ಪ್ರಮುಖ ವರದಿಗಳು

ಪಾತಕಿ ದಾವೂದ್ ಇಬ್ರಾಹಿಂ ಮನೆ ಕೆಡವಲು ಧೈರ್ಯ ಇಲ್ಲದ ಸರ್ಕಾರ ಕಂಗನಾ ಹಿಂದೆ ಬಿದ್ದಿದೆ : ಮಾಜಿ ಸಿಎಂ ಫಡ್ನವೀಸ್ ಆರೋಪ

Pinterest LinkedIn Tumblr

ಮುಂಬಾಯಿ : ಮುಂಬಾಯಿಯಲ್ಲಿರುವ ಮಾಫಿಯಾ ಡಾನ್‌ ದಾವೂದ್‌ ಇಬ್ರಾಹಿಂ ಮನೆಯನ್ನು ಇದುವರೆಗೆ ನೆಲಸಮಗೊಳಿಸಲು ಸಾಧ್ಯವಾಗದ ಮಹಾರಾಷ್ಟ್ರ ಸರ್ಕಾರಕ್ಕೆ ನಟಿ ಕಂಗನಾ ರಾವತ್‌ ಕಚೇರಿ ಕೆಡವಲು ಏನು ನೈತಿಕತೆ ಇದೆ ಎಂದು ಮಾಜಿ ಸಿಎಂ ದೇವೇಂದ್ರ ಫಡ್ನವೀಸ್‌ ಅವರು ಉದ್ಧವ್‌ ಠಾಕ್ರೆ ವಿರುದ್ಧ ಕಿಡಿಕಾರಿದ್ದಾರೆ.

ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಫಡ್ನವಿಸ್ ಅವರು, ಭೇಂಡಿ ಬಜಾರ್‌ ನಲ್ಲಿರುವ ಭೂಗತ ಪಾತಕಿ ದಾವೂದ್‌ ಮನೆಯನ್ನು ನೆಲಸಮ ಮಾಡುವ ಆದೇಶದ ಬಳಿಕವೂ, ಇದಕ್ಕಾಗಿ ಸಾಕಷ್ಟು ಮಾನವಶಕ್ತಿ ಇಲ್ಲ ಎಂದು ನೀವು ಅಫಿಡವಿಟ್‌ ಸಲ್ಲಿಸಿದ್ದೀರಿ. ಆದರೆ ಕಂಗನಾ ಅವರ ಕಟ್ಟಡವನ್ನು ನೆಲಸಮಗೊಳಿಸಲು ನಿಮಗೆ ಎಲ್ಲಿಂದ ಕಾರ್ಮಿಕರು ಸಿಕ್ಕಿದ್ದಾರೆ ಎಂದು ಉದ್ಧವ್‌ ಠಾಕ್ರೆ ಅವರನ್ನು ನೇರವಾಗಿ ಪ್ರಶ್ನಿಸಿದ್ದಾರೆ.

ಮಹಾರಾಷ್ಟ್ರ ಸರಕಾರವು ಕಂಗನಾ ವಿರುದ್ಧ ಹೋರಾಡುವ ಬದಲು ಕೋವಿಡ್ ವಿರುದ್ಧ ಹೋರಾಡಿದ್ದರೆ ಇಷ್ಟು ಹೊತ್ತಿಗೆ ಕೊರೋನಾ ಸೋಂಕು ಹತೋಟಿಗೆ ಬರುತ್ತಿತ್ತು ಎಂದು ಸರ್ಕಾರವನ್ನು ಟೀಕಿಸಿರುವ ಫಡ್ನವೀಸ್‌ ಅವರು, ನಟಿ ಕಂಗನಾ ಹೇಳಿಕೆ ದೊಡ್ಡ ವಿಷಯವೇ ಅಲ್ಲ, ಆದರೆ ಮಹಾ ಸರ್ಕಾರ ಅದನ್ನು ದೊಡ್ಡ ವಿಷಯವನ್ನಾಗಿ ಬಿಂಬಿಸುತ್ತಿದೆ ಎಂದು ಆರೋಪಿಸದ್ದಾರೆ.

Comments are closed.