ಕರ್ನಾಟಕ

ಹಣ, ಗೂಂಡಾಗಿರಿಯಿಂದ ಚುನಾವಣೆ ಗೆಲ್ಲಲು ಆಗಲ್ಲ- ಚುನಾವಣಾ ಅಕ್ರಮಕ್ಕೆ ಅನ್ವರ್ಥನಾಮ ಡಿ.ಕೆ ಬ್ರದರ್ಸ್: ಸಂಸದೆ ಶೋಭಾ..!

Pinterest LinkedIn Tumblr

ಬೆಂಗಳೂರು: ರಾಜರಾಜೇಶ್ವರಿ ನಗರ ಉಪಚುನಾವಣೆಯಲ್ಲಿ ಹಣ ಹಾಗೂ ಗೂಂಡಾಗಿರಿ ಶಕ್ತಿ ಉಪಯೋಗಿಸಿ ಉಪಚುನಾವಣೆಯನ್ನು ಅಕ್ರಮದಲ್ಲಿ ಗೆಲ್ಲುವ ಷಡ್ಯಂತ್ರವನ್ನು ಮಾಡುತ್ತಿದ್ದಾರೆ. ಜನತೆಗೆ ಅವರ ದಬ್ಬಾಳಿಕೆ, ಒತ್ತಡಗಳ ಹಾಗೂ ಅಕ್ರಮಗಳ ಅರಿವಿದೆ, ಜನತಂತ್ರ ವ್ಯವಸ್ಥೆಯಲ್ಲಿ ಈ ರೀತಿಯ ಪ್ರಕ್ರಿಯೆಗಳಿಗೆ ಅವಕಾಶವಿಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಅವರು ಶುಕ್ರವಾರ ಬೆಳಗ್ಗೆ, ರಾಜರಾಜೇಶ್ವರಿ ನಗರದ ಉಪಚುನಾವಣೆಯ ಅಂಗವಾಗಿ, ಬೆಂಗಳೂರು ನಗರ ಬಿಜೆಪಿ ಕಾರ್ಯಾಲಯ ದೇಶಪಾಂಡೆ ಭವನದಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದರು.

ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರನ್ನು ಅಕ್ರಮದಿಂದ ಮಣಿಸುವ ಈ ಕುಂತಂತ್ರದ ವಿರುದ್ಧ ಬಿಜೆಪಿ ಚುನಾವಣಾ ಆಯೋಗಕ್ಕೆ ದೂರನ್ನು ನೀಡಿದೆ.

ಸಂಸದ ಡಿ.ಕೆ ಸುರೇಶ್ ಇನ್ನು ಚುನಾವಣಾ ಕೊನೆಗೊಳ್ಳುವ ತನಕ ರಾಜರಾಜೇಶ್ವರಿ ನಗರದಲ್ಲಿ ಇರಬಾರದು ಹಾಗೂ ಸರಿಯಾದ ಪ್ರಜಾಪ್ರಭುತ್ವದ ಹಬ್ಬ ನಡಿಯಬೇಕು, ಅಕ್ರಮ-ದಬ್ಬಾಳಿಕೆಗಳು ಚುನಾವಣೆಯ ಮೇಲೆ ಪ್ರಭಾವ ಬೀರಬಾರದು ಎಂದು ಅವರು ಆಹ್ರಹಸಿದರು‌.

 

Comments are closed.