ಕರ್ನಾಟಕ

ಮಹಿಳೆಯರಿಗೆ ಅಶ್ಲೀಲ ಚಿತ್ರ ಕಳುಹಿಸುತ್ತಿದ್ದ ನಿರ್ಮಾಪಕ!

Pinterest LinkedIn Tumblr


ಬೆಂಗಳೂರು: ಪತಿಯ ರಾಸಲೀಲೆ ಪ್ರಶ್ನಿಸಿದ ಹೆಂಡತಿಗೆ ಹಿಂಸೆ ನೀಡಿದ ಚಿತ್ರ ನಿರ್ಮಾಪಕ ದಿನಕರ್​ ವಿರುದ್ಧ ದೂರು​ ದಾಖಲಾಗಿದೆ.

ದಿನಕರ್​ ಮಲಯಾಳಂ ಸಿನಿಮಾ ನಿರ್ಮಾಪಕ. ಇವರ ಪತ್ನಿ ರೋಷಿಣಿ ಜತೆಗೆ ಮತ್ತೊಬ್ಬ ಮಹಿಳೆ ದಿನಕರ್​ ವಿರುದ್ಧ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾರೆ. ರೋಷಿಣಿ ನಿರ್ದೇಶಕಿ ಹಾಗೂ ಫಿಲ್ಮಿ ಫ್ಯಾಷನ್ ಡಿಸೈನರ್. ಇವರ ಗಂಡ ದಿನಕರ್ ಹಲವು ಮಹಿಳೆಯರಿಗೆ ಅಶ್ಲೀಲ ಮೆಸೇಜ್ ಮಾಡುತ್ತಿದ್ದ. ಅಲ್ಲದೆ ಹೊಸ ಚಿತ್ರ ನಿರ್ಮಾಣ ಮಾಡ್ತಿದ್ದೀನಿ, ನಿಮಗೆ ಅವಕಾಶ ಕೊಡ್ತೀನಿ ಅಂತ ಹಲವು ಯುವತಿಯರನ್ನ ಫೇಸ್ಬುಕ್, ಇನ್​ಸ್ಟಾಗ್ರಾಮ್​ನಲ್ಲಿ ಪರಿಚಯ ಮಾಡಿಕೊಂಡು ಅವರಿಗೆ ಅಶ್ಲೀಲ ಮೆಸೇಜ್​ ಕಳುಹಿಸುತ್ತಿದ್ದ. ಅಲ್ಲದೆ ಕೆಲವರೊಂದಿಗೆ ಅಕ್ರಮ ಸಂಬಂಧ ಬೆಳೆಸಿದ್ದಾನಂತೆ. ಇದನ್ನು ಪ್ರಶ್ನಿಸಿದ್ದಕ್ಕೆ ಟಾರ್ಚ​ರ್​ ಕೊಟ್ಟಿದ್ದಾನೆ ಎಂದು ಆರೋಪಿಸುರುವ ಪತ್ನಿ, ಗಂಡನ ರಾಸಲೀಲೆ ಬಗ್ಗೆ ದೂರಿನಲ್ಲಿ ವಿವರಿಸಿದ್ದಾರೆ.

ರೋಷಿಣಿಗೆ ತಿಳಿಯದಂತೆ ಮಾರತ್ತಹಳ್ಳಿಯ ಮಹಿಳೆ ಜತೆ ಸಲುಗೆ ಬೆಳೆಸಿಕೊಂಡಿದ್ದ ದಿನಕರ್, ಆಕೆಗೆ ಪದೇಪದೆ ಅಶ್ಲೀಲ ಮೆಸೇಜ್ ಮಾಡಿ ಟಾರ್ಚರ್ ಕೊಡುತ್ತಿದ್ದ. ಹಾಗಾಗಿ ರೋಷಿಣಿ ಮನೆಗೆ ಬಂದ ಸಂತ್ರಸ್ತೆ ಅಳಲು ತೋಡಿಕೊಂಡಿದ್ದಳು. ಈ ವೇಳೆ ದಿನಕರ್ ಮೊಬೈಲ್ ಅನ್ನು ರೋಷಿಣಿ ಚೆಕ್ ಮಾಡಿದಾಗ ಆತನ ರಾಸಲೀಲೆ ಬೆಳಕಿಗೆ ಬಂದಿತ್ತು. ಇದನ್ನು ಪ್ರಶ್ನಿಸಿದ ಪತ್ನಿ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ. ಸಂತ್ರಸ್ತ ಮಹಿಳೆ ಹಾಗೂ ದಿನಕರ್ ಪತ್ನಿ ಇಬ್ಬರಿಂದಲೂ ಮಾರತ್ತಹಳ್ಳಿ ಠಾಣೆಯಲ್ಲಿ ದಿನಕರ್ ವಿರುದ್ಧ ದೂರು ದಾಖಲಾಗಿದೆ.

ದಿನಕರ್ ಮೂಲತಃ ಮಲಯಾಳಿ ಆದರೂ ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲಿ. ರೋಷಿಣಿ ಕೊಡಗಿನವರು. 2006ರಲ್ಲಿ ದಿನಕರ್ ಹಾಗೂ ರೋಷಿಣಿ ಮದುವೆ ಆಗಿದ್ದರು. ಮದುವೆ ನಂತರ ದಂಪತಿ ಬೆಂಗಳೂರಿನಲ್ಲೇ ವಾಸವಿದೆ. ಇಬ್ಬರೂ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ದಿನಕರ್ ಮಲಯಾಳಂನ ‘ಮೈ ಸ್ಟೋರಿ’ ಚಿತ್ರ ನಿರ್ಮಾಣ ಮಾಡಿದ್ದಾರೆ. ಮಲಯಾಳಂ ನಟ ಪೃಥ್ವಿರಾಜ್ ಹಾಗೂ ಪಾರ್ವತಿ ಮೆನನ್ ಅಭಿನಯದ ಚಿತ್ರ 2018ರಲ್ಲಿ ತೆರೆ ಕಂಡಿತ್ತು. ರೋಷಿಣಿ ‘ಮೈ ಸ್ಟೋರಿ’ ಚಿತ್ರ ನಿರ್ದೇಶನ ಮಾಡಿದ್ದರು. ಕನ್ನಡ, ತಮಿಳು, ಮಲಯಾಳಂ ಸೇರಿ ಸೌತ್ ಇಂಡಿಯಾದ 70ಕ್ಕೂ ಹೆಚ್ಚು ಸಿನಿಮಾಗಳಿಗೆ ರೋಷಿಣಿ ವಸ್ತ್ರ ವಿನ್ಯಾಸಕಿ ಆಗಿದ್ದಾರೆ.

ಕನ್ನಡದ ಕಲ್ಲರಳಿ ಹೂವಾಗಿ, ಮುಂಗಾರು ಮಳೆ-2 ಹಾಗೂ ದರ್ಶನ್ ಅಭಿನಯದ ರಾಜವೀರ, ಮದಕರಿ ನಾಯಕ ಸಿನಿಮಾಗಳಿಗೂ ವಸ್ತ್ರ ವಿನ್ಯಾಸಕಿ ರೋಷಿಣಿ. ದಿನಕರ್-ರೋಷಿಣಿ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ.

Comments are closed.