
ಕನಕಪುರ: ಕೊರೋನಾದಿಂದಾಗಿ ಜನ ಜೀವನ ಅಸ್ತವ್ಯಸ್ತವಾಗಿದೆ. ಇನ್ನೊಂದು ಕಡೆ ಅರಣ್ಯ ತೊರೆದ ಪ್ರಾಣಿಗಳೆಲ್ಲಾ ನಾಡಿನತ್ತ ಮುಖಮಾಡುತ್ತಿರುವ ಘಟನೆಗಳು ವರದಿಯಾಗುತ್ತಿವೆ.
ಪ್ರಾಣಿಗಳೂ ಸಹ ಇನ್ನೇನ್ ಮಾಡ್ತವೆ ಹೇಳಿ.. ಕಾಡಿನಲ್ಲಿ ಆಹಾರ ಸಿಗದಿದ್ದಾಗ, ತಮ್ಮ ಹೊಟ್ಟೆ ತುಂಬಿಸಿಕೊಳ್ಳಲು ನಾಡಿನತ್ತ ಬರಲೇ ಬೇಕಾಗುತ್ತದೆ. ಆದ್ರೆ ಇದ್ರಿಂದಾಗಿ ಜನರು ಪ್ರತಿದಿನ ತಮ್ಮ ಜೀವವನ್ನು ಕೈಯಲ್ಲಿ ಇಟ್ಟುಕೊಂಡು ಬದುಕು ನಡೆಸುವಂತಾಗಿದೆ.
ಕಾಡು ಬಿಟ್ಟ ಚಿರತೆ ಊರಿಗೆ ಬಂದಿದ್ದನ್ನು ನೀವೆಲ್ಲಾ ನೋಡಿದ್ದೀರಿ. ಆದ್ರೆ ಮನೆಗೆ ಚಿರತೆ ಎಂಟ್ರಿ ಕೊಟ್ಟಿರುವ ಅಪರೂಪದ ದೃಶ್ಯ ರಾಮನಗರ ಜಿಲ್ಲೆಯ ಕನಕಪುರ ಪಟ್ಟಣದಲ್ಲಿ ನಡೆದಿದ್ದು. ರಾಜಣ್ಣ ಎಂಬುವವರ ಮನೆಗೆ ಬಂದ ಚಿರತೆಯ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
Comments are closed.