ಉಡುಪಿ: ಜಿಲ್ಲೆಯ ಕಾಪುವಿನ ಫ್ಲ್ಯಾಟ್ ಒಂದರಲ್ಲಿ ಕಸ ಸಂಗ್ರಹಣೆ ವೇಳೆ ಸಿಕ್ಕ ಚಿನ್ನದ ಬ್ರಾಸ್ ಲೈಟ್ ಸಂಬಂದಪಟ್ಟವರಿಗೆ ನೀಡುವ ಮೂಲಕ ಕಾಪು ಪುರಸಭಾ ಪೌರಕಾರ್ಮಿಕರು ಎಲ್ಲರ ಶ್ಲಾಘನೆಗೆ ಪಾತ್ರರಾಗಿದ್ದಾರೆ.
ಕಾಪು ಮಲ್ಲಾರು ಕೊಪ್ಪಲಂಗಡಿಯ ಅನುಸೂಯ ಎನ್.ಕ್ಲೈವ್ ನಿವಾಸಿ ಮೊಹಮ್ಮದ್ ಸಫ್ವಾನ್ ಬುಧವಾರ ತಮ್ಮ 16 ಗ್ರಾಂ ತೂಕದ ಬ್ರಾಸ್ ಲೈಟ್ ಕಳೆದುಕೊಂಡಿದ್ದರು. ಅದ್ಯೇಗೋ ಕಸದೊಂದಿಗೆ ಸೇರಿದ್ದ ಚಿನ್ನವನ್ನು ಗಮನಿಸಿದ ಪೌರಕಾರ್ಮಿಕರು ಅದನ್ನು ವಾರಿಸುದಾರರಿಗೆ ತಲುಪಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಚಿನ್ನ ವಾಪಾಸ್ ಪಡೆದ ಮಾಲಿಕ ಪೌರಕಾರ್ಮಿಕರಿಗೆ ಅಭಿನಂದಿಸಿದ್ದಾರೆ.