ಹಾವೇರಿ: ಬುದ್ಧಿಮಾಂದ್ಯ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಿಯನ್ನು ಹಾವೇರಿ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಹಾವೇರಿ ತಾಲೂಕಿನ ಯತ್ತಿನಹಳ್ಳಿ ಗ್ರಾಮದ ನಿವಾಸಿ ತಸ್ಲೀಮ್ ಸೆರವಾಡ (24) ಬಂಧಿತ ಆರೋಪಿ. ಊಟ ಕೊಡುವ ನೆಪದಲ್ಲಿ ಡಿಸೆಂಬರ್ 7ರ ಮಧ್ಯರಾತ್ರಿ ಆರೋಪಿ ತಸ್ಲೀಮ್ ಮುಸುಕು ಹಾಕಿಕೊಂಡು 40 ರಿಂದ 45 ವಯಸ್ಸಿನ ಬುದ್ಧಿಮಾಂಧ್ಯ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದ. ಹಾವೇರಿಯ ಎಪಿಎಂಸಿ ಬಳಿಯ ಉಜ್ಜಿವನ್ ಫೈನಾನ್ಸ್ ಕಟ್ಟಡದಲ್ಲಿ ಘಟನೆ ನಡೆದಿತ್ತು.
ಹಾವೇರಿ ಸಿಟಿಯಲ್ಲಿ ಆಟೋ ಚಾಲಕನಾಗಿದ್ದ ಆರೋಪಿ. ರಾತ್ರಿ ಸಮಯದಲ್ಲಿ ಆಟೋ ಚಾಲನೆ ಮಾಡುತ್ತಿದ್ದ. ಸಂತ್ರಸ್ತ ಮಹಿಳೆಗೆ ಹಿಂದೂ-ಮುಂದೂ ಯಾರು ಇಲ್ಲ. ಇವಳು ಅನಾಥೆ ಎಂದು ತನ್ನ ಕಾಮತೃಷೆಗೆ ಬಳಸಿಕೊಂಡಿದ್ದ. ಐದು ಬಾರಿ ಅತ್ಯಾಚಾರ ಮಾಡಿದ್ದ ಎನ್ನಲಾಗಿದೆ.
ಸಿಸಿಟಿವಿ ದೃಶ್ಯ ನೋಡಿ ಬಿಲ್ಡಿಂಗ್ ಮಾಲೀಕ ನವೀನಕುಮಾರ ತೋಟಣ್ಣನವರ ಪೋಲಿಸರಿಗೆ ದೂರು ನೀಡಿದ್ದರು. ಇದೀಗ ಆರೋಪಿಯನ್ನು ಡಿವೈಎಸ್ಪಿ ವಿಜಯಕುಮಾರ ಮತ್ತು ಸಿಪಿಐ ಮಂಜಣ್ಣ ನೇತೃತ್ವದ ಅಪರಾಧ ವಿಭಾಗದ ತಂಡ ಬಂಧಿಸಿದೆ.