ಕರ್ನಾಟಕ

ಇಂದು 2ನೇ ಹಂತದ ‘ಗ್ರಾ.ಪಂಚಾಯತಿ ಚುನಾವಣೆ: ಇಲ್ಲಿದೆ ಸಂಪೂರ್ಣ ವಿವರ

Pinterest LinkedIn Tumblr


ಬೆಂಗಳೂರು : ಬಹಳ ಕುತೂಹಲ ಮೂಡಿಸಿರುವ ಗ್ರಾಮ ಪಂಚಾಯತ್​ ಸಾರ್ವತ್ರಿಕ ಚುನಾವಣೆಯ ಎರಡನೇ ಹಂತದ ಮತದಾನ ಇಂದು ರಾಜ್ಯಾದ್ಯಂತ ನಡೆಯಲಿದೆ.

ಈ ಹಿನ್ನೆಲೆ ಇದಕ್ಕಾಗಿ ರಾಜ್ಯ ಚುನಾವಣಾ ಆಯೋಗ ಸಕಲ ಸಿದ್ಧತೆ ಕೈಗೊಂಡಿದ್ದು, ಚುನಾವಣೆ ನಡೆಸಲು ಚುನಾವಣಾ ಆಯೋಗ ಸಕಲ ಸಿದ್ದತೆ ನಡೆಸಿದೆ. ಚುನಾವಣೆ ನಡೆಸಲು ಅಗತ್ಯ ಮುನ್ನೆಚ್ಚರಿಕೆ, ಮುಂಜಾಗೃತೆ ಹಾಗೂ ಅಗತ್ಯ ಸಿದ್ದತೆ ನಡೆಸಲಾಗಿದೆ. ಡಿ. 22 ರಂದು ಮೊದಲ ಹಂತದ ಚುನಾವಣೆಗೆ ಮತದಾನ ನಡೆದಿತ್ತು, ಇಂದು ಎರಡನೇ ಹಂತದ ಮತದಾನ ನಡೆಯಲಿದೆ.

ಡಿಸೆಂಬರ್ 27 ರಂದು ಒಟ್ಟು 109 ತಾಲೂಕು ವ್ಯಾಪ್ತಿಯಲ್ಲಿ ಮತದಾನ ನಡೆಯಲಿದ್ದು, 2,709 ಗ್ರಾಮ ಪಂಚಾಯತ್ ನ 43,291 ಸ್ಥಾನಗಳಿಗೆ ಮತದಾನ ನಡೆಯಲಿದೆ.

