ಕರ್ನಾಟಕ

ಒಂದೇ ದಿನದಲ್ಲಿ ಚಿನ್ನದ ದರ ಐತಿಹಾಸಿಕ ಇಳಿಕೆ

Pinterest LinkedIn Tumblr


ಬೆಂಗಳೂರು: ಮಂಗಳವಾರ ಆಭರಣ ದರ 10 ಗ್ರಾಂಗೆ 1500 ರೂಪಾಯಿ ಇಳಿಕೆ ಕಂಡಿದೆ. ಈ ಮೂಲಕ 47,100 ರೂಪಾಯಿ ಆಗಿದೆ. ಇನ್ನು, ಶುದ್ಧ ಚಿನ್ನ 10 ಗ್ರಾಂಗೆ 1640 ರೂಪಾಯಿ ಇಳಿಕೆ ಕಂಡಿದ್ದು, 51,380 ರೂಪಾಯಿ ಆಗಿದೆ.

ಕೊರೋನಾ ಆರಂಭವಾದಗಿನಿಂದ ಚಿನ್ನದ ದರ ಗಗನಕ್ಕೇರಿದೆ. 10 ಗ್ರಾಂಗೆ 35 ಸಾವಿರ ರೂಪಾಯಿ ಇದ್ದ ಚಿನ್ನದ ಬೆಲೆ ಇಂದು 50 ಸಾವಿರ ರೂಪಾಯಿ ಸಮೀಪಿಸಿದೆ. ಅನ್​ಲಾಕ್​ ಘೋಷಣೆ ಆದ ನಂತರದಲ್ಲಿ ಚಿನ್ನದ ಆಮದು ಸಮಸ್ಥಿತಿಗೆ ಬರುತ್ತಿದ್ದು, ಚಿನ್ನದ ಬೆಲೆ ನಿಧಾನವಾಗಿ ಕಡಿಮೆ ಆಗಿತ್ತು. ಭಾರತದಲ್ಲಿ ಹಬ್ಬಕ್ಕೆ ಭಾರೀ ಪ್ರಾಮುಖ್ಯತೆ ನೀಡುತ್ತಾರೆ. ಈ ಸಂದರ್ಭದಲ್ಲಿ ಚಿನ್ನದ ಖರೀದಿ ಜೋರಾಗಿರುತ್ತದೆ. ಈಗಲೂ ಅದೇ ರೀತಿ ಆಗಿದೆ. ದೀಪಾವಳಿ ಹಬ್ಬದ ಸಮಯದಲ್ಲಿ ಜನರು ಚಿನ್ನದ ಖರೀದಿಗೆ ಮುಂದಾಗಿದ್ದು, ಚಿನ್ನದ ದರದಲ್ಲಿ ಏರಿಕೆ ಕಂಡಿದೆ. ಕಳೆದ ಒಂಬತ್ತು ದಿನಗಳಿಂದ ಚಿನ್ನದ ಬೆಲೆಯಲ್ಲಿ ಏರಿಕೆ ಕಾಣುತ್ತಲೇ ಇದೆ.

ಕಳೆದ ವಾರ ಚಿನ್ನದ ದರ ಎರಡು ಬಾರಿ ಇಳಿಕೆ ಕಂಡರೆ, ನಾಲ್ಕು ಬಾರಿ ಏರಿಕೆ ಕಂಡಿತ್ತು. ಈ ಮೂಲಕ 870 ರೂಪಾಯಿ ಏರಿಕೆ ಕಂಡಂತಾಗಿತ್ತು.

ಕಳೆದ ವಾರ ಬೆಳ್ಳಿ ದರ ಕೂಡ ಏರಿಕೆ ಕಂಡಿದೆ. ಕೆಜಿ ಬೆಳ್ಳಿಗೆ 5,300 ರೂಪಾಯಿ ಆಗಿದೆ. ಈ ಮೂಲಕ ಬೆಳ್ಳಿ ಬೆಲೆ ಕೆಜಿಗೆ 65400 ರೂಪಾಯಿ ಆಗಿತ್ತು. ಆದರೆ ಮಂಗಳವಾರ ಬೆಳ್ಳಿ ದರದಲ್ಲಿ ಯಾವುದೇ ಬದಲಾವಣೆ ಕಂಡಿಲ್ಲ. ಈ ಮೂಲಕ ಕೆಜಿ ಬೆಳ್ಳಿಗೆ 66,900 ರೂಪಾಯಿ ಆಗಿದೆ.

ಅನೇಕ ವಿಚಾರಗಳು ಚಿನ್ನದ ಬೆಲೆಯನ್ನು ನಿರ್ಧರಿಸುತ್ತವೆ. ಹಣ ದುಬ್ಬರ, ಅಂತಾರಾಷ್ಟ್ರೀಯ ಮಾರುಕಟ್ಟೆ ಬೆಲೆ, ಬಡ್ಡಿ ದರ, ಜ್ಯುವೆಲರಿ ಮಾರುಕಟ್ಟೆ ಮತ್ತು ವ್ಯಾಪಾರ ಯುದ್ಧಗಳು ಚಿನ್ನದ ಬೆಲೆ ಏರಿಳಿತಕ್ಕೆ ನೇರ ಕಾರಣವಾಗುತ್ತವೆ. ಸದ್ಯ ಕೊರೋನಾ ವೈರಸ್​ ಇರುವುದರಿಂದ ಜನರಿಗೆ ಬೇರೆಲ್ಲೂ ಹೂಡಿಕೆ ಮಾಡಲು ಕ್ಷೇತ್ರಗಳು ಸಿಗುತ್ತಿಲ್ಲ. ಹೀಗಾಗಿ, ಚಿನ್ನದ ಮೇಲೆ ಹೂಡಿಕೆ ಮಾಡುತ್ತಿದ್ದಾರೆ. ಇದರಿಂದ ಸಹಜವಾಗಿಯೇ ಚಿನ್ನದ ದರದಲ್ಲಿ ಏರಿಕೆ ಕಂಡಿತ್ತು.

ಮತ್ತೆ ಏರಿಕೆ ಕಾಣಲಿದೆ ಚಿನ್ನ?:
ವಿಶ್ವದ ಆರ್ಥಿಕತೆ ತಲೆಕೆಳೆಗಾಗಿದೆ. ಹೀಗಾಗಿ ಯಾವ ಮಾರುಕಟ್ಟೆಯ ಮೇಲೂ ಖಚಿತವಾಗಿ ಏನನ್ನೂ ಹೇಳಲೂ ಸಾಧ್ಯವಾಗುತ್ತಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಚಿನ್ನದ ದರ ಏರಿಕೆ ಆಗಲಿದೆ ಎಂದು ತಜ್ಞರು ಹೇಳುತ್ತಿದ್ದಾರೆ.

Comments are closed.