ಅಂತರಾಷ್ಟ್ರೀಯ

ಈ ದೇಶದಲ್ಲಿ ಸೋಮಾರಿಗಳೇ ಹೀರೋಗಳು!

Pinterest LinkedIn Tumblr


ಬರ್ಲಿನ್: ಜರ್ಮನಿ ಸರ್ಕಾರ ಜಾಹೀರಾತೊಂದರಲ್ಲಿ ಸೋಮಾರಿ ಜನರನ್ನು ವೀರರಂತೆ ಚಿತ್ರಿಸಲಾಗಿದೆ. ಈ ಕುರಿತು 90 ಸೆಕೆಂಡ್ ಗಳ ವಿಡಿಯೋವೊಂದನ್ನು ಆನ್ಲೈನ್ ನಲ್ಲಿ ಜಾರಿಗೊಳಿಸಿದೆ.

ಜಾಹೀರಾತಿನಲ್ಲಿರುವ ವ್ಯಕ್ತಿ, ‘ಇದ್ದಕ್ಕಿದ್ದಂತೆ ಈ ದೇಶದ ಭವಿಷ್ಯ ನಮ್ಮ ಕೈಗೆ ಬಂದಿತು. ನಂತರ ನಾವು ಧೈರ್ಯವನ್ನು ಒಟ್ಟುಗೂಡಿಸಿದ್ದೇವೆ ಮತ್ತು ನಮ್ಮಿಂದ ನಿರೀಕ್ಷಿಸಲ್ಪಟ್ಟದ್ದನ್ನು ಮತ್ತು ಸರಿಯಾದದ್ದನ್ನು ಮಾಡಿದ್ದೇವೆ. ಅಂದರೆ, ನಾವು ಏನನ್ನೂ ಮಾಡಿಲ್ಲ. ” ಮುಂದುವರೆದು ಮಾತನಾಡುವ ಆ ವ್ಯಕ್ತಿ, “ ಹಗಲು ರಾತ್ರಿ, ನಾವು ಮನೆಯಲ್ಲಿಯೇ ಇದ್ದು ಕರೋನಾ ವೈರಸ್ ವಿರುದ್ಧ ಹೋರಾಡುತ್ತಿದ್ದೇವೆ. ಈ ವೇಳೆ ನಮ್ಮ ಮಂಚ ಮತ್ತು ನಮ್ಮ ತಾಳ್ಮೆಯೇ ನಮ್ಮ ಆಯುಧವಾಗಿತ್ತು.” ಎನ್ನುತ್ತಾರೆ.

ಈ ಜಾಹೀರಾತಿನ ಕೊನೆಯ ಭಾಗದಲ್ಲಿ ಅಲ್ಲಿನ ಸರ್ಕಾರ “ಮನೆಯಲ್ಲಿಯೇ ಇದ್ದುಕೊಂಡು ನೀವು ಹಿರೋ ಆಗಬಹುದು” ಎಂಬ ಸಂದೇಶ ನೀಡಿದೆ. ಕೊರೊನಾ ವೈರಸ್ ಪ್ರಕೋಪವನ್ನು ತಡೆಯಲು ಜರ್ಮನಿ ಸರ್ಕಾರ ನವೆಂಬರ್ ತಿಂಗಳಿಂದ ಹೊಸ ನಿರ್ಬಂಧನೆಗಳನ್ನು ವಿಧಿಸಿರುವುದು ಇಲ್ಲಿ ಉಲ್ಲೇಖನೀಯ. ಅಲ್ಲಿ ರೆಸ್ಟೋರೆಂಟ್, ಬಾರ್ ಮತ್ತು ಜಿಮ್ ಗಳನ್ನು ಬಂದ್ ಮಾಡಲಾಗಿದ್ದು, ಜನರು ಒಂದುಗೂಡುವುದರ ಮೇಲೆ ನಿರ್ಬಂಧನೆ ವಿಧಿಸಲಾಗಿದೆ.

Comments are closed.