ಕರ್ನಾಟಕ

ಸಿದ್ದರಾಮಯ್ಯರ ಕ್ರಾಸ್‌ ಬ್ರೀಡ್‌ ಹೇಳಿಕೆ: ಸೋನಿಯಾ, ಪ್ರಿಯಾಂಕಾರನ್ನ ಏನೆಂದು ಕರೆಯಬೇಕು?- ಈಶ್ವರಪ್ಪ

Pinterest LinkedIn Tumblr


ದಾವಣಗೆರೆ: ಸಿದ್ದರಾಮಯ್ಯ ಅವರ ಕ್ರಾಸ್‌ ಬ್ರೀಡ್‌ ಹೇಳಿಕೆ ಅವರ ಪಕ್ಷ ಎಂಥದ್ದು ಎಂದು ತೋರಿಸುತ್ತದೆ ಎಂದು ಸಚಿವ ಕೆಎಸ್‌ ಈಶ್ವರಪ್ಪ ಮಾಜಿ ಸಿಎಂ ಸಿದ್ದರಾಮಯ್ಯಗೆ ತಿರುಗೇಟು ನೀಡಿದರು.

ನಗರದ ಜಿಎಂಐಟಿ ಕಾಲೇಜಿನಲ್ಲಿ ಶುಕ್ರವಾರ ನಡೆದ ‘ಗ್ರಾಮ ಸ್ವರಾಜ್ಯ ಸಮಾವೇಶ’ದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನ್ನು ದೇಶದಲ್ಲಿ ಬೂತು ಕನ್ನಡಿ ಹಾಕಿ ಹುಡುಕಬೇಕಾಗಿದ್ದು, ಕಾಂಗ್ರೆಸ್ ಬದುಕಿದೆ ಎಂದು ಡಿಕೆಶಿ, ಸಿದ್ದರಾಮಯ್ಯ ಅವಾಗವಾಗ ರಿಯಾಕ್ಷನ್ ಕೊಡುತ್ತಾರೆ. ಅದರಲ್ಲೂ ಸಿದ್ದರಾಮಯ್ಯ ಕ್ರಾಸ್ ಬ್ರೀಡ್ ಅಂತ ಏನೋ ಹೇಳಿಕೆ ನೀಡುತ್ತಾರೆ. ಹಾಗಾದ್ರೆ ಕ್ರಾಸ್ ಬೀಡ್ ಅಂತ ಯಾವುದಕ್ಕೆ ಕರೀತಾರೆ ಎಂದು ಕಾರ್ಯಕರ್ತರಿಗೆ ಕೆ.ಎಸ್.ಈಶ್ವರಪ್ಪ ಪ್ರಶ್ನೆ ಕೇಳಿದರು. ಇದಕ್ಕೆ ಬಿಜೆಪಿ ಕಾರ್ಯಕರ್ತರು ನಾಯಿಗಳಿಗೆ ಕ್ರಾಸ್ ಬೀಡ್ ಎಂದು ಕರೀತಿವಿ ಎಂದರು.

ಹಾಗಾದ್ರೆ ಇಂದಿರಾಗಾಂಧಿ ಫಿರೋಜ್‌ ಖಾನ್ ಮದುವೆಯಾದರು. ಸೋನಿಯಾ ಗಾಂಧಿ, ರಾಜೀವ್ ಗಾಂಧಿಯನ್ನು ಮದುವೆಯಾದರು. ಪ್ರಿಯಾಂಕ ಗಾಂಧಿ, ರಾಬರ್ಟ್ ವಾದ್ರಾನನ್ನು ಮದುವೆಯಾದ್ರು ಅವರನ್ನು ಏನೆಂದು ಕರೆಯಬೇಕು ಎಂದು ಪ್ರಶ್ನಿಸಿದರು. ಮುಸ್ಲಿಂ ಯುವಕರು ಹಿಂದು ಯುವತಿಯರನ್ನು ವಂಚಿಸಿ ಮದುವೆಯಾಗಿ ಅರ್ಧಕ್ಕೆ ಕೈಬಿಡುವ ಘಟನೆಗಳು ಬೇಕಾದಷ್ಟಿದೆ ಎಂದು ಹೇಳಿದರು.

