ಅಂತರಾಷ್ಟ್ರೀಯ

ಈ ಗ್ರಹದಲ್ಲಿ ಮಿಂಚಿನಿಂದ ಕೂಡಿದ ಭಯಾನಕ ಬಿರುಗಾಳಿ

Pinterest LinkedIn Tumblr


ನವದೆಹಲಿ: ಭೂಮಿಯಂತೆ ಇತರ ಅನೇಕ ಗ್ರಹಗಳಲ್ಲಿ ಚಂಡಮಾರುತಗಳು ಘಟಿಸುತ್ತವೆ. ಮೋಡಗಳು ಸಿಡಿಯುತ್ತವೆ ಮತ್ತು ಸಿಡಿಲು ಬೀಳುತ್ತದೆ. ನಮ್ಮ ಸೌರವ್ಯೂಹದ ಅತಿದೊಡ್ಡ ಗ್ರಹವಾದ ಗುರು ಭಯಾನಕ ಚಂಡಮಾರುತವನ್ನು ಹೊಂದಿದೆ. ಈ ಕುರಿತಾದ ಆಶ್ಚರ್ಯಚಕಿತಗೊಳಿಸುವ ಚಿತ್ರಗಳು ಇದೀಗ ಹೊರಹೊಮ್ಮಿವೆ.

ಯುಎಸ್ ಬಾಹ್ಯಾಕಾಶ ಸಂಸ್ಥೆ ನಾಸಾದ (NASA) ಜುನೋ ಬಾಹ್ಯಾಕಾಶ ನೌಕೆ ಈ ಬಿರುಗಾಳಿಗಳು, ಗುಡುಗು ಮಿಂಚು ಮತ್ತು ತುಂಬಿ ಹರಿಯುವ ಮೋಡಗಳ ಚಿತ್ರಗಳನ್ನು ತೆಗೆದಿದೆ. ಸಾಮಾನ್ಯ ಕ್ಯಾಮೆರಾದ ಹೊರತಾಗಿ, ಇನ್ಫ್ರಾರೆಡ್ ಮತ್ತು ನೇರಳಾತೀತ ಕ್ಯಾಮೆರಾಗಳೊಂದಿಗೆ ಫೋಟೋಗಳನ್ನು ಸಹ ತೆಗೆದುಕೊಳ್ಳಲಾಗುತ್ತದೆ. ಜುನೊದಿಂದ ಪಡೆದ ಛಾಯಾಚಿತ್ರಗಳನ್ನು ಅಧ್ಯಯನ ಮಾಡಿದ ನಂತರ, ಇವು ಎರಡು ರೀತಿಯ ಮಿಂಚುಗಳಿವೆ ಎಂದು ಪತ್ತೆಹಚ್ಚಲಾಗಿದೆ.

ನಾಸಾ ವಿಜ್ಞಾನಿಗಳು ಒಂದು ರೀತಿಯ ಮಿಂಚನ್ನು ಸ್ಪ್ರೈಟ್ (Sprite) ಮತ್ತು ಇನ್ನೊಂದನ್ನು ಎಲ್ವೆಸ್(Elves) ಎಂದು ಹೆಸರಿಸಿದ್ದಾರೆ. ಆದರೆ ಈ ಮಿಂಚುಗಳು ಗ್ರಹದ ಮೇಲ್ಮೈಗೆ ಅಪ್ಪಳಿಸುತ್ತಿಲ್ಲ. ಇವು ಗ್ರಹದ ವಾತಾವರಣದ ಮೇಲೆ ಅಪ್ಪಳಿಸುತ್ತಿವೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು. ಈ ಕಾರಣದಿಂದಾಗಿ, ಮುಂಚು ಅಪ್ಪಳಿಸಿದ ಜಾಗದಲ್ಲಿ ಬೆಳಕು ಗೋಚರಿಸುತ್ತಿದೆ.

ವಾತಾವರಣದಲ್ಲಿರುವ ಸಾರಜನಕ ಕಣಗಳು ಇತರ ಅನಿಲಗಳೊಂದಿಗೆ ಘರ್ಶನೆಗೊಂದು ಮತ್ತು ಈ ರೀತಿಯ ಕ್ರಿಯೆಯನ್ನು ನಿರ್ವಹಿಸುತ್ತಿವೆ ಎಂದು ನಾಸಾ ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ. 2016 ಮತ್ತು 2020 ರ ನಡುವೆ, ಜುನೋ ಬಾಹ್ಯಾಕಾಶ ನೌಕೆ ಗುರು ಗ್ರಹದ ಮೇಲೆ 11 ವೇಗವಾಗಿರುವ ಮತ್ತು ಅತಿ ದೊಡ್ಡಸಿಡಿಲುಗಳ ಬೀಳುವಿಕೆಯನ್ನು ದಾಖಲಿಸಿದೆ. ಈ ಸಿಡಿಲುಗಳು ತೀವ್ರತೆ ಮತ್ತು ಕ್ಷೇತ್ರಫಲಕ್ಕೆ ಅನುಗುಣವಾಗಿ ಗಾತ್ರದಲ್ಲಿ ದೊಡ್ಡದಾಗಿವೆ.

ಈ ಬಿರುಗಾಳಿಗಳು, ಮಿಂಚಿನ ಘಟನೆಗಳು ಮತ್ತು ಮೋಡಗಳ ಕುರಿತಾದ ಸಂಶೋಧನೆಗಳು ಜರ್ನಲ್ ಆಫ್ ಜಿಯೋಫಿಸಿಕಲ್ ಪ್ಲಾನೆಟ್ಸ್ ವರದಿಯಲ್ಲಿ ಪ್ರಕಟಿಸಲಾಗಿದೆ. ನಮ್ಮ ಬಳಿ ಈ ಕುರಿದಾದ ವಿದ್ಯುತ್ ದಾಖಲೆಗಳು ಮತ್ತು ಪುರಾವೆಗಳಿವೆ ಎಂದು ವಿಜ್ಞಾನಿ ರೋಹಿಣಿ ಜಿಲ್ಸ್ ಬರೆದಿದ್ದಾರೆ. ಅದ್ಭುತವಾಗಿರುವ ಈ ಬೆಳಕುಗಳು ಗುರು ಗ್ರಹದ ಮೇಲ್ಮೈ ಮತ್ತು ವಾತಾವರಣದಿಂದ ನೂರಾರು ಕಿಲೋಮೀಟರ್ ದೂರದಿಂದ ಗೋಚರಿಸುತ್ತವೆ ಎಂದು ಅವರು ಹೇಳಿದ್ದಾರೆ.

ಜುನೋ ಬಾಹ್ಯಾಕಾಶ ನೌಕೆ ಈ ಚಿತ್ರಗಳನ್ನು ದೂರದ ಗ್ರಹದಿಂದ ತೆಗೆದುಕೊಂಡಿದೆ. ಅದು ಹತ್ತಿರವಾದಾಗ ನಾವು ಹೆಚ್ಚು ನಿಖರವಾದ ಚಿತ್ರಗಳನ್ನು ಪಡೆಯುತ್ತೇವೆ. ಇದು ನಮಗೆ ಹೆಚ್ಚು ಆಳವಾಗಿ ಅಧ್ಯಯನ ಮಾಡಲು ಅವಕಾಶ ನೀಡಲಿದೆ ಎಂದು ರೋಹಿಣಿ ಜಿಲ್ಸ್ ಹೇಳುತ್ತಾರೆ.

Comments are closed.