ಕರ್ನಾಟಕ

ಕಾರು ಚಾಲಕನ ಹತ್ತಿರ ಉಪಸಭಾಪತಿ ಧರ್ಮೇಗೌಡ ಹೇಳಿದ್ದೇನು?

Pinterest LinkedIn Tumblr


ಚಿಕ್ಕಮಗಳೂರು: ಉಪ ಸಭಾಪತಿ ಎಸ್ ಎಲ್ ಧರ್ಮೇಗೌಡ ಆತ್ಮಹತ್ಯೆ ಮಾಡಿಕೊಂಡಿರುವ ವಿಷಾದದ ಸಂಗತಿ ವರದಿಯಾಗಿದೆ. ಕಡೂರು ತಾಲೂಕಿನ ಗುಣಸಾಗರದ ಸಮೀಪ ಸೋಮವಾರ ರಾತ್ರಿ ರೈಲಿಗೆ ತಲೆಕೊಟ್ಟು ದರ್ಮೆಗೌಡ ಅತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸೋಮವಾರ ಸಂಜೆ ಸುಮಾರು 6.30ರ ಸುಮಾರಿಗೆ ಸಖರಾಯಪಟ್ಟಣದ ಮನೆಯಿಂದ ಡ್ರೈವರ್ ಜೊತೆ ಕಾರಿನಲ್ಲಿ ಗುಣಸಾಗರಕ್ಕೆ ಎಸ್.ಎಲ್ ಧರ್ಮೇಗೌಡ ಆಗಮಿಸಿದ್ದರು. ಗುಣಸಾಗರಕ್ಕೆ ಆಗಮಿಸುತ್ತಿದ್ದಂತೆ ರೈಲ್ವೆ ಟ್ರ್ಯಾಕ್‌ ಬಳಿ ಕಾರನ್ನ ನಿಲ್ಲಿಸಲು ಡ್ರೈವರಿಗೆ ಸೂಚನೆ ನೀಡಿದ್ದಾರೆ. ನಂತರ ನನಗೆ ಒಬ್ಬರ ಜೊತೆ ಖಾಸಗಿಯಾಗಿ ಮಾತನಾಡಬೇಕು ಎಂದು ಡ್ರೈವರ್‌ಗೆ ತಿಳಿಸಿದ್ದಾರೆ.

ನೀನು ಮೆನೆಗೆ ಹೋಗು ಎಂದು ಧರ್ಮೆಗೌಡ ಡ್ರೈವರ್ ನನ್ನು ಕಳುಹಿಸಿದ್ದಾರೆ. ಆ ಬಳಿಕ ಕಡೂರಿನ ವ್ಯಕ್ತಿಯೊಬ್ಬರಿಗೆ ಫೋನ್ ಮಾಡಿ ಜನಶತಾಬ್ದಿ ರೈಲು ಬರುವ ಸಮಯ ವಿಚಾರಣೆ ನಡೆಸಿದ್ದಾರೆ. ನಂತರ ಫೋನ್‌ ಸ್ವಿಚ್‌ ಆಫ್‌ ಮಾಡಿಕೊಂಡು ಸ್ವಲ್ಪ ಕಾಲ ಅಲ್ಲೇ ಕಳೆದಿದ್ದಾರೆ. ಬಳಿಕ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

Comments are closed.