ಶಿವಮೊಗ್ಗದಲ್ಲಿ ಅರ್ಚಕನ ಕುಟುಂಬದ ಮಗಳೊಬ್ಬಳು ಮುಸ್ಲಿಂ ಯುವಕನನ್ನು ಮದುವೆಯಾಗಿ ಗರ್ಭಿಣಿಯಾಗಿ ಕೈ ಬಿಟ್ಟಿರುವ ಪ್ರಕರಣ ಸಾಕ್ಷಿಯಾಗಿದೆ. ಇಂತಹ ಹೆಣ್ಣು ಮಕ್ಕಳ ಕಣ್ಣೀರನ್ನು ನೋಡಿದರೆ ಕರುಳು ಕಿತ್ತು ಬರುತ್ತದೆ. ಶಿವಮೊಗ್ಗದಲ್ಲಿಯೂ ಸಹ ಈ ರೀತಿಯ ಘಟನೆಗಳು ನನಗೆ ತಿಳಿದುಬಂದಿವೆ. ಸಿದ್ದರಾಮಯ್ಯ ಅವರಿಗೆ ಹಿಂದು ಹೆಣ್ಣುಮಕ್ಕಳ ಬಗ್ಗೆಯೇ ಅವರಿಗೆ ಗೊತ್ತಿಲ್ಲ. ಸಿದ್ದರಾಮಯ್ಯ ಮನೆ ಹೆಣ್ಣು ಮಕ್ಕಳನ್ನು ತೆಗೆದುಕೊಂಡು ಹೋದ್ರೆ ಅವರಿಗೆ ಆ ನೋವಿನ ಬಗ್ಗೆ ಗೊತ್ತಾಗುತ್ತದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದರು.

ಲವ್ ಜಿಹಾದ್ ಹೆಸರಿನಲ್ಲಿ ಬಡ ಹೆಣ್ಣುಮಕ್ಕಳಿಗೆ ಮೋಸ ಮಾಡಿ ಹಾಳು ಮಾಡುವುದನ್ನು ಸಹಿಸುವುದಿಲ್ಲ. ಲವ್ ಜಿಹಾದ್ ಬಗ್ಗೆ ನಿಮಗೆ ಎಷ್ಟು ಬೇಕು ಅಷ್ಟು ಸಾಕ್ಷಿ ಕೊಡುತ್ತೇನೆ. ಉತ್ತರ ಪ್ರದೇಶದಲ್ಲಿ ಜಾರಿಗೆ ತಂದಿರುವ ಲವ್‌ಜಿಹಾದ್ ಕಾನೂನನ್ನು ಜಾರಿಗೆ ತಂದೆ ತರುತ್ತೇವೆ ಎಂದು ಸಚಿವ ಈಶ್ವರಪ್ಪ ಮಾತು ನೀಡಿದರು.

ಸಿದ್ದರಾಮಯ್ಯ ಗೋಹತ್ಯೆ ವಿಚಾರದಲ್ಲಿ ಮಾತನಾಡಿದ್ದಾರೆ. ಗೋವು ಹಿಂದು ಸಂಸ್ಕೃತಿಯ ಪ್ರತೀಕವಾಗಿದೆ. ಮುದಿ ದನಗಳನ್ನು ಬಿಜೆಪಿ, ಆರ್‌ಎಸ್‌ಎಸ್ ಅವರ ಮನೆ ಬಾಗಿಲಿಗೆ ಬಿಡಬೇಕು ಎಂಬ ಅವರ ಹೇಳಿಕೆ ಅಸಂಬದ್ದವಾಗಿದೆ. ಅವರ ತಾಯಿಗೂ ವಯಸ್ಸಾಗಿದೆ. ಅವರನ್ನು ಹೀಗೆ ಬೀದಿಗೆ ಬಿಡುತ್ತಾರಾ ಎಂದು ಪ್ರಶ್ನಿಸಿದರು.

ಸಚಿವ ಸಂಪುಟ ವಿಸ್ತರಣೆ ಹಾಗೂ ಕೆಲವು ಅಸಮಾಧಾನ ಬಿಜೆಪಿ ಶಾಸಕರು ಸಿಎಂ ಮತ್ತು ಪಕ್ಷದ ನಾಯಕರ ವಿರುದ್ದ ಮಾತನಾಡಬಾರದೆಂದು ಪಕ್ಷ ಸೂಚಿಸಿದೆ. ದಾವಣಗೆರೆಗೂ ಸಚಿವ ಸ್ಥಾನ ಸಿಗಬೇಕೆಂಬ ಆಸೆ ಇದೆ. ಸಿಪಿ ಯೋಗಿಶ್ವರ್‌ಗೆ ಸಚಿವ ಸ್ಥಾನ ನೀಡಬೇಕೆಂದು ಸಿಎಂ ಹೇಳಿಕೆ ಅವರ ವಿವೇಚನೆಗೆ ಬಿಟ್ಟದ್ದು ಎಂದರು.

Comments are closed.