ಕರ್ನಾಟಕ

ಅಕ್ರಮವಾಗಿ ಗಣಿಗಾರಿಗೆ ಮಾಡುವವರ ಮೇಲೆ 24 ಗಂಟೆಗಳಲ್ಲಿ ಕ್ರಮ: ಯಡಿಯೂರಪ್ಪ ಎಚ್ಚರಿಕೆ

Pinterest LinkedIn Tumblr

ಬೆಂಗಳೂರು: ಶಿವಮೊಗ್ಗದಲ್ಲಿ ಗುರುವಾರ ನಡೆದ ಗಣಿಗಾರಿಕೆ ಸ್ಫೋಟ ಪ್ರಕರಣದ ನಂತರ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ಇದೀಗ ಮಹತ್ವದ ಹೆಜ್ಜೆಯೊಂದನ್ನು ಇಟ್ಟಿದೆ.

ಈ ಘಟನೆಯನ್ನ ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ತಡೆಯುವ ಸಲುವಾಗಿ ಮಹತ್ತರ ಆದೇಶ ಹೊರಡಿಸಿದ್ದಾರೆ.

ರಾಜ್ಯದಲ್ಲಿ ಇನ್ಮುಂದೆ ಅಕ್ರಮ ಗಣಿಗಾರಿಕೆಗೆ ಅವಕಾಶ ಇಲ್ಲ ಎಂದಿರುವ ಯಡಿಯೂರಪ್ಪ ಅವರು, ಪರವಾನಗಿ ಇದ್ದರೆ ಮಾತ್ರ ಗಣಿಗಾರಿಕೆ ನಡೆಸಲು ಅವಕಾಶ ಮಾಡಿಕೊಡುವುದಾಗಿ ಹೇಳಿದ್ದಾರೆ.

ವಿಧಾನಸೌಧದ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯುರಪ್ಪ ಅವರು, ರಾಜ್ಯದಲ್ಲಿ ಗಣಿಗಾರಿಕೆಗೆ ಅವಕಾಶ ನೀಡಬೇಕಾಗಿದೆ. ಹಾಗೆಂದು ಅಕ್ರಮ ಗಣಿಗಾರಿಕೆ ನಡೆಸಿದರೆ ಸುಮ್ಮನಿರಲು ಸಾಧ್ಯವಿಲ್ಲ. ಅನುಮತಿ ಇದ್ದರ ಮಾತ್ರ ಗಣಿಗಾರಿಕೆ ನಡೆಸಬೇಕು. ಅಕ್ರಮವಾಗಿ ಗಣಿಗಾರಿಗೆ ಮಾಡುವವರ ಮೇಲೆ 24 ಗಂಟೆಗಳಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.

ಸಂಸದರು, ಗಣಿ ಸಚಿವರು, ಜಿಲ್ಲಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ದುರಂತದ ಸ್ಥಳಕ್ಕೆ ಶೀಘ್ರದಲ್ಲೇ ನಾನೇ ಭೇಟಿ ನೀಡುತ್ತೇನೆ. ಲಾರಿಯಲ್ಲಿ ಜಿಲೆಟಿನ್ ತರಲು ಯಾರು ಅವಕಾಶ ನೀಡಿದ್ದರು ಎಂಬುದರ ಕುರಿತಂತೆಯೂ ಪರಿಶೀಲಿಸುತ್ತೇನೆಂದು ತಿಳಿಸಿದ್ದಾರೆ.

ಈ ನಡುವೆ ಪ್ರಕರಣಕ್ಕೆ ಸಂಬಂಧಿಸದಂತೆ ಸ್ಫೋಟದಲ್ಲಿ ಮೃತಪಟ್ಟಿದ್ದ ಐವರ ಗುರುತು ಪತ್ತೆಯಾಗಿದೆ. ನಿನ್ನೆ ಮೂವರ ಗುರುತು ಪತ್ತೆಯಾಗಿತ್ತು. ಇಂದು ಇಬ್ಬರ ಗುರುತು ಪತ್ತೆಯಾಗಿದೆ. ಮೃತರು ಆಂಧ್ರದ ರಾಯದುರ್ಗದ ಪವನ್, ರಾಜು, ಜಾವೇದ್ ಹಾಗೂ ಅಂತರಗಂಗೆಯ ಪ್ರವೀಣ್, ಮಂಜುನಾಥ್ ಎಂದು ಪತ್ತೆಯಾಗಿದೆ.

Comments are closed.