ಕರ್ನಾಟಕ

ಖ್ಯಾತ ಗಾಯಕಿ ಅನನ್ಯ ಭಟ್​ ತಂದೆಯಿಂದ ನಿವೃತ್ತ ಪ್ರೊಫೆಸರ್ ಹತ್ಯೆ ಆರೋಪ: ಬಂಧನ

Pinterest LinkedIn Tumblr


ಬೆಂಗಳೂರು: ನಿವೃತ್ತ ಪ್ರೊಫೆಸರ್ ಒಬ್ಬರ ಹತ್ಯೆ ಪ್ರಕರಣದ ಹಿನ್ನಲೆಯಲ್ಲಿ ಖ್ಯಾತ ಗಾಯಕಿ ಅನನ್ಯ ಭಟ್​ರ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ.

7 ಲಕ್ಷಕ್ಕೆ ಸುಪಾರಿ ನೀಡಿ ನಿವೃತ್ತ ಪ್ರೊಫೆಸರ್ ಪರಶಿವಮೂರ್ತಿ ಕೊಲೆ ಮಾಡಿಸಿದ್ದ ವಿಶ್ವನಾಥ್ ಭಟ್​ರನ್ನೂ ಸೇರಿ ಐವರು ಆರೋಪಿಗಳನ್ನು ಪೊಲೀಸರು ಇಂದು ಬಂಧಿಸಿದ್ದಾರೆ. ಕೊಲೆಗಾಗಿ ಇಬ್ಬರನ್ನು ಇವರು ಬಳಸಿರುವುದಾಗಿ ತಿಳಿದು ಬಂದಿದ್ದು ಸಹ ಶಿಕ್ಷಕ ಪರಶಿವ ಹಾಗೂ ಸ್ನೇಹಿತ್ ಸಿದ್ದರಾಜು ಪ್ರೊಫೆಸರ್ ಪರಶಿವಮೂರ್ತಿಯವರ ಕೊಲೆಗೆ ಸಾಥ್​ ನೀಡಿದ್ದಾರೆ. ನಿರಂಜನ್​ ಹಾಗೂ ನಾಗೇಶ್ ಸುಪಾರಿ ಪಡೆದು ಕೊಲೆ ಮಾಡಿದ ಹಂತಕರಾಗಿದ್ದಾರೆ.

20/09/2020ರಂದು ಮೈಸೂರಿನ ಶಾರದಾ ನಗರದಲ್ಲಿ ಕೊಲೆ ನಡೆದಿದ್ದು ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆಯನ್ನು ನಡೆಸಿದ ಪೊಲೀಸರು ವಿಶ್ವನಾಥ್​ ಭಟ್​ರನ್ನು ಬಂಧಿಸಿದ್ದಾರೆ. ಕೊಲೆಯಾದ ಪರಶಿವಮೂರ್ತಿ ಸಂಸ್ಕೃತ ಪಾಠ ಶಾಲೆಯ ಕಾರ್ಯದರ್ಶಿಯಾಗಿದ್ದು ಪ್ರತಿ ತಿಂಗಳು ಕಮಿಷನ್‌ಗಾಗಿ ಪೀಡಿಸುತ್ತಿದ್ದರೆಂಬ ಆರೋಪವಿದೆ. ಇದೇ ಟಾರ್ಚರ್​ನ ಕಾರಣವಾಗಿ ಕೊಲೆ ನಡೆದಿರುವುದಾಗಿ ತಿಳಿದು ಬಂದಿದೆ. ಪೀಡಿಸುವುದಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದರಿಂದ ಮನನೊಂದ ವಿಶ್ವನಾಥ್ ಭಟ್​ ಕೊಲೆಗೆ ಸುಪಾರಿ ನೀಡಿದ್ದಾರೆ.

ಕೊಲೆಗೆ ಸಹ ಶಿಕ್ಷಕ ಪರಶಿವ ಹಾಗೂ ಸ್ನೇಹಿತ್ ಸಿದ್ದರಾಜು ಸಾಥ್ ನೀಡಿದ್ರು ಎಂದು ತಿಳಿದು ಬಂದಿದೆ. ಸಂಸ್ಕೃತ ಪಾಠ ಶಾಲೆ ಕಾರ್ಯದರ್ಶಿಯಾಗಿದ್ದ ಪರಶಿವಮೂರ್ತಿ, ಕಮಿಷನ್​​ಗಾಗಿ ಪೀಡಿಸುತ್ತಿದ್ದನೆಂಬ ಆರೋಪವಿದೆ. ಇದ್ರಿಂದ ಮನನೊಂದು ಅನನ್ಯಭಟ್ ತಂದೆ ವಿಶ್ವನಾಥ್ ಭಟ್‌ ಪರಶಿವಮೂರ್ತಿ ಕೊಲೆಗೆ ಸುಪಾರಿ ನೀಡಿದ್ರು ಎಂದು ತಿಳಿದು ಬಂದಿದೆ. ಹೀಗಾಗಿ ವಿಶ್ವನಾಥ್ ಭಟ್ ಕೊಲೆಗೆ ಸ್ಕೆಚ್ ಮಾಡೇ ಬಿಟ್ರು. ಸೆಪ್ಟೆಂಬರ್​​​​ 20ರಂದು ಮೈಸೂರಿನ ನಿವೇದಿತಾ ನಗರದಲ್ಲಿ ನಿವೃತ್ತ ಪ್ರಾಂಶುಪಾಲ ಪರಶಿವಮೂರ್ತಿಯ ಹತ್ಯೆಯಾಗಿತ್ತು. ನಿರಂಜನ್, ನಾಗೇಶ್ ಸುಪಾರಿ ಪಡೆದು ಕೊಲೆ ಮಾಡಿದ್ರು. ಕೇಸ್ ದಾಖಲಿಸಿ ತನಿಖೆ ನಡೆಸಿದ್ದ ಸರಸ್ವತಿಪುರಂ ಠಾಣೆ ಪೊಲೀಸರು, ವಿಚಾರಣೆ ಮುಂದುವರೆಸಿದ್ದಾರೆ. ಇನ್ನು, 2 ವರ್ಷಗಳಿಂದ ವಿಶ್ವನಾಥ್ ಭಟ್ ಪತ್ನಿ, ಮಗಳನ್ನು ಬಿಟ್ಟು ಬೇರೆ ವಾಸವಿದ್ದಾರೆ ಎಂದು ತಿಳಿದು ಬಂದಿದೆ.

Comments are closed.