ಬೆಂಗಳೂರು: ಅಂತಾರಾಷ್ಟ್ರೀಯ ಡ್ರಗ್ ಪೆಡ್ಲರ್ ಜತೆಗೆ ವೈಭವ್ ಜೈನ್ ಸಂಪರ್ಕ ಇರಿಸಿಕೊಂಡಿದ್ದ. ಇತ್ತ ಖುದ್ದು ಚಿನ್ನದ ವ್ಯಾಪಾರ ಮಾಡುತ್ತಿದ್ದ ಆತನಿಗೆ 2018ರಲ್ಲಿ ಪ್ರತಿಷ್ಠಿತ ಪಾರ್ಟಿಯೊಂದರಲ್ಲಿ ರವಿಶಂಕರ್ ಹಾಗೂ ನಟಿ ರಾಗಿಣಿ ಪರಿಚಯವಾಗಿತ್ತು.
ರವಿಶಂಕರ್ ಮತ್ತು ವೈಭವ್ ಸ್ನೇಹ ಬೆಳೆಯುತ್ತಿದ್ದಂತೆ ವೈಭವ್ ನಡೆಸುತ್ತಿದ್ದ ವ್ಯವಹಾರ ರವಿಶಂಕರ್‌ಗೆ ತಿಳಿಯಿತು. ವೈಭವ್ ಜೈನ್‌ನ ಸ್ನೇಹಿತರಾದ ಅರುಣ್, ವಿನಯ್, ಪ್ರಶಾಂತ್ ರಾಂಕ ಮೂಲಕ ಡ್ರಗ್ ದಂಧೆ ನಡೆಸಲಾಗುತ್ತಿತ್ತು ಎಂದು ಹೇಳಲಾಗಿದೆ.ಮಾದಕ ವಸ್ತು ಜಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ವೈಭವ್ ಜೈನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ .
ಮಾದಕ ವಸ್ತು ಮಾರಾಟದಲ್ಲಿ ತೊಡಗಿದ್ದ ಪ್ರತೀಕ್ ಶೆಟ್ಟಿ ಎಂಬಾತನನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದರು. ಈಗ ಬೆಂಗಳೂರಿನ ಚಿನ್ನದ ವ್ಯಾಪಾರಿಯ ಮಗನಾಗಿರುವ ವೈಭವ್ ಜೈನ್, ಬಂಧಿಸಿದ್ದಾರೆ. ವೈಭವ್ ಜೈನ್ ಬಗ್ಗೆ ಬಂಧಿತ ಆರೋಪಿ ರವಿಶಂಕರ್ ಮಾಹಿತಿ ನೀಡಿದ್ದ. ಆದರೆ ವೈಭವ್‌ಗೆ ಕೊರೊನಾ ವೈರಸ್ ಪಾಸಿಟಿವ್ ಬಂದಿದ್ದರಿಂದ ಆತ ಕ್ವಾರೆಂಟೈನ್‌ನಲ್ಲಿದ್ದು ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿಸಿದ್ದ. ಈಗ ಗುಣಮುಖನಾಗಿರುವ ಆತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
Comments are closed.