ಕರ್ನಾಟಕ

40 ವರ್ಷ ಚಿತ್ರಪ್ರೇಮಿಗಳನ್ನು ರಂಜಿಸಿದ ತಪ್ಪಿಗೆ ಇದೆಂಥಾ ಶಿಕ್ಷೆ..?: ನಟ ಜಗ್ಗೇಶ್

Pinterest LinkedIn Tumblr


ಬೆಂಗಳೂರು: ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅವರ ಪ್ರತಿಮೆ ಧ್ವಂಸಗೊಳಿಸಿರುವ ಕಿಡಿಗೇಡಿಗಳ ವಿರುದ್ಧ ಕಿಡಿಕಾರಿರುವ ನವರಸ ನಾಯಕ ಜಗ್ಗೇಶ್, ಕನ್ನಡಕ್ಕಾಗಿ ದುಡಿದು, ಸಂತನಂತೆ ಬಾಳಿ ನಿರ್ಗಮಿಸಿದ ಕಲಾಬಂಧು ಸತ್ತ ಮೇಲೂ ಕೊಂದು ಅಪಮಾನಿಸಿದ ಪಾಪಿಗಳಿಗೆ ತಕ್ಕಪಾಠ ಕಲಿಸಿ ಎಂದು ಗುಡುಗಿದ್ದಾರೆ.

ಇದು ಕನ್ನಡಕ್ಕೆ ದುಡಿದು ಕಣ್ಮರೆಯಾದ ಕಲಾವಿದರ ಹಣೆಬರಹ..ತುಂಬ ದುಃಖವಾಯಿತು..ಎಲ್ಲಿ ಹೋಯಿತು ಚಪ್ಪಾಳೆ ಸದ್ದು?ಎಲ್ಲಿ ಹೋಯಿತು ಬದುಕಿದ್ದಾಗ ನೋಡಲು ನಿಂತ ಅಭಿಮಾನ?ಎಲ್ಲಿ ಹೋಯಿತು ಇವನಮ್ಮವ ಇವನಮ್ಮವ ಎಂದ ಮನಗಳು? ವಿಷ್ಣು ಪ್ರತಿಮೆ ಧ್ವಂಸ ಕನ್ನಡಕ್ಕೆ ಮಾಡಿದ ಅವಮಾನ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಕನ್ನಡಿಗರನ್ನ 45ವರ್ಷ ರಂಜಿಸಿದ ತಪ್ಪಿಗೆ ಈ ಶಿಕ್ಷೆನಾ? ಆತನ ಆತ್ಮ ಈ ರಾಕ್ಷಸಿ ಕೃತ್ಯ ಗಮನಿಸದೆ ಇರಬಹುದು! ಆದರೆ ನೆನಪಿಡಿ ನೀವು ಅಪಮಾನಿಸಿದ್ದು ನಿಮ್ಮ ರಂಜಿಸಿ ನಿರ್ಗಮಿಸಿದ ನಟನನ್ನಲ್ಲಾ, ಬದಲಾಗಿ ನಿಮ್ಮ ಕನ್ನಡ ನೆಲದ ಮೆಚ್ಚಿನ ಮಗನನ್ನ! ನಿಮ್ಮ ತಂದೆ ತಾಯಿ ವಂಶ ಮೆಚ್ಚಿದ ಆತ್ಮ ಅದು! ನಿಮ್ಮ ಕೃತ್ಯ ಯಾವ ದೇವರು ಕ್ಷಮಿಸನು ಎಂದು ಹೇಳಿದ್ದಾರೆ.

ಯಾವುದೋ ಭಾಷೆ ನಟನ ವೈಭವಿಕರಿಸಿ ವಿಶಾಲ ಹೃದಯ ಎನ್ನುವವರೆ! ನಿಮ್ಮರಂಜಿಸಿ ಖುಷಿಪಡಿಸಿ ಸಂತನಂತೆ ಬಾಳಿ ನಿರ್ಗಮಿಸಿದ ಕಲಾಬಂಧು ಸತ್ತಮೇಲು ಕೊಂದು ಅಪಮಾನಿಸಿದ ಪಾಪಿಗಳಿಗೆ ತಕ್ಕ ಪಾಠ ಕಲಿಸಿ! ಕಲಾ ಬಂಧು ಶಿಲೆಯನ್ನ ಮರು ಸ್ಥಾಪಿಸಿ ಗೌರವಿಸಿ ಕನ್ನಡತನದ ವಿಶಾಲ ಹೃದಯ ಪ್ರದರ್ಶಿಸಿ! ರಂಜಿಸಿ ಕಣ್ಮರೆಯಾದ ಕಲಾವಿದರಿಗೆ ಹೃದಯದಲ್ಲಿ ಜಾಗನೀಡಿ! ಅದು ಕನ್ನಡದ ಧರ್ಮ ಎಂದಿದ್ದಾರೆ.

Comments are closed.