ಕರ್ನಾಟಕ

12ನೇ ತರಗತಿವರೆಗೂ ಶೇ. 30 ರಷ್ಟು ಪಠ್ಯ ಕಡಿತ

Pinterest LinkedIn Tumblr


ಬೆಂಗಳೂರು: ರಾಜ್ಯ ಸರ್ಕಾರವು 1 ರಿಂದ 12 ನೇ ತರಗತಿವರೆಗೆ ಶೇ. 30 ರಷ್ಟು ಪಠ್ಯ ವಸ್ತುವನ್ನು ಕಡಿತ ಮಾಡಿದೆ. ಅದರಂತೆ ಪದವಿಪೂರ್ವ ಶಿಕ್ಷಣ ಇಲಾಖೆಯು ದ್ವಿತೀಯ ಪಿ.ಯು.ಸಿ. ವಿಜ್ಞಾನ ವಿಭಾಗದ ಶೇ. 30 ರಷ್ಟು ಪಠ್ಯ ಕಡಿತ ಮಾಡಿದೆ.

ಕೊರೋನಾ ಹಿನ್ನೆಲೆಯಲ್ಲಿ 2020-21 ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳು ಆರಂಭವಾಗದಿರುವ ಹಿನ್ನೆಲೆಯಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆಯು ಯು ಟೂಬ್‌ನಲ್ಲಿ ಫ್ರಿ ರೆಕಾರ್ಡಿಂಗ್ ವಿಡೀಯೋ ತರಗತಿಗಳನ್ನು ಪ್ರಾರಂಭಿಸಿದೆ.

ಕರ್ನಾಟಕ ಸಂಗೀತ ವಿಷಯಕ್ಕೆ ಸಂಬಂಧಿಸಿದಂತೆ ಕಳೆದ ಎರಡು ವರ್ಷಗಳಿಂದ ಯಾವುದೇ ವಿದ್ಯಾರ್ಥಿ ದಾಖಲಾಗದಿರುವ ಹಿನ್ನೆಲೆಯಲ್ಲಿ ಅದನ್ನು ಈ ಪ್ರಕ್ರಿಯೆಯಿಂದ ಈ ವಿಷಯವನ್ನು ಕೈಬಿಡಲಾಗಿದೆ.

ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಮಂಡಳಿಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

Comments are closed.