ಕರ್ನಾಟಕ

ಎಸೆಸೆಲ್ಸಿ, ಪಿಯುಸಿ ಪರೀಕ್ಷೆ ಕುರಿತು ಏನೂ ಚರ್ಚೆಯಾಗುತ್ತಿದೆ ಗೊತ್ತಾ?

Pinterest LinkedIn Tumblr


ಬೆಂಗಳೂರು: ಈ ಶೈಕ್ಷಣಿಕ ವರ್ಷದಲ್ಲಿ ಎಸೆಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆ ಕುರಿತಂತೆ ಇನ್ನಷ್ಟೇ ನಿರ್ಧಾರವಾಗಬೇಕಿದೆ.

ಈಗಾಗಲೇ 6 ತಿಂಗಳಾಗುತ್ತಿದ್ದು, ಉಳಿದ ನಾಲ್ಕು ತಿಂಗಳಲ್ಲಿ ಪಠ್ಯಕ್ರಮ ಪೂರ್ಣಗೊಳಿಸಬೇಕಿದೆ. ಹಾಗಾಗಿ ಪರೀಕ್ಷೆ ನಡೆಸುವುದು ತುಸು ಕಷ್ಟ. ಇದನ್ನು ಪುಷ್ಟೀಕರಿಸುವಂತೆ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯೂ ಎಸೆಸೆಲ್ಸಿ ಪರೀಕ್ಷೆ ಕುರಿತು ದಸರಾ ರಜೆಯ ಬಳಿಕವೇ ತೀರ್ಮಾನ ಕೈಗೊಳ್ಳಲು ನಿರ್ಧರಿಸಿದೆ.

ಪ್ರಸ್ತುತ ಅಕ್ಟೋಬರ್‌ 30ರ ವರೆಗೆ ರಾಜ್ಯ ಸರಕಾರ ಶಾಲೆಗಳಿಗೆ ದಸರಾ ರಜೆ ಇದೆ. ಪಿಯುಸಿ ವಿದ್ಯಾರ್ಥಿಗಳಿಗೆ ಯೂ-ಟ್ಯೂಬ್‌ ಮೂಲಕ ಪೂರ್ವ ಮುದ್ರಿತ ತರಗತಿಗಳನ್ನು ನಡೆಸಲಾಗುತ್ತಿದೆ. ಆದರೆ, ಗ್ರಾಮೀಣ ವಿದ್ಯಾರ್ಥಿಗಳಿಗೆ ಇದು ತಲುಪುತ್ತಿಲ್ಲ.

ಪಠ್ಯಕಡಿತ ನಿರ್ಧಾರವೂ ಅತಂತ್ರ
ರಾಜ್ಯ ಸರಕಾರವು ಶೈಕ್ಷಣಿಕ ದಿನಗಳ ಆಧಾರದಲ್ಲಿ ಶೇ.30ರಷ್ಟು ಪಠ್ಯ ಕಡಿತ ಮಾಡಿತ್ತು. ವಿವಾದಕ್ಕೆ ಒಳಗಾದ ಹಿನ್ನೆಲೆ ಯಲ್ಲಿ ಅದನ್ನು ವಾಪಸ್‌ ಪಡೆಯಲಾಗಿತ್ತು. ಈಗ ಶೇ.50ರಷ್ಟು ಪಠ್ಯ ಮಾತ್ರ ಇರಬೇಕು ಎಂಬ ಆಗ್ರಹ ಶಿಕ್ಷಕರಿಂದ ಕೇಳಿ ಬರುತ್ತಿದೆ.

