ಕರ್ನಾಟಕ

ಬಾಬಾ ಅಮ್ಟೆ ಮೊಮ್ಮಗಳು ಡಾ. ಶೀತಲ್ ಅಮ್ಟೆ ಆತ್ಮಹತ್ಯೆ!: ಮಹಾರೋಗಿ ಸೇವಾ ಸಮಿತಿಯ ಅಕ್ರಮಗಳನ್ನು ಬಯಲಿಗೆಳೆದಿದ್ದ ವೈದ್ಯೆ

Pinterest LinkedIn Tumblr


ಚಂದ್ರಾಪುರ: ಸಮಾಜ ಸೇವೆಯಿಂದಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿದ್ದ ಬಾಬಾ ಅಮ್ಟೆ ಅವರ ಮೊಮ್ಮಗಳು ಡಾ. ಶೀತಲ್‌ ವಿಕಾಸ್‌ ಆಮ್ಟೆ ಕಾರಜಿಗಿ ಅವರು ಸೋಮವಾರ (ನ.30) ಚಂದ್ರಾಪುರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಶೀತಲ್‌ ವಿಕಾಸ್‌ ಅವರು ಪ್ರಸ್ತುತ ಆನಂದ ವನದಲ್ಲಿರುವ ‘ಮಹಾರೋಗಿ ಸೇವಾ ಸಮಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಆಗಿದ್ದರು. ಅಲ್ಲದೆ ಹೆಸರಾಂತ ವೈದ್ಯೆ ಎನಿಸಿದ್ದರು. ಆದರೆ, ಸೋಮವಾರ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ, ಕಾರಣ ಏನೆಂಬುದು ತಿಳಿದುಬಂದಿಲ್ಲ.

ವರೋರಾ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸಿದ್ದು, ಶೀತಲ್‌ ವಿಕಾಸ್ ಅವರು ವಿಷದ ಚುಚ್ಚುಮದ್ದನ್ನು ತೆಗೆದುಕೊಂಡಿದ್ದರೆಂದು ವೈದ್ಯರು ಘೋಷಿಸಿರುವುದಾಗಿ ವರದಿಗಳು ತಿಳಿಸಿವೆ.

ಡಾ.ಶೀತಲ್ ಇತ್ತೀಚೆಗೆ ಮಹಾರೋಗಿ ಸೇವಾ ಸಮಿತಿಯ ಅಕ್ರಮಗಳ ಬಗ್ಗೆ ಆರೋಪಿಸಿದ್ದರು. ಟ್ರಸ್ಟ್ ಮ್ಯಾನೇಜ್‌ಮೆಂಟ್ ಮತ್ತು ಕುಟುಂಬವನ್ನು ದೂಷಿಸಿದ್ದರು. ಆರೋಪ ಹೊರಿದ್ದ ವೀಡಿಯೊವನ್ನು ಸಾಮಾಜಿಕ ಮಾಧ್ಯಮಗಳ ವೈಯಕ್ತಿಕ ಖಾತೆಗಳಲ್ಲಿ ಪೋಸ್ಟ್ ಮಾಡಿ, ನಂತರ ಅದನ್ನು ಎರಡು ಗಂಟೆಗಳಲ್ಲಿ ತೆಗೆದುಹಾಕಲಾಗಿತ್ತು.

ಆದರೆ, ಡಾ. ಶೀತಲ್ ಅವರ ತಂದೆ ಡಾ. ವಿಕಾಸ್ ಅಮ್ಟೆ ಮತ್ತು ಅವರ ಸಹೋದರ ಡಾ.ಪ್ರಕಾಶ್ ಅಮ್ಟೆ ನವೆಂಬರ್ 22 ರಂದು ಜಂಟಿ ಹೇಳಿಕೆ ನೀಡಿ, ಶೀತಲ್‌ ಅವರ ಆರೋಪಗಳನ್ನು ನಿರಾಕರಿಸಿದ್ದರು. ನ.24ರಂದು ಬಿಡುಗಡೆ ಮಾಡಿದ್ದ ಪ್ರಕಟಣೆಯಲ್ಲಿ ಡಾ.ವಿಕಾಸ್ ಅಮ್ಟೆ, ಅವರ ಪತ್ನಿ ಡಾ.ಭಾರತಿ, ಡಾ.ಪ್ರಕಾಶ್ ಅಮ್ಟೆ ಮತ್ತು ಅವರ ಪತ್ನಿ ಡಾ.ಮಂದಾಕಿನಿ ಅಮ್ಟೆ ಅವರ ಸಹಿ ಇತ್ತು.

Comments are closed.