ಕರ್ನಾಟಕ

ಕೋಟ್ಯಂತರ ರೂ.ಮೌಲ್ಯದ ಗಾಂಜಾ ಪತ್ತೆ ಪ್ರಕರಣ: ಸರ್ಕಲ್ ಇನ್ಸ್‌ಪೆಕ್ಟರ್ ಸೇರಿ ಐವರು ಪೊಲೀಸರು ಸಸ್ಪೆಂಡ್

Pinterest LinkedIn Tumblr

ಬೆಂಗಳೂರು : ಕುರಿ ಫಾರ್ಮ್‌ನಲ್ಲಿ ಕೋಟ್ಯಂತರ ರೂಪಾಯಿ ‌ಮೌಲ್ಯದ ಗಾಂಜಾ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಳಗಿ ಸಿಪಿಐ ಸೇರಿ ಐವರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ.

ಕಾಳಗಿ ಸಿಪಿಐ ಭೋಜರಾಜ ರಾಠೋಡ್, ಪಿಎಸ್‌ಐ ಬಸವರಾಜ್ ಕೋಟೆ, ಎಎಸ್‌ಐ ನೀಲಕಂಠಪ್ಪ ಹೆಬ್ಬಾಳ, ಪೇದೆಗಳಾದ ಅನಿಲ್ ಭಂಡಾರಿ, ಶರಣಪ್ಪ ಎಂಬುವರನ್ನು ಅಮಾನತುಗೊಳಿಸಿ ಎಸ್ ಪಿ ಡಾ.ಸಿಮಿ ಮರಿಯಂ ಜಾರ್ಜ್ ಆದೇಶ ಹೊರಡಿಸಿದ್ದಾರೆ.

ಇತ್ತೀಚಿಗೆ ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ತಾಂಡಾದಲ್ಲಿ ಲಕ್ಷ್ಮಣ ನಾಯಕ ಎಂಬವರ ಕುರಿ ಫಾರ್ಮ್‌ನಲ್ಲಿ ಕೋಟ್ಯಂತರ ರೂಪಾಯಿ ‌ಮೌಲ್ಯದ 1,200 ಕೆಜಿ ಗಾಂಜಾವನ್ನು ಬೆಂಗಳೂರು ಪೊಲೀಸರು ಪತ್ತೆ ಹಚ್ಚಿ ವಶಪಡಿಸಿಕೊಂಡಿದ್ದರು.

ಪ್ರಮುಖ ಆರೋಪಿ ಚಂದ್ರಕಾಂತ್ ಎಂಬುವನನ್ನು ಬೆಂಗಳೂರು ಪೊಲೀಸರು ಹಿಡಿದುಕೊಂಡು ಹೋಗಿದ್ದರು. ಗಾಂಜಾ ಪತ್ತೆಯಾದ ಕುರಿ ಫಾರ್ಮ್ ಕಾಳಗಿ ಪೊಲೀಸ್ ಠಾಣೆಯಿಂದ ಕೇವಲ ಒಂದೂವರೆ ಕಿ.ಮೀ. ದೂರ ಇದ್ದರೂ ಇಷ್ಟು ದೊಡ್ಡ ಜಾಲ ಸ್ಥಳೀಯ ಪೊಲೀಸರ ಗಮನಕ್ಕೆ ಬಂದಿರಲಿಲ್ಲ. ಬೆಂಗಳೂರಿಂದ ಪೊಲೀಸರು ಜಿಲ್ಲೆಗೆ ಬಂದು ಕಾರ್ಯಾಚರಣೆ ನಡೆಸಿ ಕ್ವಿಂಟಾಲ್ ಗಟ್ಟಲೆ ಗಾಂಜಾ ವಶಪಡಿಸಿಕೊಂಡು ಹೋಗಿದ್ದು ಜಿಲ್ಲೆಯ ಪೊಲೀಸರ ಮೇಲೆ ಅನುಮಾನ ಮೂಡುವಂತಾಗಿದೆ.

Comments are closed.