ಬೆಂಗಳೂರು: ಬಾರೀ ಕುತೂಹಲ ಕೆರಳಿಸಿರುವ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಿರುವ ಐಎಎಸ್ ಅಧಿಕಾರಿ ದಿವಂಗತ ಡಿ.ಕೆ. ರವಿ ಪತ್ನಿ ಕುಸುಮಾ ಪರ ರವಿ ತಾಯಿ ಗೌರಮ್ಮ ಮತಯಾಚನೆ ನಡೆಸಿ ಅಚ್ಚರಿ ಮೂಡಿಸಿದ್ದಾರೆ.

ಕುಸುಮಾ ಕಾಂಗ್ರೆಸ್ ಅಭ್ಯರ್ಥಿ ಎಂದು ಘೋಷಣೆಯಾದ ಬಳಿಕ ಕುಸುಮಾ ಸ್ಪರ್ಧೆಗೆ ವಿರೋಧ ವ್ಯಕ್ತಪಡಿಸಿದ್ದ ರವಿ ತಾಯಿ, ಸೊಸೆ ತಮ್ಮನ್ನು ಭೇಟಿ ಮಾಡದೇ ನಿರ್ಲಕ್ಷ್ಯ ಮಾಡಿದ್ದು, ಅವಳಿಗೆ ತಮ್ಮ ಮಗನ ಹೆಸರು ಹೇಳಲು ಅರ್ಹತೆಯಿಲ್ಲ. ಈ ಚುನಾವಣೆಯಲ್ಲಿ ತಮ್ಮ ಮಗನ ಹೆಸರು ಹಗೂ ಫೋಟೋ ಬಳಕೆ ಮಾಡಿದರೆ ಸುಮ್ಮನಿರುವುದಿಲ್ಲ ಎಂದು ಹೇಳಿದ್ದರು.
ಆದರೆ ಸದ್ಯದ ಬದಲಾವಣೆಯಲ್ಲಿ ಸೊಸೆ ಪರ ಡಿ.ಕೆ.ರವಿ ತಾಯಿ ಮತಯಾಚಿಸಿ ಅಚ್ಚರಿಪಡಿಸಿದ್ದಾರೆ. ಸೊಸೆಯ ಕಣ್ಣೀರು ನೋಡಿ ಬೇಸರವಾಗುತ್ತಿದೆ. ಆಕೆಯನ್ನು ಮತದಾರರು ಆಶೀರ್ವದಿಸಿ ಎಂದು ಹೇಳುವ ಮೂಲಕ ಸೊಸೆ ಕುಸುಮಾ ಪರ ನಿಂತಿದ್ದಾರೆ.
Comments are closed.