ಕರ್ನಾಟಕ

ಆರ್ ಎಸ್ ಎಸ್ ಒಂದು ಜಾತಿ ಸಂಘಟನೆ. ಮೇಲ್ಜಾತಿಯವರನ್ನು ಒಟ್ಟುಗೂಡಿಸುವ ಸಂಘಟನೆ; ಸಿದ್ದರಾಮಯ್ಯ

Pinterest LinkedIn Tumblr


ಬೆಂಗಳೂರು; ದೇಶದಲ್ಲಿ ಕೋಮುವಾದಿಗಳು ಹೆಚ್ಚಾಗುತ್ತಿದ್ದಾರೆ. ಇಡೀ ದೇಶವನ್ನೇ ಆವರಿಸಿಕೊಳ್ಳುತ್ತಿದ್ದಾರೆ. ನಾವು ಜನರನ್ನು ಕನ್ವೀನ್ಸ್ ಮಾಡುವಲ್ಲಿ ವಿಫಲರಾಗಿದ್ದೇವೆ. ಕಾರ್ಯಕರ್ತರನ್ನು ಕನ್ವೀನ್ಸ್ ಮಾಡೋಕೆ ವಿಫಲರಾಗಿದ್ದೇವೋ ಗೊತ್ತಿಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

ಕೆಪಿಸಿಸಿ ಕಚೇರಿಯಲ್ಲಿ ಇಂದಿರಾ ಗಾಂಧಿ ಅವರ ಜನ್ಮ ದಿನೋತ್ಸವದ ಅಂಗವಾಗಿ ಮಾತನಾಡಿದ ಸಿದ್ದರಾಮಯ್ಯ ಅವರು, ಖರ್ಗೆಯವರು ಪಕ್ಷದ ಬಗ್ಗೆ ಮಾತನಾಡಿದ್ದಾರೆ. ತುಂಬಾ ನೊಂದು ಅವರು ಮಾತನಾಡಿದ್ದಾರೆ. ನಾನು ಅವರ ಮಾತಿಗೆ ಸಹಮತ ವ್ಯಕ್ತಪಡಿಸುತ್ತೇನೆ. ಅಂಬೇಡ್ಕರ್ ಸಂವಿಧಾನ ಒಪ್ಪಿಕೊಂಡವರು ನಾವು. ಆದರೆ ಅದಕ್ಕೆ ತದ್ವಿರುದ್ಧ ರಾಜಕಾರಣ ನಡೆಯುತ್ತಿದೆ. ಬಿಜೆಪಿಯವರಿಗೆ ಸಂವಿಧಾನದ ಬಗ್ಗೆ ಗೌರವವಿಲ್ಲ. ಸಂವಿಧಾನ ವಿರೋಧಿಸುತ್ತಲೇ ಬರ್ತಿದ್ದಾರೆ. ಆರ್ ಎಸ್ ಎಸ್ ಒಂದು ಜಾತಿ ಸಂಘಟನೆ. ಮೇಲ್ಜಾತಿಯವರನ್ನು ಒಟ್ಟುಗೂಡಿಸುವ ಸಂಘಟನೆ. ಬಿಜೆಪಿ ಆರ್ ಎಸ್ ಎಸ್ ನ ಒಂದು ಮುಖವಾಡ. ಈಗ ದೇಶದ ಚುಕ್ಕಾಣಿ ಹಿಡಿದಿದೆ. ಅವರನ್ನು ಓಡಿಸದಿದ್ದರೆ ದೇಶ ಛಿದ್ರವಾಗುತ್ತದೆ ಎಂದು ಹರಿಹಾಯ್ದರು.

