ಕರ್ನಾಟಕ

ಮಾಜಿ ಮೇಯರ್ ಸಂಪತ್ ರಾಜ್ ಬಂಧನ- ಬಿಜೆಪಿಗರು ಕಾಂಗ್ರೆಸ್ ನಾಯಕರನ್ನು ಟಾರ್ಗೆಟ್ ಮಾಡ್ತಿದ್ದಾರೆ: ಡಿ.ಕೆ.ಶಿ

Pinterest LinkedIn Tumblr

ಬೆಂಗಳೂರು: ಬೆಂಗಳೂರಿನಲ್ಲಿ ಕೆಲ ದಿನಗಳ ಹಿಂದೆ ನಡೆದ ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆ ಪ್ರಕರಣದಲ್ಲಿ ಬಿಬಿಎಂಪಿ ಮಾಜಿ ಮೇಯರ್ ಸಂಪತ್ ರಾಜ್ ಬಂಧನವಾಗಿದ್ದು ಈ ಬಗ್ಗೆ ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸಂಪತ್ ರಾಜ್ ಎಲ್ಲಿಯೂ ಓಡಿ ಹೋಗಿರಲಿಲ್ಲ ಎಂದಿದ್ದಾರೆ.

ಬಿಜೆಪಿಯವರು ಕಾಂಗ್ರೆಸ್ ನಾಯಕರನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ನನ್ನನ್ನು ಸಹ ಟಾರ್ಗೆಟ್ ಮಾಡಿದ್ದು ಈಗ ಸಂಪತ್ ರಾಜ್ ಅವರನ್ನ ಮಾಡುತ್ತಿದ್ದಾರೆ. ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮಾಧ್ಯಮದ ಮುಂದೆ ಮಾತನಾಡುವ ಬದಲು ನನ್ನ ಬಳಿ ಮಾತನಾಡಲಿ ಎಂದು ಡಿಕೆಶಿ ಹೇಳಿದ್ದಾರೆ.

(ಸಂಪತ್ ರಾಜ್)

ಸಂಪತ್ ರಾಜ್ ಎಲ್ಲೂ ಓಡಿಹೋಗಿರಲಿಲ್ಲ, ಅವರ ಆರೋಗ್ಯ ಸರಿಯಿರಲಿಲ್ಲ. ಪೋಲೀಸರು ಯಾವ ಕ್ರಮ ತೆಗೆದುಕೊಂಡಿದ್ದಾರೆ ಗೊತ್ತಿದೆ. ಒಬ್ಬರ ವೈಯುಕ್ತಿಕ ಹೇಳಿಕೆ ಮೇಲೆ ನಾನೇನೂ ಕ್ರಮ ಜರುಗಿಸಲು ಬರುವುದಿಲ್ಲ. ಶಾಸಕ ಅಖಂಡ ಶ್ರೀನಿವಾಸಮೂರ್ತಿ ಬಂದು ನನ್ನ ಬಳಿ ಮಾತನಾಡಲಿ. ಸಂಪತ್ ರಾಜ್ ಓಡಿ ಹೋಗಿದ್ದಾರೆಂದು ಹೇಳಿದ್ದು ಯಾರು? ಕಾನೂನಿಗಿಂತ ಸಂಪತ್ ರಾಜ್, ಡಿಕೆಶಿ ಯಾರೂ ಮೇಲಲ್ಲ. ಬಿಜೆಪಿ ನಾಯಕರು ಕಾನೂನಿನ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಡಿಕೆಶಿ ಆರೋಪಿಸಿದ್ದಾರೆ.

Comments are closed.