ಬೆಂಗಳೂರು: ಈರುಳ್ಳಿ ಬೆಳೆಯುವ ದೇಶದ ಹಲವು ಕಡೆ ಭಾರೀ ಮಳೆ ಆಗುತ್ತಿದ್ದು ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಈರುಳ್ಳಿ ಬೆಳೆ ನೆಲಕಚ್ಚಿದೆ. ಹೀಗಾಗಿ ಈರುಳ್ಳಿ ಬೆಲೆ ಗಗನಕ್ಕೇರಲು ಆರಂಭವಾಗಿದೆ. ಮುಂದಿನ ದಿನಗಳಲ್ಲಿ 100ರಿಂದ 150 ರೂ. ದಾಟಲಿದೆ ಎಂದು ಅಂದಾಜಿಸಲಾಗಿದೆ.
ಈಗಾಗಲೇ ಕರ್ನಾಟಕದ ಬಹುತೇಕ ಭಾಗದಲ್ಲಿ ಈರುಳ್ಳಿ ಬೆಲೆ 60 ರೂಪಾಯಿ ಗಡಿ ದಾಟಿದ್ದು, ಕೆಲವೇ ದಿನಗಳಲ್ಲಿ ಈ ಬೆಲೆ 100ರ ಗಡಿ ದಾಟಿದೆ ಎನ್ನಲಾಗುತ್ತಿದೆ. ಮಂಗಳೂರಿನ ಎಪಿಎಂಸಿಯಲ್ಲಿ ಸಣ್ಣ ಈರುಳ್ಳಿ ಬೆಲೆ 60 ರೂಪಾಯಿ ಇದ್ದರೆ, ದೊಡ್ಡ ಈರುಳ್ಳಿ ಬೆಲೆ 85 ರೂಪಾಯಿ ದಾಟಿದೆ. ಮಂಗಳೂರಿನಲ್ಲೂ ಕೆಲವೇ ದಿನಗಳಲ್ಲಿ ಈರುಳ್ಳಿಯ ದರ ಹೆಚ್ಚಲಿದೆ ಎಂಬುದು ಮಾರುಕಟ್ಟೆ ಪಂಡಿತರ ಮಾತು.
ಈರುಳ್ಳಿ ಕೊಯ್ಲಿಗೆ ಸಿದ್ಧಗೊಳ್ಳುತ್ತಿದೆ. ಈ ವೇಳೆ ಧಾರಾಕಾರವಾಗಿ ಮಳೆ ಆಗುತ್ತಿರುವುದರಿಂದ ಬೆಳೆ ಹಾನಿಯಾಗಿದೆ. ಎಕರೆಗೆ ಸರಾಸರಿ 250 ಚೀಲ ಈರುಳ್ಳಿ ಬೆಳೆ ಬರುತ್ತಿತ್ತು. ಆದರೆ, ಇದು ಈಗ 70 ಚೀಲಗಳಿಗೆ ಇಳಿಕೆ ಆಗಿದೆ. ಹೀಗಾಗಿ ಪೂರೈಕೆ ಕಡಿಮೆ ಆಗಿ ಬೇಡಿಕೆ ಹೆಚ್ಚಾಗಿರುವುದರಿಂದ ಸಹಜವಾಗಿಯೇ ಈರುಳ್ಳಿ ಬೆಲೆಯಲ್ಲಿ ಏರಿಕೆ ಕಂಡಿದೆ.
100ರ ಗಡಿ ದಾಟದಲಿದೆ ಈರುಳ್ಳಿ:
ಬೇಡಿಕೆ ಹೆಚ್ಚಿ ಪೂರೈಕೆ ಕಡಿಮೆ ಆದರೆ ಸಹಜವಾಗಿಯೇ ಈರುಳ್ಳಿ ಬೆಲೆ ಏರಿಕೆ ಆಗಿದೆ. ಮುಂದಿನ ದಿನಗಳಲ್ಲಿ ಈರುಳ್ಳಿ ಬೆಲೆ 100ರಿಂದ 150 ರೂಪಾಯಿ ಆಗಲಿದೆ ಎನ್ನುತ್ತಾರೆ ಈರುಳ್ಳಿ ವರ್ತಕರು.