ಕರ್ನಾಟಕ

ಇವರಿಬ್ಬರಿಗೆ ಮತ್ತೆ ಮೂರು ದಿನ ಜೈಲೂಟವೇ ಗತಿ!

Pinterest LinkedIn Tumblr

ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ, ಸಂಜನಾ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ಸೋಮವಾರದಂದು ಎನ್.ಡಿ.ಪಿ.ಎಸ್ ವಿಶೇಷ ನ್ಯಾಯಾಲಯವು ಸೆಪ್ಟೆಂಬರ್ 24ಕ್ಕೆ ಮುಂದೂಡಿದೆ.

ರಾಗಿಣಿ ಮತ್ತು ಸಂಜನಾರ ನ್ಯಾಯಾಂಗ ಬಂಧನದ ಅವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಆರೋಪಿಗಳ ಜಾಮೀನು ಅರ್ಜಿ ವಿಚಾರಣೆಯನ್ನು ಕೋರ್ಟ್ ಮುಂದೂಡಿದ್ದರಿಂದ ನಟಿಯರಿಬ್ಬರಿಗೂ ಮುಂದಿನ ಮೂರು ದಿನ ಜೈಲು ವಾಸ ಕನ್ಫರ್ಮ್ ಆಗಿದೆ.

ರಾಗಿಣಿ ಜಾಮೀನು ಅರ್ಜಿಗೆ ಸರ್ಕಾರದ ಪರ ಅಭಿಯೋಜಕರು ಆಕ್ಷೇಪ ವ್ಯಕ್ತಪಡಿಸಿ, ಕಳೆದ 5 ವರ್ಷಗಳಿಂದ ಆಕೆಗೆ ಹಲವರ ಪರಿಚಯವಿದ್ದು, ಜಾಮೀನು ಪಡೆದು ಹೊರಬಂದಲ್ಲಿ ಅವರನ್ನೆಲ್ಲ ಎಚ್ಚರಿಸುವ ಸಾಧ್ಯತೆಯಿದೆ ಎಂದು ವಾದ ಮಂಡಿಸಿದರು. ರಾಗಿಣಿ ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿರುವುದಕ್ಕೆ ನಮಗೆ ಸಾಕಷ್ಟು ಸಾಕ್ಷಗಳಿವೆ ಸುಮಾರು 20 ವರ್ಷ ಶಿಕ್ಷೆಗೊಳಗಾಗುವ ಅಪರಾಧವನ್ನು ಅವರು ಎಸಗಿದ್ದಾರೆ ಸಿಸಿಬಿ ಪರ ವಾದ ಮಂಡಿಸಿದ ಸರ್ಕಾರೀ ವಿಶೇಷ ವಕೀಲರು ಹಲವಾರು ವಿಷಯಗಳನ್ನು ನ್ಯಾಯಾಧೀಶರ ಗಮನಕ್ಕೆ ತಂದಿದ್ದರು ಎನ್ನಲಾಗಿದೆ.

Comments are closed.