ಕರ್ನಾಟಕ

ತುಮಕೂರು: 3ನೇ ವರ್ಷದಲ್ಲೇ ಅತಿ ಬುದ್ಧಿಶಾಲಿ ಮಗು

Pinterest LinkedIn Tumblr


ತುಮಕೂರು: ಆ ಪೋರನಿಗಿನ್ನೂ ಕೇವಲ ಮೂರು ವರ್ಷ. ಈ ಕಂದ ಹೊಸ ದಾಖಲೆಯನ್ನೇ ಬರೆದಿದ್ದಾನೆ. ಸೌರಮಂಡಲ, ಭೂ ಮಂಡಲ, ಗಣ್ಯರು, ವಸ್ತುಗಳು ಹೀಗೆ ಏನೇ ಕೇಳಿದ್ರೂ ತನ್ನ ತೊದಲು ನುಡಿಯಲ್ಲೇ ಪಟಾ ಪಟಾ ಅಂತ ಹೇಳ್ತಾನೆ. ಈ ಪುಟ್ಟ ಪ್ರತಿಭೆ ತನ್ನ 3ನೇ ವರ್ಷದಲ್ಲೇ ಇಂಡಿಯಾ ಬುಕ್ ಆಫ್ ರೆಕಾರ್ಡ್ ಸೇರಿದ್ದಾನೆ.

ಈ ಪೋರನ ಹೆಸರು ಅನ್ವಿಕ್ ದೇವ್ ಮೆಕ್ಲಾರನ್. ಕಲ್ಪತರು ನಾಡು ತುಮಕೂರು ನಗರದ ವಿಜಯಕುಮಾರ್ ಹಾಗೂ ಅನುಷಾ ದಂಪತಿಯ ಮಗನಾದ ಅನ್ವಿಕ್ ದೇವ್ ಮೆಕ್ಲಾರನ್ ಅನ್ನೋ 3 ವರ್ಷದ ಪುಟ್ಟ ಬಾಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್​ನಲ್ಲಿ ಹೊಸದಾಗಿ ಸೇರ್ಪಡೆಯಾಗಿದ್ದಾನೆ. ಅಲ್ಲದೇ ಕೆಲವೇ ಕೆಲವು ಮಕ್ಕಳು ಮಾಡುವಂತಹ ಸಾಧನೆಯನ್ನ ಮಾಡಿ ತುಮಕೂರಿಗೊಂದು ಹಿರಿಮೆಯ ಗರಿ ತಂದಿದ್ದಾನೆ. ಅಪ್ರತಿಮ ನೆನಪಿನ ಶಕ್ತಿ ಈತನಿಗೆ ವರವಾಗಿ ಬಂದಿದೆ.

ಕೊರೋನಾ ಲಾಕ್​ಡೌನ್​ನಲ್ಲಿ ಶಾಲಾ ಮಕ್ಕಳು ಹೊಸದಾಗಿ ಏನು ಕಲಿತಿದ್ದಾರೋ ಗೊತ್ತಿಲ್ಲಾ, ಆದ್ರೇ ಕಲಿತಿರೋದನ್ನ ಮರೆತಿರೋದಂತು ಸತ್ಯ. ಇದೇ ಲಾಕ್​ಡೌನ್ ಅನ್ನ ಸದ್ಭಳಕೆ ಮಾಡಿಕೊಂಡ ಈ ಪೋಷಕರು, ಅನ್ವಿಕ್​ಗೆ ಸಾಕಷ್ಟು ತಯಾರಿ ಮಾಡಿದ್ದಾರೆ. ಈ ಪುಟ್ಟ ಬಾಲಕ ತನ್ನ ಅಪ್ರತಿಮ ನೆನಪಿನ ಶಕ್ತಿ ಹಾಗೂ ಬುದ್ಧಿಶಕ್ತಿಯಿಂದ ಹೇಳಿರುವ ವಿಷಯಗಳು ಭಾರತ ರಾಷ್ಟಗೀತೆ, 3 ಭಾರತೀಯ ರಾಷ್ಟ್ರೀಯ ನಾಯಕರುಗಳು ಹಾಗೂ ಅವರ ಹೇಳಿಕೆಗಳು, ಸೌರವ್ಯೂಹ ಅದರ ಗ್ರಹಗಳು, ಪಂಚೇಂದ್ರಿಯಗಳು ಹಾಗೂ ಅದರ ಕಾರ್ಯಗಳು, ಪ್ರಪಂಚದ ನೂತನ 7 ಅದ್ಭುತಗಳು, 14 ರಾಷ್ಟ್ರೀಯ ಚಿಹ್ನೆಗಳು, ಕನ್ನಡ, ಹಿಂದಿ, ಇಂಗ್ಲಿಷ್ ಅಕ್ಷರಮಾಲೆಗಳು. 17 ವಿರುದ್ಧ ಪದಗಳು 15 ರಾಜ್ಯದ ರಾಜಧಾನಿಗಳು, ಟ್ರಾಫಿಕ್ ಚಿಹ್ನೆಗಳು, 40 ಪ್ರಾಣಿಗಳ ಹೆಸರುಗಳು, 15 ಬಣ್ಣಗಳು, 16 ವಿವಿಧ ವೃತ್ತಿಗಳು, 12ಕಂಪ್ಯೂಟರ್ ಬಿಡಿ ಭಾಗಗಳು, 9 ವ್ಯಾಕರಣ ಚಿಹ್ನೆಗಳನ್ನ ಹೇಳಿದ್ದಾನೆ.

ಮೂಲತಃ ಉಪನ್ಯಾಸಕರುಗಳಾಗಿರುವ ಅನುಷಾ, ವಿಜಯಕುಮಾರ್ ದಂಪತಿ ತಮ್ಮ ಮಗನ ಆಪ್ರತಿಮ ಸಾಧನೆಗೆ ಹರ್ಷ ವ್ಯಕ್ತಪಡಿಸಿದ್ದಾರೆ. ಅಲ್ಲದೇ ನಮ್ಮ ಮಗನನ್ನ ಒಳ್ಳೆಯ ವಿದ್ಯಾವಂತ ಬುದ್ದಿವಂತನನ್ನಾಗಿ ಮಾಡಬೇಕು ಎಂಬುದು ಇವರ ಆಶಯ ಕೂಡ. ಸಮಯದ ಸದ್ಭಳಕೆಯಾದರೆ ಏನೆಲ್ಲಾ ಪ್ರಯೋಜನ ಎನ್ನುವುದಕ್ಕೆ ಅನ್ವಿಕ್ ನಿಜವಾದ ಉದಾಹರಣೆಯೇ ಸರಿ.

Comments are closed.