ಕರ್ನಾಟಕ

ವಿರಾಜಪೇಟೆಯಲ್ಲಿ ಅಕ್ರಮ ಶ್ರೀ ಗಂಧ ಮಾರಾಟ ಯತ್ನ: ನಾಲ್ವರು ಆರೋಪಿಗಳ ಬಂಧನ

Pinterest LinkedIn Tumblr

ಮಡಿಕೇರಿ: ಶ್ರೀಗಂಧದ ಮರ ಕಳ್ಳತನ ಮಾಡಿ ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಪ್ರಕರಣವನ್ನು ವಿರಾಜಪೇಟೆ ಗ್ರಾಮಾಂತರ ಠಾಣೆ ಪೊಲೀಸರು ಪತ್ತೆ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ.

ಶುಕ್ರವಾರವಿರಾಜಪೇಟೆ ಗ್ರಾಮಾಂತರ ಠಾಣೆ ಎಎಸ್ಐ ಶ್ರೀಧರ್ ಮತ್ತು ಸಿಬ್ಬಂದಿಯವರು ಗಸ್ತು ಕರ್ತವ್ಯದಲ್ಲಿರುವಾಗ ವಿರಾಜಪೇಟೆ ತಾಲ್ಲೂಕು ಅಮ್ಮತ್ತಿ ಗ್ರಾಮದ ಬಳಿ ಅನುಮಾನಾಸ್ಪದವಾಗಿ ನಿಂತಿದ್ದ ಕೆಎ-12-ಎಂ-0044 ನೋಂದಣಿ ಸಂಖ್ಯೆಯ ಕಾರನ್ನು ತಪಾಸಣೆ ಮಾಡಿದಾಗ ಶ್ರೀಗಂಧ ಮರದ ತುಂಡುಗಳು ಕಂಡುಬಂದಿದ್ದು ಆರೋಪಿಗಳಾದ ಸುಜಯ್, ಅರ್ಜುನ್, ಮುತ್ತಪ್ಪ ಮತ್ತು ಮಹದೇವಸ್ವಾಮಿ ಎಂಬುವವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿ ಕಿಶನ್ ಎಂಬುವವರ ಕಾಫಿ ತೋಟದಿಂದ ಕಳವು ಮಾಡಿದ್ದ 35 ಸಾವಿರ ಮೌಲ್ಯದ ಶ್ರೀಗಂಧ ಮರದ ತುಂಡುಗಳು ಹಾಗೂ ಕೃತ್ಯಕ್ಕೆ ಉಪಯೋಗಿಸಿದ ವಾಹನ ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

ಈ ಪ್ರಕರಣವನನ್ನು ವಿರಾಜಪೇಟೆ ಗ್ರಾಮಾಂತರ ಠಾಣೆ ಪಿಎಸ್ಐ ಸಿದ್ದಲಿಂಗ ಬಾನಸೆ, ಎಎಸ್ಐ ಶ್ರೀಧರ್, ಸಿಬ್ಬಂದಿಗಳಾದ ತೀರ್ಥಕುಮಾರ್, ನೆಹರುಕುಮಾರ್, ರಾಮಪ್ಪ, ಚಂದ್ರಶೇಖರ್, ಜೋಯಪ್ಪ ರವರು ಪತ್ತೆ ಮಾಡಿದ್ದು , ಇವರ ಕಾರ್ಯವನ್ನು ಎಸ್ಪಿ ಶ್ಲಾಘಿಸಿದ್ದಾರೆ.

Comments are closed.