ಕರ್ನಾಟಕ

ಹೊಸ ವರ್ಷದಂದು ಶಾಲಾ-ಕಾಲೇಜು ಪುನರಾರಂಭ: ಸಿದ್ಧತೆ ಪರಿಶೀಲಿಸಿದ ಸುರೇಶ್ ಕುಮಾರ್

Pinterest LinkedIn Tumblr


ಬೆಂಗಳೂರು: ರಾಜ್ಯದಲ್ಲಿ ಜನವರಿ 1ರಿಂದ ಶಾಲಾ-ಕಾಲೇಜುಗಳು ಆರಂಭ ಆಗುತ್ತಿರುವ ಹಿನ್ನೆಲೆಯಲ್ಲಿ ಇಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ನಗರದ ವಿವಿಧ ಸರ್ಕಾರಿ-ಖಾಸಗಿ ಪ್ರೌಢಶಾಲೆಗಳು, ಪದವಿಪೂರ್ವ ಕಾಲೇಜುಗಳಿಗೆ ಭೇಟಿ ನೀಡಿ ಅಲ್ಲಿನ ಮುಂಜಾಗ್ರತಾ ಕ್ರಮಗಳು, ಸಿದ್ಧತೆಯನ್ನ ಪರಿಶೀಲನೆ ನಡೆಸಿದರು.

ಈ ವೇಳೆ ಶಿಕ್ಷಕರಿಗೆ ಸಲಹೆ ನೀಡಿದ ಸಚಿವರು, ‘ ಸರ್ಕಾರಿ ಶಾಲೆ ಮತ್ತು ಕಾಲೇಜುಗಳಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕೊರತೆಯಿಲ್ಲ. ಪ್ರತಿಯೊಬ್ಬರ ವಿದ್ಯಾರ್ಥಿಯಲ್ಲೂ ಹೆಚ್ಚಿನ ಅಂಕಗಳನ್ನು ಪಡೆಯಬೇಕು ಎಂಬ ಹುಮ್ಮಸ್ಸು, ಆಸಕ್ತಿಯನ್ನ ಮೂಡಿಸಬೇಕು’ ಎಂದರು.

ಇನ್ನು ಕೊರೊನಾ ಮುಂಜಾಗ್ರತ ಕ್ರಮಗಳ ಬಗ್ಗೆ ನಿಗಾ ವಹಿಸಬೇಕು ಎಂದಿರುವ ಸುರೇಶ್‌ ಕುಮಾರ್‌, ‘ಎಲ್ಲರೂ ಮಾಸ್ಕ್​ ಧರಿಸಬೇಕು, ಕೈ ತೊಳೆಯಲು ಸ್ಯಾನಿಟೈಸರ್​ ಅಥವಾ ಸಾಬೂನು ಬಳಸಬೇಕು. ಉಪಾಧ್ಯಾಯರು ಕೊವಿಡ್​ -19 ಪರೀಕ್ಷಾ ಫಲಿತಾಂಶದೊಂದಿಗೆ ಆಗಮಿಸಬೇಕು. ಇನ್ನು ಮಕ್ಕಳಲ್ಲಿ ದೈಹಿಕ ಅಂತರ ಕಾಪಾಡುವತ್ತ ಗಮನಹರಿಸಬೇಕು. ಒಂದು ಕೊಠಡಿಯಲ್ಲಿ 15 ಮಕ್ಕಳು ಮಾತ್ರ ಇರುವಂತೆ ನೋಡಿಕೊಳ್ಳಬೇಕು’ ಎಂದರು.

Comments are closed.