ಕರ್ನಾಟಕ

ಸ್ಯಾಂಡಲ್ ವುಡ್ ಚಿತ್ರ ನಿರ್ಮಾಪಕ ವಿಜಯ್ ಕುಮಾರ್ ಕೊರೊನಾದಿಂದ ನಿಧನ

Pinterest LinkedIn Tumblr


ಬೆಂಗಳೂರು: ಹಿರಿಯ ಚಲನಚಿತ್ರ ನಿರ್ಮಾಪಕ ವಿಜಯ್ ಕುಮಾರ್(70) ಅವರು ಇಂದು ಕೊರೋನಾಗೆ ಬಲಿಯಾಗಿದ್ದಾರೆ.

ವಿಜಯ್ ಕುಮಾರ್ ಅವರಿಗೆ 70 ವರ್ಷ ವಯಸ್ಸಾಗಿತ್ತು. ಕಳೆದ ನಾಲ್ಕು ದಿನಗಳಿಂದ ವಸಂತ ನಗರದ ಮಹಾವೀರ್ ಜೈನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ.

ಸ್ಯಾಂಡಲ್‍ವುಡ್‍ನ ಹಿಟ್ ಸಿನಿಮಾ ನಿರ್ಮಾಪಕರಾಗಿದ್ದ ವಿಜಯ್ ಕುಮಾರ್, ಸಾಹಸ ಸಿಂಹ ವಿಷ್ಣುವರ್ಧನ್ ಆಪ್ತರಾಗಿದ್ದರು. ಸಿಂಹಾದ್ರಿಯ ಸಿಂಹ, ಲಯನ್ ಜಗಪತಿ ರಾವ್ ಸಿನಿಮಾ ನಿರ್ಮಾಣ ಮಾಡಿದ್ದರು. ವಿಷ್ಣುವರ್ಧನ್ ಅವರ ಸಾಕಷ್ಟು ಸಿನಿಮಾಗಳನ್ನು ವಿಜಯ್ ಕುಮಾರ್ ಅವರೇ ನಿರ್ಮಾಣ ಮಾಡಿದ್ದರು.

Comments are closed.