ಕರ್ನಾಟಕ

ದಸರಾ ಸಿದ್ಧತೆ ನಡುವೆ ರೋಹಿಣಿ ಸಿಂಧೂರಿ ಮೈಸೂರು ಜಿಲ್ಲಾಧಿಕಾರಿಯಾಗಿ ವರ್ಗಾವಣೆ

Pinterest LinkedIn Tumblr

ಮೈಸೂರು: ವಿಶ್ವವಿಖ್ಯಾತ ದಸರಾಗೆ ಅರಮನೆ ನಗರಿ ಸಿದ್ದಗೊಳ್ಳುತ್ತಿರುವ ವೇಳೆ ನೂತನ ಜಿಲ್ಲಾಧಿಕಾರಿಯಾಗಿ ರೋಹಿಣಿ ಸಿಂಧೂರಿಗೆ ಜವಾಬ್ದಾರಿ ಮಾಡಲಾಗಿದೆ.

ಕಳೆದ ಒಂದು ತಿಂಗಳ ಹಿಂದಷ್ಟೇ ಜಿಲ್ಲೆಗೆ ಆಗಮಿಸಿದ್ದ ಜಿಲ್ಲಾಧಿಕಾರಿ ಶರತ್​ ಕುಮಾರ್​ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶಿಸಿರುವುದು ಇದಕ್ಕೆ ಒಂದು ಮಹತ್ವವಿದೆ.

ಇದರ ಜೊತೆಗೆ ಬೃಹತ್​ ಬೆಂಗಳೂರು ವಿಶೇಷ ಆಯುಕ್ತರಾಗಿ(ಆರೋಗ್ಯ ಮತ್ತು ಐಟಿ) ಪಿ ರಾಜೇಂದ್ರ ಚೋಳನ್​, ಬೃಹತ್​ ಬೆಂಗಳೂರು ವಿಶೇಷ ಆಯುಕ್ತರಾಗಿ (ಎಸ್ಟೇಟ್​) ಜೆ ಮಂಜುನಾಥ್​, ಬೆಂಗಳೂರು ಸ್ಮಾರ್ಟ್​ ಸಿಟಿ ಲಿಮಿಟೆಡ್​ಗೆ ನಿರ್ವಹಣಾ ನಿರ್ದೇಶಕರಾಗಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಅವರ ವರ್ಗಾವಣೆ ಮಾಡಲಾಗಿದೆ.

ಹಾಗೇ ಕರ್ನಾಟಕ ಸಿಲ್ಕ್​ ನಿರ್ವಹಣಾ ಮಂಡಳಿಗೆ ನಿರ್ವಹಣಾ​ ನಿರ್ದೇಶಕರಾಗಿ ಎಂಆರ್​ ರವಿ ಹಾಗೂ ಪಂಚಾಯತ್​ ರಾಜ್​ ನಿರ್ದೇಶಕರಾಗಿ ಪಿ ಶಿವಶಂಕರ್​ ಅವರನ್ನು ವರ್ಗಾವಣೆ ಮಾಡಲಾಗಿದೆ .

2009ರ ಬ್ಯಾಚ್​ ಐಎಎಸ್​ ಅಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಖಡಕ್​ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದಾರೆ. ಈ ಹಿಂದೆ ಹಾಸನ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಅವರನ್ನು ವರ್ಗಾವಣೆ ಮಾಡಿ ಸಿದ್ದರಾಮಯ್ಯ ಸರ್ಕಾರ ಆದೇಶ ನೀಡಿತ್ತು. ಈ ವರ್ಗಾವಣೆ ಆದೇಶವನ್ನು ಪ್ರಶ್ನಿಸಿ ರೋಹಿಣಿ ಸಿಂಧೂರಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿಯನ್ನು ರಾಜ್ಯ ಹೈಕೋರ್ಟ್ ಇತ್ಯರ್ಥಪಡಿಸಿ, ಹಾಸನ ಜಿಲ್ಲಾಧಿಕಾರಿಯಾಗಿ ಮುಂದುವರಿಯುವಂತೆ ಆದೇಶಿಸಿತ್ತು.

Comments are closed.