ಕರ್ನಾಟಕ

ಒಂದೇ ಕಾಲೇಜಿನ 21 ವಿದ್ಯಾರ್ಥಿನಿಯರಿಗೆ ಕರೊನಾ

Pinterest LinkedIn Tumblr


ದಾವಣಗೆರೆ: ಕರೊನಾ ವ್ಯಾಪ್ತಿ ದಿನೇದಿನೆ ವಿಸ್ತರಿಸುತ್ತಲೇ ಇದೆ. ಇದರ ಬೆನ್ನಲ್ಲೇ ಹೊಸ ರೂಪಾಂತರ ಕರೊನಾ ಸೋಂಕಿನ ಭೀತಿಯೂ ಆವರಿಸಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಒಂದೇ ಕಾಲೇಜಿನ 21 ವಿದ್ಯಾರ್ಥಿನಿಯರಿಗೆ ಕೋವಿಡ್​ ಪಾಸಿಟಿವ್​ ಬಂದಿದೆ.

ದಾವಣಗೆರೆಯ ನರ್ಸಿಂಗ್‌ ಕಾಲೇಜಿನ 21 ವಿದ್ಯಾರ್ಥಿನಿಯರಿಗೆ ಕರೊನಾ ಸೋಂಕು ದೃಢಪಟ್ಟಿದ್ದು, ಚಿಗೆಟೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಸಹಜವಾಗಿ ಎಲ್ಲ ಕಾಲೇಜಿನಂತೆ ಇಲ್ಲಿಯೂ ವಿದ್ಯಾರ್ಥಿಗಳನ್ನು ಕೋವಿಡ್​ ಪರೀಕ್ಷೆಗೆ ಒಳಪಡಿಸಲಾಗಿತ್ತು. ಮೂರು ದಿನಗಳಿಂದ ಸ್ವ್ಯಾಬ್‌ ಸಂಗ್ರಹಿಸಲಾಗಿತ್ತು. ಆ ಪೈಕಿ 21 ವಿದ್ಯಾರ್ಥಿನಿಯರ ವರದಿ ಪಾಸಿಟಿವ್​ ಬಂದಿದೆ. ಈ ವಿದ್ಯಾರ್ಥಿಗಳು ಕೇರಳಾದಿಂದ ಬಂದಿದ್ದರು.

ಚಿಕಿತ್ಸೆ ನೀಡಲಾಗುತ್ತಿದ್ದು. ಎಲ್ಲರೂ ಸ್ಪಂದಿಸುತ್ತಿದ್ದಾರೆ. ಆತಂಕ ಪಡುವ ಅಗತ್ಯವಿಲ್ಲ. ಇದ್ಯಾವುದೂ ಇಂಗ್ಲೆಂಡ್‌ ಕರೊನಾ ಅಲ್ಲ ಎಂದು ‘ದಿಗ್ವಿಜಯ ನ್ಯೂಸ್‌’ಗೆ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಾಘವನ್‌ ಮಾಹಿತಿ ನೀಡಿದ್ದಾರೆ.

Comments are closed.