ಇಂದು ಎಲ್ಲೆಲ್ಲಿ ಮತದಾನ ನಡೆಯಲಿದೆ ಎಂಬುದರ ಬಗ್ಗೆ ಇಲ್ಲಿದೆ ಸಂಪೂರ್ಣ ವಿವರ

ಬೆಂಗಳೂರು ನಗರ

* ಬೆಂಗಳೂರು ದಕ್ಷಿಣ

* ಬೆಂಗಳೂರು ಪೂರ್ವ

* ಆನೇಕಲ್

ಬೆಂಗಳೂರು ಗ್ರಾಮಾಂತರ

* ದೊಡ್ಡಬಳ್ಳಾಪುರ

* ದೇವನಹಳ್ಳಿ

ಚಿತ್ರದುರ್ಗ

* ಹಿರಿಯೂರು

* ಚಳ್ಳಕೆರೆ

* ಮೊಳಕಾಲ್ಮೂರು

ರಾಮನಗರ

* ಚನ್ನಪಟ್ಟಣ

* ಮಾಗಡಿ

ಮೈಸೂರು

* ಮೈಸೂರು

* ನಂಜನಗೂಡು

* ಟಿ ನರಸೀಪುರ

ದಕ್ಷಿಣ ಕನ್ನಡ

* ಬೆಳ್ತಂಗಡಿ

* ಪುತ್ತೂರು

* ಸುಳ್ಯ

* ಕಡಬ

ಉಡುಪಿ

* ಕುಂದಾಪುರ

* ಕಾರ್ಕಳ

* ಕಾಪು

ಕೊಡಗು

* ವಿರಾಜಪೇಟೆ

ಹಾಸನ

* ಅರಸೀಕೆರೆ

* ಬೇಲೂರು

* ಆಲೂರು

* ಹೊಳೆನರಸೀಪುರ

ದಾವಣಗೆರೆ

* ಹರಿಹರ

* ಚನ್ನಗಿರಿ

* ನ್ಯಾಮತಿ

ಕೋಲಾರ

* ಮುಳಬಾಗಿಲು

* ಬಂಗಾರಪೇಟೆ

* ಕೆಜಿಎಫ್

ಚಿಕ್ಕಬಳ್ಳಾಪುರ

* ಗೌರಿಬಿದನೂರು

* ಗುಡಿಬಂಡೆ

ಶಿವಮೊಗ್ಗ

* ಸಾಗರ

* ಶಿಕಾರಿಪುರ

* ಸೊರಬ

* ಹೊಸನಗರ

ತುಮಕೂರು

* ಮಧುಗಿರಿ

* ಶಿರಾ

* ತಿಪಟೂರು

* ತುರುವೇಕೆರೆ

* ಚಿಕ್ಕನಾಯಕನಹಳ್ಳಿ

ಮಂಡ್ಯ

* ಪಾಂಡವಪುರ

* ಶ್ರೀರಂಗಪಟ್ಟಣ

* ಕೃಷ್ಣರಾಜಪೇಟೆ

* ನಾಗಮಂಗಲ

ಚಾಮರಾಜನಗರ

* ಯಳಂದೂರು

* ಕೊಳ್ಳೇಗಾಲ

* ಹನೂರು

ಹಾವೇರಿ

* ಹಾನಗಲ್

* ಶಿಗ್ಗಾವ್

* ಸವಣೂರು

* ಬ್ಯಾಡಗಿ

ಬೆಳಗಾವಿ

* ಸವದತ್ತಿ

* ರಾಮದುರ್ಗ

* ಚಿಕ್ಕೋಡಿ

* ನಿಪ್ಪಾಣಿ

* ಅಥಣಿ

* ಕಾಗವಾಡ

* ರಾಯಭಾಗ

ವಿಜಯಪುರ

* ಇಂಡಿ

* ಚಡಚಣ

* ಸಿಂದಗಿ

* ದೇವರ ಹಿಪ್ಪರಗಿ

ಬಾಗಲಕೋಟೆ

* ಬಾಗಲಕೋಟೆ

* ಹುನಗುಂದ

* ಬಾದಾಮಿ

* ಇಳಕಲ್

* ಗುಳೇದಗುಡ್ಡ

ಧಾರವಾಡ

* ಹುಬ್ಬಳ್ಳಿ

* ಕುಂದಗೋಳ

* ನವಲಗುಂದ

* ಅಣ್ಣಿಗೇರಿ

ಗದಗ

* ಮುಂಡರಗಿ

* ರೋಣ

* ಗಜೇಂದ್ರಗಡ

* ನರಗುಂದ

ಉತ್ತರ ಕನ್ನಡ

* ಶಿರಸಿ

* ಸಿದ್ದಾಪುರ

* ಯಲ್ಲಾಪುರ

* ಮುಂಡಗೋಡ

* ಹಳಿಯಾಳ

* ದಾಂಡೇಲಿ

* ಜೋಯಿಡಾ

ಬೀದರ್

* ಬೀದರ್

* ಔರಾದ್

* ಕಮಲನಗರ

ಬಳ್ಳಾರಿ

* ಸಂಡೂರು

* ಹಗರಿಬೊಮ್ಮನಹಳ್ಳಿ

* ಕೂಡ್ಲಿಗಿ

* ಕೊಟ್ಟೂರು

* ಹೂವಿನಹಡಗಲಿ

* ಹರಪನಹಳ್ಳಿ

ರಾಯಚೂರು

* ಲಿಂಗಸಗೂರು

* ಮಸ್ಕಿ

* ಸಿಂಧನೂರು

ಯಾದಗಿರಿ

* ಯಾದಗಿರಿ

* ಗುರುಮಟಕಲ್

* ವಡಗೇರಾ

ಕಲಬುರಗಿ

* ಯಡ್ರಾಮಿ

* ಜೇವರ್ಗಿ

* ಚಿತ್ತಾಪುರ

* ಚಿಂಚೋಳಿ

* ಸೇಡಂ

ಕೊಪ್ಪಳ

* ಕುಷ್ಟಗಿ

* ಕಾರಟಗಿ

* ಕನಕಗಿರಿ ಹಾಗೂ ಗಂಗಾವತಿ

Comments are closed.