ವಿದ್ಯಾಗಮವೂ ಸ್ಥಗಿತ
ಈಗ ವಿದ್ಯಾಗಮವೂ ಈಗ ತಾತ್ಕಾಲಿಕ ವಾಗಿ ಸ್ಥಗಿತಗೊಂಡಿದೆ. ಹೀಗಾಗಿ ಎಸೆಸೆಲ್ಸಿ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವುದು ಶಿಕ್ಷಕರು ಸವಾಲಾಗಿದೆ ಎಂದು ಪ್ರೌಢಶಾಲಾ ಮುಖ್ಯ ಶಿಕ್ಷಕರೊಬ್ಬರು ಹೇಳಿದ್ದಾರೆ. ಪಿಯುಸಿ ವಿಜ್ಞಾನ ವಿದ್ಯಾರ್ಥಿಗಳಿಗೆ ಲ್ಯಾಬ್‌ ಇಲ್ಲದೇ ಕಲಿಕೆ ಪರಿಪೂರ್ಣವಾಗು ವುದಿಲ್ಲ. ಇದು ತೀವ್ರ ಸಮಸ್ಯೆ ತಂದೊಡ್ಡಿದೆ. ಕೆಲವು ಖಾಸಗಿ ಪಿಯು ಕಾಲೇಜಿನಲ್ಲಿ ಲ್ಯಾಬ್‌ಗಳು ತೆರೆದಿವೆ. ಆದರೆ ಸರಕಾರಿ ಕಾಲೇಜಿನ ಲ್ಯಾಬ್‌ಗ ಹೋಗಲು ಸಾಧ್ಯವಾಗುತ್ತಿಲ್ಲ ಎಂದು ದ್ವಿತೀಯ ಪಿಯುಸಿ ವಿಜ್ಞಾನ ವಿದ್ಯಾರ್ಥಿನಿಯೋರ್ವರು ಹೇಳಿದ್ದಾರೆ.

ಎಸೆಸೆಲ್ಸಿ ಪರೀಕ್ಷೆ ಸಿದ್ಧತೆಗೆ ಸಂಬಂಧಿಸಿ ಯಾವುದೇ ಚರ್ಚೆ ಆಗಿಲ್ಲ. ದಸರಾ ರಜೆ ಮುಗಿದ ಬಳಿಕ ಈ ಬಗ್ಗೆ ಚರ್ಚಿಸಿ, ರೂಪುರೇಷೆಗಳನ್ನು ಸಿದ್ಧಪಡಿಸಿ ಅನುಷ್ಠಾನ ಮಾಡಲಿದ್ದೇವೆ. ಪಠ್ಯಕಡಿತ ಅನಿವಾರ್ಯವಾಗಿದೆ. ತರಗತಿ ಆರಂಭದ ಬಳಿಕ ಸಿಗಬಹುದಾದ ಕಲಿಕಾ ದಿನಗಳ ಆಧಾರದಲ್ಲಿ ಕಾರ್ಯ ರೂಪಿಸುತ್ತೇವೆ.
– ವಿ.ಸುಮಂಗಳಾ, ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ, ನಿರ್ದೇಶಕಿ

ವಾಟ್ಸಾಪ್‌ ಮತ್ತು ಆನ್‌ಲೈನ್‌ನಲ್ಲಿ ಬೋಧನೆ ಮಾಡುತ್ತಿದ್ದೇವೆ. ವಿದ್ಯಾಗಮಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದೆವು. ಆದರೆ, ಹಿಂದಿನ ವರ್ಷಗಳಲ್ಲಿ ನೀಡುತ್ತಿದ್ದಷ್ಟು ಪರಿ ಣಾಮಕಾರಿ ಬೋಧನೆ ಈ ಬಾರಿ ಆಗಿಲ್ಲ.
– ಮಂಜುನಾಥ್‌, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ

ಪಿಯುಸಿ ತರಗತಿಗಳನ್ನು ನ.1ರಿಂದ ಆರಂಭಿಸಿದರೂ ಬೋಧನೆಗೆ ಸಿದ್ಧರಿದ್ದೇವೆ. ಆದರೆ, ನಮ್ಮನ್ನು ಕೊರೊನಾ ವಾರಿಯರ್ ಎಂದು ಪರಿಗಣಿಸಬೇಕು. ಕೊರೊನಾ ದಿಂದ ಏನೇ ಅವಘಡ ಸಂಭವಿಸಿದರೂ ಸರಕಾರದಿಂದ ಪರಿಹಾರ ಸಿಗು ವಂತಾಗಬೇಕು. ಇಲ್ಲವಾದರೆ, ಆನ್‌ಲೈನ್‌ ಮೂಲಕವೇ ಬೋಧನೆ ಮುಂದು ವರಿಯುತ್ತದೆ.
– ಎ.ಎಚ್‌.ನಿಂಗೇಗೌಡ, ಅಧ್ಯಕ್ಷ, ಪಿಯು ಉಪನ್ಯಾಸಕರ ಸಂಘ

Comments are closed.