ಬೆಂಗಳೂರು: ‘ಪ್ರಿಯ ಹುಡುಗಿಯರೇ, ನಿಮ್ಮ ಪ್ರೀತಿಯನ್ನು ಸಾಬೀತು ಮಾಡಲು ನಿಮ್ಮ ಬಟ್ಟೆಗಳನ್ನು ಎಂದಿಗೂ ಬಿಚ್ಚಬೇಕಾಗಿಲ್ಲ. ಮದುವೆಗೂ ಮುನ್ನ ಡೇಟಿಂಗ್ ಹೋಗುವುದು ಸರಿ. ಆದರೆ ಮಂಚಕ್ಕೆ ಹೋಗುವುದು ಸರಿಯಲ್ಲ. ನಿಮಗಾಗಿ ಸೇಫ್ಟಿ ಪ್ಯಾಡ್‍ಗಳನ್ನು ಖರೀದಿಸಬಹುದಾದ ಹುಡುಗನನ್ನು ಪಡೆಯಿರಿ, ಕಾಂಡೋಮ್ ಕೊಳ್ಳುವವನಲ್ಲ’ ಎಂದು ಕನ್ನಡದ ಧಾರವಾಹಿ ನಟಿ ಕಾವ್ಯಗೌಡ ಹೇಳಿದ್ದಾರೆ.

ನಟಿ ಕಾವ್ಯ ಗೌಡ ಅವರು, ಮಹಿಳೆಯರ ಮೇಲಿನ ದೌರ್ಜನ್ಯ ಕುರಿತು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದು ‘ನಿಮಗಾಗಿ ಸೇಫ್ಟಿ ಪ್ಯಾಡ್ ಖರೀದಿಸಬಹುದಾದ ಹುಡುಗನನ್ನು ಪಡೆಯಿರಿ, ಆದರೆ ಕಾಂಡೋಮ್ ಕೊಳ್ಳುವವನಲ್ಲ ಎಂದು ಹೇಳಿದ್ದಾರೆ.
ಅವರು ಬರೆದಿದ್ದೇನು?
‘ನಿಮ್ಮನ್ನು ಹೋಟೆಲ್‍ಗಳಿಗೆ ಕರೆದುಕೊಂಡು ಹೋಗದೆ ತನ್ನ ಮನೆಗೆ ಕರೆದುಕೊಂಡು ಹೋಗುವ ಹುಡುಗನನ್ನು ಪಡೆಯಿರಿ. ನಿಮ್ಮ ಮಾಸಿಕ ಋತುಸ್ರಾವ ನೋವಿನ ಬಗ್ಗೆ ಕೇಳುವ ಹುಡುಗನನ್ನು ಪಡೆಯಿರಿ. ನಿಮ್ಮ ಬೆತ್ತಲೆಯನ್ನು ಕೇಳುವವನಲ್ಲ. ನಿಮ್ಮ ಮನಸ್ಸು ಮತ್ತು ಹೃದಯವನ್ನು ಅರ್ಥ ಮಾಡಿಕೊಳ್ಳುವ ಹುಡುಗನನ್ನು ಪಡೆಯಿರಿ ಬದಲಾಗಿ ನಿಮ್ಮ ದೇಹವನಲ್ಲ’ ಎಂದು ಕಾವ್ಯ ಬರೆದುಕೊಂಡಿದ್ದಾರೆ.

https://www.instagram.com/p/CE8KB0snzdp/?igshid=16pc22p06eimm
ಪ್ರೀತಿಯ ಅತ್ಯುತ್ತಮ ಅಭಿವ್ಯಕ್ತಿಗಳಲ್ಲಿ ಗೌರವ ಕೂಡ ಒಂದಾಗಿದ್ದುಓರ್ವ ಅರ್ಹ ಪುರುಷ ಎಂದಿಗೂ ಮಹಿಳೆಯನ್ನು ನೋಯಿಸುವುದಿಲ್ಲ. ಮಹಿಳೆ ಎಂದರೆ ಕೇವಲ ನಿಮಗೆ ಅಡುಗೆ ಮಾಡಲು ಹಾಗೂ ನಿಮ್ಮ ಬಟ್ಟೆ ತೊಳೆಯುವ ಗೃಹಿಣಿ ಮಾತ್ರವಲ್ಲ. ಆಕೆ ನಿಮ್ಮ ಮನೆಯಲ್ಲಿ ಇಡೀ ಕುಟುಂಬವನ್ನು ನೋಡಿಕೊಳ್ಳುತ್ತಾ ಎಲ್ಲ ಜವಾಬ್ದಾರಿಯನ್ನು ನಿಭಾಯಿಸುತ್ತಾಳೆ. ಅಂತಹ ಮಹಿಳೆಯರಿಗೆ ಗೌರವ ತೋರಿಸುವುದು ದೊಡ್ಡ ಉಡುಗೊರೆಗಳಲ್ಲಿ ಒಂದಾಗಿದೆ…ಓಂ ಸಾಯಿ ರಾಮ್ ಎಂದು ನಟಿ ಕಾವ್ಯ ಗೌಡ ಮಹಿಳೆಯರ ಬಗ್ಗೆ ಹೇಳಿದ್ದಾರೆ.
Comments are closed.