ಕರ್ನಾಟಕ

ಯಡಿಯೂರಪ್ಪ ಸಂಪುಟದ 7 ಸಚಿವರಿಗೆ ಖಾತೆ ಹಂಚಿಕೆ; ಕೆಲವು ಸಚಿವರ ಖಾತೆ ಬದಲಾವಣೆ

Pinterest LinkedIn Tumblr

ಬೆಂಗಳೂರು: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸಂಪುಟದ ನೂತನ 7 ಸಚಿವರಿಗೆ ಇಂದು ಖಾತೆ ಹಂಚಿಕೆ ಮಾಡಲಾಗಿದ್ದು, ಜೊತೆಗೆ ಸಂಪುಟದ 10 ಸಚಿವರ ಖಾತೆ ಬದಲಾವಣೆಯಾಗಿದೆ. ಸಚಿವರ ಖಾತೆ ಬದಲಾವಣೆ, ಖಾತೆ ಹಂಚಿಕೆಯೊಂದಿಗೆ ಸಂಭಾವ್ಯ ನೂತನ ಪಟ್ಟಿಯನ್ನ ರಾಜಭವನಕ್ಕೆ ಕಳುಹಿಸಲಾಗಿದ್ದು ರಾಜ್ಯಪಾಲರ ಅಂಕಿತದ ಬಳಿಕ ಖಾತೆ ಹಂಚಿಕೆ ಫೈನಲ್ ಆಗಲಿದೆ.

ಸಿಎಂ ಯಡಿಯೂರಪ್ಪರಿಂದ ಅಂತಿಮಗೊಂಡಿರುವ ಖಾತೆಗಳು…
1. ಬಿಎಸ್‌ವೈ-ಹಣಕಾಸು, ಇಂಧನ, ಬೆಂಗಳೂರು ನಗರಾಭಿವೃದ್ಧಿ
2. ಉಮೇಶ್ ಕತ್ತಿ-ಆಹಾರ ಮತ್ತು ನಾಗರಿಕ ಪೂರೈಕೆ
3. ಎಸ್.ಅಂಗಾರ-ಮೀನುಗಾರಿಕೆ & ಬಂದರು, ಒಳನಾಡು ಜಲಸಾರಿಗೆ
4. ಬಸವರಾಜ ಬೊಮ್ಮಾಯಿ-ಗೃಹ ಖಾತೆ, ಕಾನೂನು & ಸಂಸದೀಯ
5. ಜೆ.ಸಿ.‌ಮಾಧುಸ್ವಾಮಿ-ವೈದ್ಯಕೀಯ ಶಿಕ್ಷಣ, ಕನ್ನಡ ಸಂಸ್ಕೃತಿ ಖಾತೆ
6. ಸಿ.ಸಿ.ಪಾಟೀಲ್-ಸಣ್ಣ ಕೈಗಾರಿಕೆ, ವಾರ್ತಾ ಇಲಾಖೆ
7. ಅರವಿಂದ ಲಿಂಬಾವಳಿ-ಅರಣ್ಯ ಇಲಾಖೆ
8. ಮುರುಗೇಶ್ ನಿರಾಣಿ-ಗಣಿ ಮತ್ತು ಭೂವಿಜ್ಞಾನ ಇಲಾಖೆ
9. ಎಂಟಿಬಿ ನಾಗರಾಜ್-ಅಬಕಾರಿ ಇಲಾಖೆ
10. ಕೋಟ ಶ್ರೀನಿವಾಸ ಪೂಜಾರಿ-ಮುಜರಾಯಿ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ
11. ಡಾ.ಕೆ.ಸುಧಾಕರ್-ಆರೋಗ್ಯ ಮತ್ತು ಕುಟುಂಬ ಕಲ್ಯಾಣ
12. ಆನಂದ್ ಸಿಂಗ್-ಪ್ರವಾಸೋದ್ಯಮ, ಪರಿಸರ ಇಲಾಖೆ
13. ಸಿ.ಪಿ.ಯೋಗೇಶ್ವರ್-ಸಣ್ಣ ನೀರಾವರಿ ಇಲಾಖೆ
14. ಪ್ರಭು ಚೌಹಾಣ್-ಪಶುಸಂಗೋಪನೆ ಇಲಾಖೆ
15. ಆರ್.ಶಂಕರ್-ಪೌರಾಡಳಿತ ಮತ್ತು ರೇಷ್ಮೆ ಇಲಾಖೆ
16. ಗೋಪಾಲಯ್ಯ-ತೋಟಗಾರಿಕೆ ಮತ್ತು ಸಕ್ಕರೆ
17. ನಾರಾಯಣ ಗೌಡ-ಯುವಜನ ಸೇವೆ ಮತ್ತು ಕ್ರೀಡೆ, ಹಜ್ ಮತ್ತು ವಕ್ಫ್

ನೂತನ ಸಚಿವರ ಖಾತೆ ಹಂಚಿಕೆ ಪಟ್ಟಿ ರಾಜಭವನಕ್ಕೆ ರವಾನಿಸಲಾಗಿದ್ದು ರಾಜ್ಯಪಾಲರ ಅಂಕಿತದ ಬಳಿಕ ಖಾತೆ ಹಂಚಿಕೆ ಅಧಿಕೃತವಾಗಲಿದೆ.

Comments are closed.