ರಾಷ್ಟ್ರೀಯ

8 ತಿಂಗಳ ನಂತರ ನಿರ್ಬಂಧ ತೆರವುಗೊಳಿಸಿದ ತಿರುಪತಿ ಆಡಳಿತ ಮಂಡಳಿ: ಭಕ್ತರಿಗೆ ಸಂತೋಷದ ಸುದ್ದಿ ನೀಡಿದ ದೇವಾಲಯ

Pinterest LinkedIn Tumblr


ತಿರುಪತಿ: 8 ತಿಂಗಳ ಕಾಲ ಇದ್ದ ನಿರ್ಬಂಧವನ್ನು ಇದೀಗ ತಿರುಮಲ ತಿರುಪತಿ ದೇವಸ್ಥಾನಮ್ಸ್​ (ಟಿಟಿಡಿ) ಆಡಳಿತ ಮಂಡಳಿ ತೆಗೆದುಹಾಕಿದೆ. ಈ ಮೂಲಕ ಭಕ್ತರಿಗೆ ಸಂತೋಷದ ಸುದ್ದಿಯೊಂದನ್ನು ನೀಡಿದೆ.

ಹೌದು.. ಕರೊನಾ ಹಾವಳಿಯಿಂದಾಗಿ ದೇವಸ್ಥಾನದಲ್ಲಿ ಎಂಟು ತಿಂಗಳ ಹಿಂದೆ ನಿರ್ಬಂಧವೊಂದನ್ನು ವಿಧಿಸಲಾಗಿತ್ತು. ಅಂದರೆ, 65 ವರ್ಷಕ್ಕೆ ಮೇಲ್ಪಟ್ಟ ಹಾಗೂ 10 ವರ್ಷದೊಳಗಿನ ಮಕ್ಕಳಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು. ಕರೊನಾ ಪ್ರಕರಣಗಳ ಸಂಖ್ಯೆ ತಗ್ಗಿರುವ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದೆ ದೇವಸ್ಥಾನಕ್ಕೆ ಮತ್ತೆ ಪ್ರವೇಶ ಕಲ್ಪಿಸಲಾಗಿತ್ತು. ಆದರೆ ವೃದ್ಧರು ಹಾಗೂ ಮಕ್ಕಳ ಹಿತಕ್ಕಾಗಿ ಅವರಿಗಿದ್ದ ನಿರ್ಬಂಧ ಮುಂದುವರಿದಿತ್ತು. ಈಗ ಆ ನಿರ್ಬಂಧವನ್ನೂ ದೇವಸ್ಥಾನದ ಆಡಳಿತ ಮಂಡಳಿ ತೆಗೆದು ಹಾಕಿದೆ. ಮಾತ್ರವಲ್ಲ, ಗರ್ಭಿಣಿಯರ ಪ್ರವೇಶಕ್ಕೂ ಈ ಹಿಂದೆ ನಿರ್ಬಂಧ ವಿಧಿಸಲಾಗಿದ್ದು, ಈಗ ಅದನ್ನು ಕೂಡ ತೆಗೆದುಹಾಕಲಾಗಿದೆ. ಹೀಗಾಗಿ ಹಿರಿ-ಕಿರಿಯರೆನ್ನದೆ ಎಲ್ಲರೂ ಈಗ ದೇವಸ್ಥಾನಕ್ಕೆ ಪ್ರವೇಶಿಸಬಹುದಾಗಿದೆ.

ಇನ್ನು ಸದ್ಯ ಸ್ಪೆಷಲ್​ ಕ್ಯೂ ವ್ಯವಸ್ಥೆ ಇಲ್ಲದಿರುವುದರಿಂದ ಈಗ ನಿರ್ಬಂಧ ತೆರವುಗೊಳಿಸಲಾಗಿರುವ ಕೆಟಗರಿಯ ಭಕ್ತರು ಕೂಡ ಪ್ರಸ್ತುತ ಜಾರಿಯಲ್ಲಿರುವ ಸಾಮಾನ್ಯ ಸರದಿಯಲ್ಲೇ ಸಾಗಿ ದೇವರ ದರ್ಶನ ಪಡೆಯಬೇಕು. ಅಲ್ಲದೆ ಭಕ್ತರು ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸುವುದು ಕಡ್ಡಾಯ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.

Comments are closed.