Uncategorized

ಇನ್‌ಸ್ಟಾಗ್ರಾಂ ಸ್ನೇಹಿತ ಕರೆದ ಎಂದು ಪದೇ ಪದೇ ಹೋದ ಯುವತಿಗೆ ಆಗಿದ್ದೇನು ಗೊತ್ತಾ?

Pinterest LinkedIn Tumblr


ಉಜ್ಜಯಿನಿ: ಒಬ್ಬ ಇನ್‌ಸ್ಟಾಗ್ರಾಂ ಸ್ನೇಹಿತ ಕರೆದ ಎಂದು ಪದೇ ಪದೇ ಹೋದ ಯುವತಿಯೊಬ್ಬಳು ಇದೀಗ ಆತ ತಾನು ಹೋದಾಗಲೆಲ್ಲವೂ ಅತ್ಯಾಚಾರ ಎಸಗುತ್ತಿದ್ದ ಎಂದು ದೂರು ದಾಖಲು ಮಾಡಿದ್ದಾಳೆ!

ಮಧ್ಯಪ್ರದೇಶದ ಉಜ್ಜಯಿನಿ ಮೂಲದ 22 ವರ್ಷದ ಯುವತಿಯೊಬ್ಬಳು ಈಗ ಪೊಲೀಸರಲ್ಲಿ ದೂರು ದಾಖಲಿಸಿದ್ದಾಳೆ. 20 ವರ್ಷ ವಯಸ್ಸಿನ ಯುವಕನ ವಿರುದ್ಧ ಈಕೆಯ ದೂರು.

ಇನ್‌ಸ್ಟಾಗ್ರಾಂನಲ್ಲಿ ‘ಜಿದ್ದಿ ಲಡ್ಕಾ’ (ಹಠಮಾರಿ ಯುವಕ) ಹೆಸರಿನಲ್ಲಿ ಇನ್ಸ್‌ಸ್ಟಾಗ್ರಾಂನಿಂದ ನನಗೆ ಫ್ರೆಂಡ್‌ ರಿಕ್ವೆಸ್ಟ್‌ ಬಂದಿತ್ತು. ನಾನು ಅಕ್ಸೆಪ್ಟ್‌ ಮಾಡಿದೆ. ಆತನ ನಿಜವಾದ ಹೆಸರೂ ನನಗೆ ಗೊತ್ತಿಲ್ಲ. 2019ರ ಜೂನ್‌ ತಿಂಗಳಿನಿಂದ ಇನ್ಸ್‌ಸ್ಟಾಗ್ರಾಂ ನಲ್ಲಿ ನಮ್ಮ ಮಾತುಕತೆ ನಡೆದಿದೆ.

ಆತ ಬಣ್ಣಬಣ್ಣದ ಮಾತನಾಡಿ ನನ್ನ ಸ್ನೇಹ ಬೆಳೆಸಿದ. ತಾನು ನಿನ್ನನ್ನು ಮದುವೆಯಾಗುತ್ತೇನೆ ಎಂದ. ನಾನು ಅದೆಲ್ಲಾ ಬೇಡ ಅಂದೆ. ಒಮ್ಮೆಯಾದರೂ ಸಿಗಲು ಬಾ ಎಂದ. ನಾನು ಮೊದಲಿಗೆ ನಿರಾಕರಿಸಿದೆ. ನಂತರ ಕೈಯನ್ನು ಕೊಯ್ದುಕೊಂಡಂತೆ ಇರುವ ಫೋಟೋ ಕಳುಹಿಸಿದ, ನೀನು ಬರದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ, ನಿನ್ನನ್ನು ತುಂಬಾ ಇಷ್ಟಪಟ್ಟಿದ್ದೇನೆ ಅಂದ.

ಆತ್ಮಹತ್ಯೆಗೆ ಹೆದರಿ ನಾನು ಹೋದೆ. ಆತ ನನ್ನ ಮೇಲೆ ಅತ್ಯಾಚಾರ ಮಾಡಿದ. ಆಮೇಲೆ ಮದುವೆಯಾಗುತ್ತೇನೆ ಎಂದ. ಇಷ್ಟಾದ ಮೇಲೆ ಪದೇ ಪದೇ ಹೋಟೆಲ್‌ಗೆ ಕರೆಯುತ್ತಿದ್ದ. ಬರದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎನ್ನುತ್ತಿದ್ದ. ಅದಕ್ಕೆ ನಾನು ಹೆದರಿ ಹೋಗುತ್ತಿದ್ದೆ. ಹೋದಾಗಲೆಲ್ಲಾ ಅತ್ಯಾಚಾರ ಮಾಡುತ್ತಿದ್ದ. ಆದರೆ ಈಗ ಹುಡುಗನ ಪತ್ತೆಯೇ ಇಲ್ಲ. ನನಗೆ ಭಯವಾಗುತ್ತಿದೆ. ಮದುವೆಯಾಗುತ್ತಾನೆ ಎಂದು ನಂಬಿದ್ದರಿಂದ ದೇಹ ಒಪ್ಪಿದೆ ಎಂದು ದೂರಿನಲ್ಲಿ ಹೇಳಿರುವ ಯುವತಿ, ಅತ್ಯಾಚಾರದ ಕೇಸ್‌ ದಾಖಲು ಮಾಡಿದ್ದಾಳೆ.

Comments are closed.