ಕರ್ನಾಟಕ

ಸಿದ್ದರಾಮಯ್ಯ ಜೆಡಿಎಸ್ ಮುಗಿಸುವುದು ನನ್ನ ಗುರಿ ಅಂದಿದ್ದರು: ಮಾಜಿ ಸಭಾಪತಿ ಬಸವರಾಜ್ ಹೊರಟ್ಟಿ

Pinterest LinkedIn Tumblr


ಧಾರವಾಡ: ಕಾಂಗ್ರೆಸ್ ಜೊತೆ ಕೈ ಜೋಡಿಸೋದು ಬೇಡ ಅಂತಾ ನಾವು ಕುಮಾರಸ್ವಾಮಿಗೆ ಮೊದಲೇ ಹೇಳಿದ್ದೆವು. ಸ್ವಲ್ಪ ತಡೆದುಕೊಳ್ಳಿ ಅಂದಿದ್ದೆವು ಎಂದು ಮಾಜಿ ಸಭಾಪತಿ ಬಸವರಾಜ್ ಹೊರಟ್ಟಿ ಹೇಳಿದರು.

ಧಾರವಾಡದಲ್ಲಿ ಮಾತನಾಡಿದ ಹೊರಟ್ಟಿ, ದೋಸ್ತಿ ಸರ್ಕಾರದಲ್ಲಿ ಸಿದ್ದರಾಮಯ್ಯ ಜೆಡಿಎಸ್ ಮುಗಿಸೋದು ನನ್ನ ಕೆಲಸ ಅಂದಿದ್ದರು. ಸಿದ್ದರಾಮಯ್ಯ ಹೆಚ್‍ಡಿಕೆ ಜೊತೆಯಾಗಿ ಕೂತು ಮಾತಾಡೋ ಸ್ಥಿತಿ ನಿರ್ಮಾಣವಾಗಲಿಲ್ಲ. ಇಬ್ಬರೂ ಕುಳಿತು ಮಾತನಾಡಬಹುದಿತ್ತು. ಸಮನ್ವಯತೆಯಿಂದ ಹೋಗಬೇಕಿತ್ತು ಆದರೆ ಇದು ಒತ್ತಾಯದ ಮದುವೆ ಆದಂತಾಯಿತು ಎಂದು ಹೇಳಿದರು.

ಈ ವೇಳೆ ಲೋಕಸಭಾ ಚುನಾವಣೆಯಲ್ಲಿ ಎಂಟು ಸೀಟು ತೆಗೆದುಕೊಳ್ಳಿ ಎಂದು ಬಿಜೆಪಿಯಿಂದ ಆಫರ್ ಬಂದಿತ್ತು. ಸಿಎಂ ಆಗಿ ಮುಂದುವರೆಯಲು ಹೆಚ್‍ಡಿಕೆಗೆ ಆಫರ್ ಕೊಟ್ಟಿದ್ದರು ಎಂದು ಕೂಡಾ ಹೇಳಿದರು. ಆದರೆ ಜಾತ್ಯಾತೀತ ನಿಲುವು ಹಿನ್ನೆಲೆ ದೇವೇಗೌಡರು ಬಿಜೆಪಿ ಸರ್ಕಾರ ಜೊತೆ ಬೇಡ ಅಂದಿದ್ದರು. ಗೌಡರು ಏನೇ ಹೇಳಿದರು ಅದರಲ್ಲಿ ಆದರ್ಶವಿರುತ್ತೆ. ಆದರೆ ಇವರೆಲ್ಲ ಗೌಡರನ್ನೂ ಟೀಕೆ ಮಾಡುತ್ತಿದ್ದಾರೆ ಎಂದರು.

ಜನವರಿಯಿಂದ ಬದಲಾವಣೆ ಎಂದು ಹೆಚ್‍ಡಿಕೆ ಹೇಳಿಕೆ ವಿಚಾರವಾಗಿ ಮಾತನಾಡಿದ ಹೊರಟ್ಟಿ, ಕುಮಾರಸ್ವಾಮಿ ಏನೇ ಹೇಳಿದರು ಸತ್ಯವಿರುತ್ತೆ. ಅವರು ಎಲ್ಲವನ್ನು ತಿಳಿದುಕೊಂಡೇ ಹೇಳಿರುತ್ತಾರೆ. ಬಿಜೆಪಿಯಲ್ಲಿ 105 ಮತ್ತು 17ರ ಮಧ್ಯೆ ತಿಕ್ಕಾಟ ನಡೆದಿದೆ. 17 ಜನ ಬಂದ ಮೇಲೆ ಸರ್ಕಾರ ರಚನೆಯಾಗಿದೆ. ಅವರಿಗೆಲ್ಲ ಮಂತ್ರಿ ಸ್ಥಾನ ಕೊಡಬೇಕಾಗುತ್ತೆ. ಹೀಗಾಗಿ ವಿಶ್ವನಾಥ್ ಅವರು ಆರೋಪ ಮಾಡಿರೋದು ಸಹಜ ಎಂದರು.

Comments are closed.