ಕರ್ನಾಟಕ

ರಾಜ್ಯದಲ್ಲಿ 2 ತಿಂಗಳ ಅತೀ ಕಡಿಮೆ ಕೊರೋನಾ ಪ್ರಕರಣ ಪತ್ತೆ

Pinterest LinkedIn Tumblr


ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕು ಪ್ರಕರಣ ಇನ್ನಷ್ಟು ಕಡಿಮೆಯಾಗಿದ್ದು ಇಂದು ಬೆಂಗಳೂರಿನಲ್ಲಿ 978 ಪ್ರಕರಣ ಸೇರಿದಂತೆ ರಾಜ್ಯದಲ್ಲಿ 1,963 ಕೊರೋನಾ ಪ್ರಕರಣ ಪತ್ತೆಯಾಗಿದೆ.

ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ 1,963 ಕೊರೋನಾ ವೈರಸ್ ಪ್ರಕರಣಗಳು ಪತ್ತೆಯಾಗಿದ್ದು ಇದರೊಂದಿಗೆ ಸೋಂಕಿತರ ಸಂಖ್ಯೆ 8,48,850ಕ್ಕೆ ಏರಿಕೆಯಾಗಿದೆ.

ಇನ್ನು ರಾಜ್ಯದಲ್ಲಿ ಇಂದು 19 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 11,410ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಇಂದು 2,686 ಮಂದಿ ಆಸ್ಪತ್ಪೆಯಿಂದ ಡಿಸ್ಚಾರ್ಜ್ ಆಗಿದ್ದು, ಗುಣಮುಖರಾದವರ ಸಂಖ್ಯೆ 8,04,485ಕ್ಕೆ ಏರಿಕೆಯಾಗಿದೆ. 32,936 ಮಂದಿ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇಂದು ಬೆಂಗಳೂರು ನಗರವೊಂದರಲ್ಲೆ ಅತಿ ಹೆಚ್ಚು ಅಂದರೆ 978 ಹೊಸ ಪ್ರಕರಣಗಳು ವರದಿಯಾಗಿದ್ದು, ಇದರೊಂದಿಗೆ ಸಿಲಿಕಾನ್ ಸಿಟಿಯ ಸೋಂಕಿತರ ಸಂಖ್ಯೆ 3,50,305ಕ್ಕೆ ಏರಿಕೆಯಾಗಿದೆ. ನಗರದಲ್ಲಿ ಇಂದು 5 ಮಂದಿ ಸಾವನ್ನಪ್ಪಿದ್ದಾರೆ.

ಬಾಗಲಕೋಟೆಯಲ್ಲಿ 22, ಬಳ್ಳಾರಿಯಲ್ಲಿ 37, ಬೆಳಗಾವಿಯಲ್ಲಿ 34, ಬೆಂಗಳೂರು ಗ್ರಾಮಾಂತರದಲ್ಲಿ 93, ಬೀದರ್ ನಲ್ಲಿ 3, ಚಾಮರಾಜನಗರದಲ್ಲಿ 12, ಚಿಕ್ಕಬಳ್ಳಾಪುರದಲ್ಲಿ 56, ಚಿಕ್ಕಮಗಳೂರಿನಲ್ಲಿ 7, ಚಿತ್ರದುರ್ಗದಲ್ಲಿ 69, ದಕ್ಷಿಣ ಕನ್ನಡದಲ್ಲಿ 18, ದಾವಣಗೆರೆಯಲ್ಲಿ 19, ಧಾರವಾಡದಲ್ಲಿ 33, ಗದಗದಲ್ಲಿ 4, ಹಾಸನದಲ್ಲಿ 48, ಹಾವೇರಿಯಲ್ಲಿ 13, ಕಲಬುರಗಿಯಲ್ಲಿ 34, ಕೊಡಗಿನಲ್ಲಿ 14 ಪ್ರಕರಣಗಳು ವರದಿಯಾಗಿವೆ.

ಕೋಲಾರದಲ್ಲಿ 52, ಕೊಪ್ಪಳದಲ್ಲಿ 16, ಮಂಡ್ಯದಲ್ಲಿ 73, ಮೈಸೂರಿನಲ್ಲಿ 95, ರಾಯಚೂರಿನಲ್ಲಿ 20, ರಾಮನಗರದಲ್ಲಿ 3, ಶಿವಮೊಗ್ಗದಲ್ಲಿ 28, ತುಮಕೂರಿನಲ್ಲಿ 65, ಉಡುಪಿಯಲ್ಲಿ 29, ಉತ್ತರಕನ್ನಡದಲ್ಲಿ 47, ವಿಜಯಪುರದಲ್ಲಿ 38, ಯಾದಗಿರಿಯಲ್ಲಿ 3 ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ.

Comments are closed.