ಕರ್ನಾಟಕ

ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಗಂಗಾವತಿ ತಹಶೀಲ್ದಾರ್‌ ಕಚೇರಿಯ ಸರ್ವೇ ಮೇಲ್ವಿಚಾರಕ

Pinterest LinkedIn Tumblr


ಕೊಪ್ಪಳ: ಸರ್ಕಾರಿ ಅಧಿಕಾರಿಯೋರ್ವ ಲಂಚ ಸ್ವೀಕರಿಸುವಾಗ ಎಸಿಬಿ ತಂಡ ರೆಡ್‌ ಹ್ಯಾಂಡ್‌ ಹಿಡಿದಿರುವ ಘಟನೆ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನಲ್ಲಿ ನಡೆದಿದೆ. ಬಂಧಿತ ಅಧಿಕಾರಿಯನ್ನು ಗಂಗಾಧರ ತೇಜಪ್ಪ ಎಂದು ಗುರುತಿಸಲಾಗಿದೆ.

ತಾಯಿಯ ಆಸ್ತಿಯ 11ಬಿ ನಕ್ಷೆ ನೀಡಲು ಗಂಗಾವತಿ ತಾಲೂಕಿನ ಹೆಬ್ಬಾಳ ಕ್ಯಾಂಪ್‌ನ ರಾಜು.ಪಿ. ಅವರಿಂದ 4 ಸಾವಿರ ಲಂಚ ಪಡೆಯುತ್ತಿದ್ದ ಗಂಗಾವತಿ ತಹಶೀಲ್ದಾರ್‌ ಕಚೇರಿಯ ಸರ್ವೇ ಮೇಲ್ವಿಚಾರಕ ಗಂಗಾಧರ ತೇಜಪ್ಪ ಅವರನ್ನು ಎಸಿಬಿ ತಂಡ ರೆಡ್ ಹ್ಯಾಂಡ್ ಆಗಿ ಹಿಡಿದಿದೆ.

ಲಂಚದ ಮೊತ್ತವನ್ನು ಎಜಿಬಿ ಗಂಗಾಧರ ಅವರಿಂದ ಪಡೆಯಲಾಗಿದ್ದು, ಸದ್ಯ ವಿಚಾರಣೆ ನಡೆಸಲಾಗುತ್ತಿದೆ. ಬಳ್ಳಾರಿಯ ಎಸಿಬಿ ಎಸ್ಪಿ ಗುರುನಾಥ ಮತ್ತೂರು ಮಾರ್ಗದರ್ಶನದಲ್ಲಿ ಕೊಪ್ಪಳ ಎಸಿಬಿ ಡಿವೈಎಸ್ಪಿ ಆರ್.ಎಸ್. ಉಜ್ಜನಕೊಪ್ಪ ನೇತೃತ್ವದಲ್ಲಿ ಎಸಿಬಿ ಪೊಲೀಸ್ ಇನ್ಸ್‌ಪೆಕ್ಟರ್‌ ಎಸ್.ಎಸ್.ಬೀಳಗಿ ಹಾಗೂ ಕೊಪ್ಪಳ ಎಸಿಬಿ ಕಚೇರಿ ಸಿಬ್ಬಂದಿ ಸಿದ್ದಯ್ಯ, ಶಿವಾನಂದ್ ಆನಂದ್ ಬಸ್ತಿ, ರಮೇಶ್, ಕಲ್ಲೇಶಗೌಡ್, ರಂಗನಾಥ್, ಬಸವರಾಜ್, ಯಮುನಾ ನಾಯಕ್ ದಾಳಿ ನಡೆಸಿದ್ದರು.

Comments are closed.