ಕರಾವಳಿ

ಕಾನ್ಸ್ಟೇಬಲ್ ಕೊಲೆ ಯತ್ನ ಪ್ರಕರಣ – ಮತ್ತೆ ಮೂವರ ಬಂಧನ: ಎಸ್‌ಡಿಪಿಐ, ಪಿಎಫ್‌ಐ ನಿರ್ಬಂಧಕ್ಕೆ ಆಗ್ರಹ

Pinterest LinkedIn Tumblr

ಮಂಗಳೂರು : ಪೋಲೀಸರ ಕೊಲೆ ಯತ್ನ ಪ್ರಕರಣದಲ್ಲಿ ಎಸ್‌ಡಿಪಿಐ ಹಾಗು ಪಿಎಫ್‌ಐ ಸಂಘಟನೆಗಳ ಕಾರ್ಯಕರ್ತರು ಪಾಲ್ಗೊಂಡಿರುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಈ ಎರಡೂ ಸಂಘಟನೆಗಳನ್ನು ನಿರ್ಬಂಧಕ್ಕೆ ಕ್ರಮಕೈಗೊಳ್ಳ ಬೇಕು ಎಂದು ವಿಶ್ವ ಹಿಂದು ಪರಿಷದ್ ಆಗ್ರಹಿಸಿದೆ.

ಪೊಲೀಸ್ ಕಾನ್ಸ್ಟೇಬಲ್ ಗಣೇಶ್ ಕಾಮತ್ ಮೇಲೆ ಕೊಲೆ ಯತ್ನ ಪ್ರಕರಣದಲ್ಲಿ ಈಗಾಗಲೇ 10 ಕ್ಕೂ ಹೆಚ್ಚು ಎಸ್‌ಡಿಪಿಐ ಕಾರ್ಯಕರ್ತರ ಬಂಧನವಾಗಿದ್ದು, 2019 ರಲ್ಲಿ ನಡೆದ ಪೊಲೀಸ್ ಗೋಲಿಬಾರ್ ಪ್ರಕರಣಕ್ಕೆ ಪ್ರತಿಕಾರವಾಗಿ ಮಾಯಾ ಗ್ಯಾಂಗ್ ಮೂಲಕ ಸಂಚು ನಡೆಸಿ ದುಷ್ಕೃತ್ಯ ನಡೆಸಿದ್ದಾರೆ.

ಇದೀಗ ಕುದ್ರೋಳಿ ವಲಯದ ಕಾರ್ಯದರ್ಶಿ ಅಕ್ಬರ್ ಎಂಬುವನ ಬಂಧನದೊಂದಿಗೆ ಎಸ್‌ಡಿಪಿಐ ಈ ಕೊಲೆ ಯತ್ನದಲ್ಲಿ ಕೈವಾಡವಿರುವುದು ಸ್ಪಷ್ಟವಾಗಿದೆ.

ಆದರಿಂದ ಗ್ರಹ ಇಲಾಖೆ, ಪೊಲೀಸ್ ಇಲಾಖೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಎಸ್‌ಡಿಪಿಐ ಮತ್ತು ಪಿಎಫ್‌ಐ ಸಂಘಟನೆಗಳ ಮೇಲೆ ನಿರ್ಬಂಧ ಹೇರಲು ಕ್ರಮ ತೆಗೆದುಕೊಳ್ಳಬೇಕೆಂದು ವಿಶ್ವ ಹಿಂದು ಪರಿಷದ್ ಜಿಲ್ಲಾ ಕಾರ್ಯದರ್ಶಿ ಶಿವಾನಂದ್ ಮೆಂಡನ್ ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

Comments are closed.