ಕುಂಬಾರರಿಗೆ ಯಾಕೆ ಪ್ರಾಧಿಕಾರ ಮಾಡಿಲ್ಲ? ತಿಗಳ ಜನಾಂಗದವರಿಗೆ ನೀವು ಯಾಕೆ ಪ್ರಾಧಿಕಾರ ಮಾಡಲಿಲ್ಲ? ಇಂದು ಅವರ ಕಸುಬು ನಶಿಸಿ ಹೋಗ್ತಾಯಿದೆ. ಓಲೈಕೆ ರಾಜಕಾರಣ ಮಾಡೋದಷ್ಟೇ ನಿಮ್ಮ ಕೆಲಸ. ಹಿಂದುತ್ವ ಸ್ಥಾಪನೆಗೆ ಹೊರಟಿದ್ದೀರಾ. ದೇಶ ಎಲ್ಲಾದರೂ ಉಳಿಯೋಕೆ ಸಾಧ್ಯವೇ? ಎಂದು ಪ್ರಶ್ನೆ ಮಾಡಿದರು.

ಕುರುಬರನ್ನು ಎ.ಸ್ಟಿ ಮಾಡಬೇಕು ಅಂತ ಹೊರಟಿದ್ದಾರೆ. ಅದರ ಹಿಂದೆ ಇರೋರು ಯಾರು ಆರ್ ಎಸ್ ಎಸ್. ನಾವು ಎಸ್ಟಿಗೆ ರೆಫರ್ ಮಾಡಿ ಆರು ವರ್ಷವಾಯ್ತು. ಯಾಕೆ ಇಲ್ಲಿಯವರೆಗೆ ಅದನ್ನು ಮಾಡಿಲ್ಲ?. ಶಿರಾದಲ್ಲಿ ಕುಂಚಿಟಿಗರನ್ನು 2 ಎ ಗೆ ಸೇರಿಸ್ತೇವೆ ಅಂದ್ರು. ಅದಕ್ಕೆ ವೈಜ್ಞಾನಿಕ ಕಾರಣ ಬೇಡ್ವಾ? ಸಂವಿಧಾನದಲ್ಲಿ ಏನು ಮಾರ್ಗಸೂಚಿಗಳು ಇದೆ ಗೊತ್ತಾ? ಬಿಜೆಪಿಯವರ ಕ್ರೂರ ಉದ್ದೇಶ ನಾವು ತಿಳಿದುಕೊಳ್ಳಬೇಕು ಎಂದು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ನಮ್ಮಲ್ಲೇ ಕೆಲವರು ಗುಸುಗುಸುಗಳಿದ್ದಾರೆ. ನಮ್ಮಲ್ಲಿ‌ಸ್ಪಷ್ಟತೆ ಇಲ್ಲದಿದ್ದರೆ ಪಕ್ಷ ಕಟ್ಟೋಕೆ ಆಗಲ್ಲ. ಬಹಳ ಮಂದಿಗೆ ಸಿದ್ಧಾಂತಗಳ ಬಗ್ಗೆ ಸ್ಪಷ್ಟತೆ ಇಲ್ಲ. ನಾನು ಹೆಸರನ್ನು ಹೇಳೋದಿಲ್ಲ. ಸುಮ್ಮನೆ ಖುಷಿಗಾಗಿ ಇಲ್ಲಿಗೆ ಬರೋದಿಲ್ಲ. ಕಾರ್ಯಕರ್ತರಲ್ಲಿ ಸ್ಪಷ್ಟತೆ ಇಲ್ಲವಾದರೆ ಪಕ್ಷ ಸಂಘಟನೆ ಕಷ್ಟ. ಅಶೋಕ್ ಭೂ ಸುಧಾರಣೆ ಕಾಯ್ದೆ ಬಗ್ಗೆ ಭಾಷಣ ಮಾಡ್ತಾನೆ. ಭೂ ಸುಧಾರಣೆ ಬಗ್ಗೆ ಏನಾದ್ರೂ ಗೊತ್ತಿದ್ಯಾ? ಎಂದು ಲೇವಡಿ ಮಾಡಿದರು.

Comments are closed.