ಕರಾವಳಿ

ಕುಂದಾಪುರದ NR’s ನಂದಿನಿ ಹೋಟೆಲ್‌ನಲ್ಲಿ ಅಗ್ನಿ ಅವಘಡ: ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ

Pinterest LinkedIn Tumblr

ಕುಂದಾಪುರ: ನಗರದ ಶಾಸ್ತ್ರಿ ಸರ್ಕಲ್ ಸಮೀಪದಲ್ಲಿರುವ ಎನ್.ಆರ್ಸ್ ನಂದಿನಿ ಸಸ್ಯಹಾರಿ ಹೋಟೆಲ್‌ನಲ್ಲಿ ಮಂಗಳವಾರ ಮಧ್ಯಾಹ್ನ ಆಕಸ್ಮಿಕ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದೆ‌.

ತಕ್ಷಣವೇ ಎಚ್ಚೆತ್ತುಕೊಂಡು ಮುಂಜಾಗೃತಾ ಕ್ರಮ ಕೈಗೊಂಡ ಹೋಟೆಲ್‌ನ ಸಂಬಂದಪಟ್ಟವರು ಗ್ರಾಹಕರನ್ನು ಹೊರಕ್ಕೆ ಕಳಿಸಿದ್ದಾರೆ. ಒಂದಷ್ಟು ಹೊತ್ತು ಹೋಟೆಲ್ ಒಳಗಡೆ ದಟ್ಟ ಹೊಗೆ ಕವಿದಿತ್ತು.

ಈ ಹೋಟೆಲ್ ಇರುವ ವಾಣಿಜ್ಯ ಸಂಕೀರ್ಣದಲ್ಲಿ ಬಟ್ಟೆ ಅಂಗಡಿಗಳು, ಸ್ಟೇಶನರಿ, ಮೆಡಿಕಲ್, ಎಂ.ಆರ್.ಪಿ. ಮದ್ಯ ಮಾರಾಟ ಮಳಿಗೆ ಸೇರಿದಂತೆ ಹಲವು ಅಂಗಡಿಗಳಿದ್ದವು. ತತ್‌ಕ್ಷಣದ ಸಮಯಪ್ರಜ್ಞೆಯಿಂದ ಬಾರೀ ಅನಾಹುತ ತಪ್ಪಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಾರೆ.

ಸ್ಥಳಕ್ಕೆ ಕುಂದಾಪುರ ಅಗ್ನಿಶಾಮಕ ದಳದವರು ಆಗಮಿಸಿದ್ದಾರೆ.

Comments are closed.