ಕರ್ನಾಟಕ

ಉದ್ಯೋಗವಿದ್ದರೆ ತಿಳಿಸಿ ಎಂದು ಫೇಸ್​ಬುಕ್ ನಲ್ಲಿ​ ಪೋಸ್ಟ್ ಹಾಕಿದ್ದ ಯುವತಿ ಮೇಲೆ ಸಾ#ಮೂಹಿಕ ಅ#ತ್ಯಾಚಾರ

Pinterest LinkedIn Tumblr


ಬೆಂಗಳೂರು: ಯುವತಿಯೊಬ್ಬಳು ಫೇಸ್​ಬುಕ್​ನಲ್ಲಿ ಉದ್ಯೋಗವಿದ್ದರೆ ತಿಳಿಸಿ ಎಂಬ ಪೋಸ್ಟ್ ನೊಂದಿಗೆ ಮೊಬೈಲ್ ನಂಬರ್ ಹಾಕಿದ್ದನ್ನೇ ದುರುಪಯೋಗ ಪಡಿಸಿಕೊಂಡ ದು#ಷ್ಕರ್ಮಿಗಳು ಕೆಲಸ ಕೊಡುವ ಭರವಸೆ ನೀಡಿ ಸಾ#ಮೂಹಿಕ ಅ#ತ್ಯಾಚಾರವೆಸಗಿದ ಘಟನೆ ನಡೆದಿದೆ.

ಈ ಘಟನೆ ಸಂಬಂಧ ನಾಲ್ವರನ್ನು ಸೋಲದೇವನಹಳ್ಳಿ ಪೊ#ಲೀಸರು ಬಂ#ಧಿಸಿದ್ದಾರೆ. ಪಶ್ಚಿಮ ಬಂಗಾಳ ಮೂಲದ 24 ವರ್ಷದ ಯುವತಿ ಕೊಟ್ಟ ದೂ#ರಿನ ಮೇರೆಗೆ ಪ್ರ#ಕರಣ ದಾಖಲಿಸಿ, ಕೃತ್ಯ ಎಸಗಿದ ಆ#ರೋಪಿಗಳಾದ ಉತ್ತರಪ್ರದೇಶ ಮೂಲದ ರಾಜ (38), ಬಲರಾಮ್ (28), ಸೆಬಾಸ್ಟಿನ್ (24) ಮತ್ತು ಜಿತೇಂದ್ರ (26) ಅವರನ್ನು ಬಂ#ಧಿಸಲಾಗಿದೆ ಎಂದು ಪೊ#ಲೀಸರು ತಿಳಿಸಿದ್ದಾರೆ.

ಯುವತಿ ಲಾಕ್​ಡೌನ್ ವೇಳೆ ಕೆಲಸ ಹೋಗಿತ್ತು. ಜೀವನೋಪಾಯಕ್ಕೆ ಸಂಕಷ್ಟ ಎದುರಾಗಿದ್ದು, ಕೆಲಸಕ್ಕಾಗಿ ಹುಡುಕಾಟ ನಡೆಸಿ ಎಲ್ಲಿಯೂ ಸಿಗದ ಹಿನ್ನೆಲೆಯಲ್ಲಿ ತನ್ನ ಫೇಸ್​ಬುಕ್ ಖಾತೆಯಲ್ಲೇ ‘ಕೆಲಸ ಇದ್ದರೆ ತಿಳಿಸುವಂತೆ’ ಬರೆದುಕೊಂಡು, ಫೋನ್ ನಂಬರ್ ಸಹಿತ ಪೋಸ್ಟ್ ಹಾಕಿದ್ದಳು. ಇದನ್ನು ದು#ರುಪಯೋಗಪಡಿಸಿಕೊಂಡು ಈ ನಾಲ್ವರು ಈ ಕೃತ್ಯವೆಸಗಿದ್ದಾರೆ ಎಂದು ಪೊ#ಲೀಸರು ತಿಳಿಸಿದ್ದಾರೆ.

ಬಳಿಕ ‘ನಮ್ಮ 100’ಗೆ ಕರೆ ಮಾಡಿ, ದೂ#ರು ಮುಟ್ಟಿಸಿದ್ದಳು. ಸ್ಥಳಕ್ಕೆ ಧಾವಿಸಿದ್ದ ಹೊಯ್ಸಳ ಪೊ#ಲೀಸರು, ಯುವತಿಯನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆಕೆ ಕೊಟ್ಟ ಹೇಳಿಕೆ ಮೇರೆಗೆ ಪ್ರ#ಕರಣ ದಾಖಲಿಸಿ ತ#ನಿಖೆ ನಡೆಸಿ ಆ#ರೋಪಿಗಳನ್ನು ಬಂ#ಧಿಸಲಾಗಿದೆ. ಉತ್ತರ ಭಾರತ ಮೂಲದವರಾದ ಆ#ರೋಪಿಗಳು ನಗರದಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದರು ಎಂಬುದು ಗೊತ್ತಾಗಿದೆ ಎಂದು ಪೊ#ಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Comments are closed.