ಬೆಂಗಳೂರು: ಕೆಜಿಎಫ್-2 ಸಿನಿಮಾದ ಟೀಸರ್ ಬಿಡುಗಡೆಯಾದ ಬಳಿಕ ನಿರೀಕ್ಷೆಗೂ ಮೀರಿ ಯಶಸ್ಸು ಕಂಡಿದ್ದು ರಾಕಿಂಗ್ ಸ್ಟಾರ್ ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ. ಆದರೆ ಯಶ್’ಗೆೆ ಇದೀಗಾ ಸಂಕಟ ಆರಂಬವಾಗಿದೆ.
ಬಂದೂಕಿನಿಂದ ರಾಕಿಂಗ್ ಸ್ಟಾರ್ ಸಿಗರೇಟ್ ಹಚ್ಚುವ ದೃಶ್ಯ ಸಾಕಷ್ಟು ವೈರಲ್ ಆಗಿದ್ದು ಯಶ್ಗೆ ಇದೇ ದೃಶ್ಯ ಮುಳುವಾಗಿದೆ .ಆರೋಗ್ಯ ಇಲಾಖೆ ಯಶ್ಗೆ ನೋಟಿಸ್ ಜಾರಿ ಮಾಡಿದೆ.ಅಭಿಮಾನಿಗಳು ಸಾಕಷ್ಟು ಸಂದರ್ಭದಲ್ಲಿ ತಮ್ಮ ನಾಯಕನನ್ನು ಅನುಕರಣೆ ಮಾಡುತ್ತಾರೆ.
ಇದೀಗ ಸಿಗರೇಟ್ ಹಚ್ಚುವ ದೃಶ್ಯ ಕೂಡ ಇದೇ ಸಾಲಿಗೆ ಸೇರಿದೆ ಎನ್ನುವ ಕಾರಣಕ್ಕೆ ಆರೋಗ್ಯ ಇಲಾಖೆ ನೋಟಿಸ್ ಜಾರಿಗೊಳಿಸಿದೆ. ಟೀಸರ್ನಲ್ಲಿ ಇರುವ ಸಿಗರೇಟ್ ಸೇದುವ ದೃಶ್ಯವು ಯುವಕರನ್ನು ಪ್ರಚೋದಿಸುತ್ತದೆ.ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳ ಕಾಯ್ದೆ 2003, ಸೆಕ್ಷನ್ 5 ರ ಪ್ರಕಾರ ನಿಬಂಧನೆಗಳ ಉಲ್ಲಂಘನೆಯಾಗಿದೆ. ಲಕ್ಷಾಂತರ ಜನ ಯುವ ಅಭಿಮಾನಿಗಳನ್ನ ನೀವು ಹೊಂದಿದ್ದೀರಾ . ಯುವ ಸಮುದಾಯ ಸಿಗರೇಟ್ ಸೇದುವ ಪ್ರಚೋದನೆಗೆ ಒಳಗಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ದೃಶ್ಯ ತೆಗೆಯುವಂತೆ ಸೂಚನೆ ನೀಡಿ ಆರೋಗ್ಯ ಇಲಾಖೆ ನೋಟಿಸ್ ನೀಡಿದೆ.