿತ್ರವಾಗಿದೆ.

 

 

Comments are closed.