
ಚಿಕ್ಕಮಗಳೂರು ;ರಾಜ್ಯದಲ್ಲಿ ಲವ್ ಜಿಹಾದಿಗೆ ಕಾನೂನು ಬಂದೆ ಬರುತ್ತದೆ ಲವ್ ಜಿಹಾದ್ ಎನ್ನುವುದು ಕೇವಲ ಪ್ರೀತಿಯ ಸಂಗತಿಯಲ್ಲ ಇದು ಮತಾಂತರದ ಷಡ್ಯಂತ್ರ, ದೇಶಾಂತರಾದ ಷಡ್ಯಂತ್ರ ಎಂದ ಸಂಸದೆ ಶೋಭಾ ಕರಂದ್ಲಾಜೆ, ಸಿದ್ದರಾಮಯ್ಯ ಇನ್ನೊಮ್ಮೆ ಹುಟ್ಟಿ ಬಂದರೂ ಲವ್ ಜಿಹಾದಿ ಕಾಯ್ದೆಯನ್ನು ನಿಲ್ಲಿಸೋಕೆ ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ಗುಡುಗಿದ್ದಾರೆ.
ಸಿದ್ದರಾಮಯ್ಯ ಕ್ರಾಸ್ ಬ್ರೀಡ್ ಪದ ಬಳಕೆ ಮಾಡಿದ ಕುರಿತು ಕೊಪ್ಪದಲ್ಲಿ ಮಾತನಾಡಿದ ಸಂಸದೆ ಎಷ್ಟೊಂದು ಚೀಪಾಗಿ ಮಾತನಾಡುವ ಸಿದ್ದರಾಮಯ್ಯನವರು ಯಾವ ಕ್ರಾಸ್ ಬಗ್ಗೆ ಮಾತನಾಡಿದ್ದಾರೆ, ಅವರಿಗೆ ಯಾವ ಕ್ರಾಸ್ ಬಗ್ಗೆ ಗೊತ್ತಿದೆ? ಅದರಲ್ಲಿ ಅವರ ಪಾತ್ರವೇನು ? ಕ್ರಾಸ್ ಬಗ್ಗೆ ನನಗೆ ಗೊತ್ತಿಲ್ಲ, ಸಿದ್ದರಾಮಯ್ಯನವರೇ ಉತ್ತರ ನೀಡಬೇಕೆಂದು ಟಾಂಗ್ ನೀಡಿದರು.
Comments are closed.